Karnataka Election 2023: ಬಳ್ಳಾರಿಯ ಮತದಾನ ಕೇಂದ್ರದ ಆವರಣದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!

By Govindaraj S  |  First Published May 10, 2023, 4:57 PM IST

ಇಲ್ಲಿನ ಮತದಾನ ಕೇಂದ್ರದ ಆವರಣದಲ್ಲಿ ಮತ ಚಲಾಯಿಸಲು ಬಂದ ತಾಯಿಯು ಮಗುವಿಗೆ ಜನ್ಮ ನೀಡಿದ ಘಟನೆ ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ನಡೆದಿದೆ.


ಬಳ್ಳಾರಿ (ಮೇ.10): ಇಲ್ಲಿನ ಮತದಾನ ಕೇಂದ್ರದ ಆವರಣದಲ್ಲಿ ಮತ ಚಲಾಯಿಸಲು ಬಂದ ತಾಯಿಯು ಮಗುವಿಗೆ ಜನ್ಮ ನೀಡಿದ ಘಟನೆ ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ನಡೆದಿದೆ. ಮತಗಟ್ಟೆ ಸಂಖ್ಯೆ 228  ಮಣಿಲಾ ಎನ್ನುವ ಮಹಿಳೆ ಮತದಾನ ಮಾಡಿದ್ದಾರೆ. ಅನಂತರ ಮತದಾನ ಕೇಂದ್ರದಲ್ಲಿಯೇ ಹೆರಿಗೆ ನೋವು ಪ್ರಾರಂಭವಾಗಿದೆ ಕೂಡಲೇ ಪಕ್ಕದ ಕೊಠಡಿಗೆ ಕರೆದುಕೊಂಡು ಹೋಗಲಾಗಿದ್ದು, ಅಷ್ಟರಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ತಿಳಿದು ಬಂದಿದೆ. ಇನ್ನು ಹೆರಿಗೆ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಯಿ ಮಗು ಇಬ್ಬರನ್ನು ಶಿಫ್ಟ್ ಮಾಡಲಾಗಿದೆ.

ಹರಪನಹಳ್ಳಿ ಕ್ಷೇತ್ರದಲ್ಲಿ 297 ಮತಗಟ್ಟೆ ಸ್ಥಾಪನೆ: ಕ್ಷೇತ್ರದಲ್ಲಿ 1,09980 ಪುರುಷರು, 107046 ಮಹಿಳೆಯರು, 19 ತೃತೀಯ ಲಿಂಗಿಗಳು ಸೇರಿ ಒಟ್ಟು 2,17045 ಮತದಾರರಿದ್ದಾರೆ. ಶೇ. 25ರಷ್ಟುಹೆಚ್ಚುವರಿ ಸೇರಿ ಒಟ್ಟು 297 ಮತಗಟ್ಟೆಗಳಿವೆ. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಗರಿಷ್ಠ 5 ಮತಗಟ್ಟೆಗಳಿದ್ದು, ಮೈದೂರು ಹಾಗೂ ನೀಲಗುಂದ ಗ್ರಾಮಗಳಲ್ಲಿ ತಲಾ 4 ಮತಗಟ್ಟೆಗಳಿವೆ. 16 ಗ್ರಾಮಗಳಲ್ಲಿ 3 ಮತಗಟ್ಟೆಗಳು, 38 ಗ್ರಾಮಗಳಲ್ಲಿ ತಲಾ ಎರಡು ಮತಗಟ್ಟೆಗಳು, 120 ಗ್ರಾಮಗಳಲ್ಲಿ ತಲಾ ಒಂದು ಮತಗಟ್ಟೆಗಳಿವೆ. 70 ಮತಗಟ್ಟೆಗಳನ್ನು ಕ್ರಿಟಿಕಲ್‌ ಮತಗಟ್ಟೆಗಳೆಂದು ಗುರುತಿಸಲಾಗಿದೆ. 

Tap to resize

Latest Videos

ರಾಜ್ಯದಲ್ಲಿ ಸ್ಥಿರ ಮತ್ತು ಬಹುಮತದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ

ಪವನಪುರ ಮತಗಟ್ಟೆಯನ್ನು ಅತಿ ದುರ್ಬಲ ಮತಗಟ್ಟೆಯೆಂದು ಗುರುತಿಸಲಾಗಿದೆ. ಎರಡು ಸಖಿ ಮತಗಟ್ಟೆಗಳು, ತಾಪಂನಲ್ಲಿ ಅಂಗವಿಕಲರ ಮತಗಟ್ಟೆ, ಉಪ್ಪಾರಗೇರಿಯಲ್ಲಿ ಯುವ ಮತಗಟ್ಟೆಎಂದು ಸ್ಥಾಪಿಸಲಾಗಿದೆ. 5 ಮಾದರಿ ಮತಗಟ್ಟೆಯೆಂದು ಹೆಸರಿಸಲಾಗಿದೆ. 89 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರು ಇರುತ್ತಾರೆ. ಚುನಾವಣೆಗೆ 43 ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ತರಳಬಾಳು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಸ್ಟರಿಂಗ್‌ ಹಾಗೂ ಡಿಮಸ್ಟರಿಂಗ್‌ ಕಾರ್ಯ ನಡೆಯಲಿದೆ. 297 ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ ತಿಳಿಸಿದ್ದಾರೆ.

ಮಸಬಿನಾಳ ಗ್ರಾಮದಲ್ಲಿ ಮತಯಂತ್ರಗಳನ್ನ ಪುಡಿಪುಡಿ ಮಾಡಿ ಧ್ವಂಸ: 23 ಜನರ ಬಂಧನ

50 ಬೂತ್‌ಗಳಿಗೆ ಅರೆಸೇನಾ ಪಡೆ: ಚುನಾವಣೆಗೆ ಸೂಕ್ತ ಪೋಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ, ಡಿವೈಎಸ್ಪಿ- 1, ಸಿಪಿಐ- 4, ಪಿಎಸ್‌ಐ- 7, ಎಎಸ್‌ಐ- 25, ಎಚ್‌ಸಿ ಹಾಗೂ ಪಿಸಿ ಸೇರಿ- 350, ಕೆಎಸ್‌ಆರ್‌ಪಿ ವಾಹನ- 1, ಅರೆಸೇನಾಪಡೆ- 3 ವ್ಯವಸ್ಥೆ ಮಾಡಲಾಗಿದ್ದು, 50 ಮತಗಟ್ಟೆಗಳಿಗೆ ಅರೆಸೇನಾ ಪಡೆಗಳ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಇಂದು (ಮೇ.10) ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!