ಶಿವಮೊಗ್ಗ ಬಿಟ್ಟು ಹೋಗಲಾರದಷ್ಟು ಪ್ರಭಾವಿ ಈಶ್ವರಪ್ಪ: ಆಯನೂರು ಮಂಜುನಾಥ್‌

By Govindaraj S  |  First Published Apr 4, 2023, 1:00 AM IST

ಶಿವಮೊಗ್ಗ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿರುವ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ತಮ್ಮ ಪರಿಷತ್‌ ಸ್ಥಾನಕ್ಕೆ ರಾಜಿನಾಮೆ ನೀಡುವುದರ ಜೊತೆಗೆ ಪಕ್ಷದಿಂದ ಹೊರಹೋಗುವ ತೀರ್ಮಾನಕ್ಕೆ ಬಂದಿದ್ದಾರೆ. 


ಶಿವಮೊಗ್ಗ (ಏ.04): ಶಿವಮೊಗ್ಗ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನಕ್ಕೆ ಬಂದಿರುವ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌ ತಮ್ಮ ಪರಿಷತ್‌ ಸ್ಥಾನಕ್ಕೆ ರಾಜಿನಾಮೆ ನೀಡುವುದರ ಜೊತೆಗೆ ಪಕ್ಷದಿಂದ ಹೊರಹೋಗುವ ತೀರ್ಮಾನಕ್ಕೆ ಬಂದಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ನನ್ನ ಕೊರಳಲ್ಲಿ ಬಿಜೆಪಿ ತಾಳಿ ಇದೆ, ಅದನ್ನು ಬಿಚ್ಚಿಟ್ಟು ಬರುತ್ತೇನೆ ಎಂದರು. 

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಬಗೆಗಾಗಲೀ ಅಥವಾ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬಗೆಗಾಗಲೀ ಯಾವುದೇ ಆರೋಪ ಮಾಡದೇ, ಕೇವಲ ಮಾಜಿ ಸಚಿವ ಈಶ್ವರಪ್ಪ ಅವರನ್ನು ಮಾತ್ರ ಟಾರ್ಗೆಟ್‌ ಮಾಡಿಕೊಂಡು, ಈಶ್ವರಪ್ಪ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಹೇಳುತ್ತಾ ಕೆಲವೊಮ್ಮೆ ನೇರವಾಗಿ ಮತ್ತು ಇನ್ನು ಕೆಲವೊಮ್ಮೆ ಪರೋಕ್ಷವಾಗಿ ಹರಿಹಾಯುತ್ತಲೇ ಮಾತನಾಡಿದರು. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಆ ಪಕ್ಷದಿಂದ ಟಿಕೆಟ್‌ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹಾಗೆಂದು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನನ್ನ ಸ್ಪರ್ಧೆ ಸ್ಪಷ್ಟ. ಆದರೆ, ಪಕ್ಷೇತರ ಅಥವಾ ಬೇರೆ ಬೇರಾವುದೋ ಪಕ್ಷದಿಂದ ಸ್ಪರ್ಧಿಸುವ ಕುರಿತು ಸ್ಪಷ್ಟಉತ್ತರ ನೀಡಲೇ ಇಲ್ಲ.

Tap to resize

Latest Videos

ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್

ಈಶ್ವರಪ್ಪ ಅವರು ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿ ಪತ್ರಕರ್ತರೊಬ್ಬರಿಗೆ ನಿನ್ನನ್ನೇ ಕೇರ್‌ ಮಾಡಲ್ಲ. ಅವನದೇನು ಲೆಕ್ಕ? ಎಂದು ನನ್ನ ವಿರುದ್ಧವೇ ಏಕವಚನದಲ್ಲಿ ಮಾತನಾಡಿದ್ದಾರೆ. ಯಡಿಯೂರಪ್ಪ ಅವರನ್ನೇ ತುಚ್ಚವಾಗಿ ಕಂಡಿದ್ದ ಈಶ್ವರಪ್ಪ ಅವರಿಗೆ ನಾನು ಯಾವ ಲೆಕ್ಕನೂ ಅಲ್ಲ. ಏಕವಚನ ಅವರ ಶಿಕ್ಷಣಮಟ್ಟವನ್ನು ಸೂಚಿಸುತ್ತದೆ. ಅವರ ವಿವೇಚನೆಯ ಲೆಕ್ಕ ತೋರಿಸುತ್ತದೆ. ಅವರಿಗೆ ನಾಲಿಗೆ ಮೇಲೆ ಹಿಡಿತ ಇಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ. ಆದರೆ ಅವರ ಹೇಳಿಕೆಯನ್ನು ಸವಾಲಾಗಿ ಸ್ವೀಕಾರ ಮಾಡಿದ್ದೇನೆ. ನನ್ನ ವಿರುದ್ಧ ಅವರಾಗಲಿ, ಅವರ ಮಗನಾಗಲಿ ಸ್ಪರ್ಧೆ ಮಾಡಲಿ. ಆಗ ನನ್ನ ಮತ್ತು ಅವರ ಲೆಕ್ಕ ಯಾವುದು ಎಂದು ಅವರ ಬಳಿ ಇರುವ ಕೌಂಟಿಂಗ್‌ ಮೆಷಿನ್‌ನಲ್ಲಿಯೇ ಎಣಿಸಿಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಪಕ್ಷದ ಬಗ್ಗೆ, ಅಲ್ಲಿರುವ ಕಾರ್ಯಕರ್ತರ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ಆದರೆ, ಇಲ್ಲಿರುವ ಕೆಲ ನಾಯಕರ ನಡೆ ಬಗ್ಗೆ ಅಸಮಾಧಾನ ಇದೆ ಎಂದರು.

ಶಿವಮೊಗ್ಗ ಬಿಟ್ಟು ಹೋಗಲಾರದಷ್ಟು ಪ್ರಭಾವಿ ಈಶ್ವರಪ್ಪ!: ಈಶ್ವರಪ್ಪ ಅವರು ರಾಜ್ಯ ರಾಜಕಾರಣದಲ್ಲಿ ತುಂಬಾ ಪ್ರಭಾವಶಾಲಿಗಳು. ಎಷ್ಟರಮಟ್ಟಿಗೆ ಎಂದರೆ ಅವರು ಶಿವಮೊಗ್ಗವನ್ನು ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಲಾಗದಷ್ಟು ಪ್ರಭಾವಿಗಳು. ಅವರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬಂದಿದೆ. ಪಕ್ಷದಲ್ಲಿದ್ದಾಗ ಯಡಿಯೂರಪ್ಪ ಅವರಿಗೆ ಎಷ್ಟುಅವಮಾನ ಮಾಡಬೇಕೋ ಅಷ್ಟುಮಾಡಿದ್ದಾರೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಮಂತ್ರಿಯಾಗಿದ್ದ ಈಶ್ವರಪ್ಪ ಒಂದು ದಿನವೂ ಹೆಲಿಪ್ಯಾಡ್‌ಗೆ ಬಂದು ಸ್ವಾಗತಿಸಲಿಲ್ಲ. ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿಲ್ಲ. ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ನಾನಾಗಿದ್ದರೆ ನೇಣು ಹಾಕಿಕೊಳ್ಳುತ್ತಿದ್ದೆ ಎಂದಿದ್ದರು. ಆದರೆ ಅವರ ಮೇಲೆ ಆರೋಪ ಬಂದಾಗ ಯಾಕೆ ನೇಣು ಹಾಕಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಈಗ ನಿರ್ಲಜ್ಜೆಯಿಂದ ಸಂಕೋಚ ಬಿಟ್ಟು ಈ ಬಾರಿ ತಮ್ಮ ಮಗನಿಗೆ ಟಿಕೆಟ್‌ ಕೇಳಿದ್ದಾರೆ. 2013 ಚುನಾವಣೆಯಲ್ಲಿ ನಿಮ್ಮನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ರುದ್ರೇಗೌಡರಿಗೆ ಟಿಕೆಟ್‌ ಇಲ್ಲ. ಪಕ್ಷಕ್ಕಾಗಿ ದುಡಿದ ಗಿರೀಶ್‌ ಪಟೇಲ, ಸಿದ್ದರಾಮಣ್ಣ ಅವರಿಗ್ಯಾರಿಗೂ ಟಿಕೆಟ್‌ ಕೇಳಿಲ್ಲ. ಬದಲಿಗೆ ಮಗನಿಗೆ ಟಿಕೆಟ್‌ ಕೇಳಿದ್ದೀರಿ, ಆತ ಒಳ್ಳೆಯ ತಳಿಯೇ. ಈಶ್ವರಪ್ಪ ಅವರಿಗೆ ಅಧಿಕಾರದ ಹಪಾಹಪಿ ಇದೆ. ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಅಧಿವೇಶನಕ್ಕೆ ಬರಲಿಲ್ಲ ಎಂದು ಹರಿಹಾಯ್ದರು. ಇನ್ನೊಂದೆಡೆ ಭಾನುಪ್ರಕಾಶ್‌ ಪುತ್ರನ ಹೆಸರೂ ಕೇಳಿಬರುತ್ತದೆ. ಯಾರ ಪುತ್ರರಾದರೂ ನಿಲ್ಲಲಿ, ನನ್ನನ್ನು ಎದುರಿಸಲಿ ಎಂದು ಸವಾಲು ಹಾಕಿದರು.

ಸೊಳ್ಳೆ ಪರದೆ ಕೊಟ್ಟ ಶಾಸಕ!: ಈಶ್ವರಪ್ಪ ಅವರಿಗೆ ಹಣ, ಅಧಿಕಾರದ ಮದವಿದೆ. ಸಂವಿಧಾನವೇ ಗೊತ್ತಿಲ್ಲದ ಅವರಿಗೆ ಯಾವ ಆಚಾರವೂ ಗೊತ್ತಿಲ್ಲ. ವಿಚಾರವೂ ಗೊತ್ತಿಲ್ಲ. ಸೊಳ್ಳೆ ಓಡಿಸಲಾಗದವರು ಮಗನ ಹೆಸರಿನಲ್ಲಿ ಜನರಿಗೆ ಸೊಳ್ಳೆಪರದೆ ಕೊಟ್ಟಿದ್ದಾರೆ. ಜನರಿಗೆ ಸೊಳ್ಳೆ ಪರದೆ ಕೊಟ್ಟಏಕೈಕ ಶಾಸಕ ಈಶ್ವರಪ್ಪ ಎಂದು ವ್ಯಂಗ್ಯವಾಡಿದರು. ಕೇವಲ ಪ್ರಚೋದನೆಗಳ ಮೂಲಕ ಶಾಂತಿಯನ್ನೇ ಕದಡುವ ಅವರಿಗೆ ಯಾವ ಮುಜುಗರವೂ ಇಲ್ಲ. ನಾಚಿಕೆಯೂ ಇಲ್ಲ. ಇತ್ತೀಚೆಗೆ ಶಿವಮೊಗ್ಗದಲ್ಲಿ .4.5 ಕೋಟಿ ಬೆಲೆ ಬಾಳುವ ಸೀರೆಗಳು, .1.30 ಕೋಟಿ ಕ್ಯಾಶ್‌ ಸಿಕ್ಕಿದೆ. ಇಷ್ಟೊಂದು ಹಂಚಲು ಶಕ್ತಿ ಇನ್ಯಾರಿಗಿದೆ ಎಂದು ಪರೋಕ್ಷವಾಗಿ ಈಶ್ವರಪ್ಪ ವಿರುದ್ಧ ಹರಿಹಾಯ್ದರು.

ಸಿದ್ದು ರೀತಿ ಎರಡು ಕಡೆ ಸ್ಪರ್ಧೆ ಮಾಡೋ ಅನಿವಾರ್ಯ ಪರಿಸ್ಥಿತಿ ನಮಗಿಲ್ಲ: ಡಾ.ಜಿ.ಪರಮೇಶ್ವರ್

ಈಶ್ವರಪ್ಪ ಮಾಡಿದ್ದು ಏನೂ ಇಲ್ಲ: ನನ್ನ 26 ವರ್ಷದ ರಾಜಕಾರಣದಲ್ಲಿ ಯಾವುದೇ ಕಳಂಕ ಬಂದಿಲ್ಲ. ಈಶ್ವರಪ್ಪ ಅವರಿಗೆ ಇನ್ನು ಲೆಕ್ಕ ಕೊಡಲು ಆರಂಭಿಸುತ್ತೇನೆ. ಅಭಿವೃದ್ಧಿ ಮಾಡಿರುವುದು ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ. 32 ವರ್ಷದ ಅಧಿಕಾರಾವಧಿಯಲ್ಲಿ ಈಶ್ವರಪ್ಪ ಮಾಡಿದ್ದು ಏನೂ ಇಲ್ಲ. ಯಡಿಯೂರಪ್ಪ, ರಾಘವೇಂದ್ರ ಅವರು ಅಭಿವೃದ್ಧಿ ಪಾರ್ಕ್ನಲ್ಲಿ ಓಡಾಡುವ ಈಶ್ವರಪ್ಪ ಅವರು ಪ್ರಚೋದನೆಕಾರಿಯಾಗಿ ಮಾತನಾಡಿ ಗಲಾಟೆ ಎಬ್ಬಿಸಿದರೆ ಫಲಿತಾಂಶ ನಮ್ಮ ಕಡೆ ಬರುತ್ತದೆ ಎಂದುಕೊಂಡಿದ್ದಾರೆ. ಈ ಬಾರಿ ಅದು ನಡೆಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಿಮ್ಮವು ಎಷ್ಟುಸೀರೆ ಬಂಡಲ…, ಪಂಚೆ ಬಂಡಲ್‌ ಬರುತ್ತವೋ ಬರಲಿ. ಈಶ್ವರಪ್ಪ ಅವರಿಗೆ ಏನು ಕೊಡಬೇಕು ಎಂಬುದು ಗೊತ್ತಿಲ್ಲ. ಆದರೆ ಏನು ಪಡೆಯಬೇಕು ಎಂಬುದು ಚೆನ್ನಾಗಿ ಗೊತ್ತು. ಚುನಾವಣಾ ಹೊತ್ತಿನಲ್ಲಿ ದೇವಸ್ಥಾನ, ಪ್ರಾರ್ಥನಾ ಮಂದಿರ ಮಲಿನವಾಗಬಹುದು. ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಹೊರಟವರೇ ಮಲೀನ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಗಲಾಟೆ ನಡೆಯುವ ಗುಮಾನಿ ಇದೆ. ಹಿಂದುಗಳು- ಮುಸ್ಲಿಮರು ಯಾರೂ ಸಂಯಮ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

click me!