ದೆಹಲಿಯಲ್ಲಿ ಏನು ಆಗಬೇಕು ಅದು ತೀರ್ಮಾನ ಆಗಿದೆ. ಅದರ ಬಗ್ಗೆ ಚರ್ಚೆ ಬೇಡ, ಈಗ ಚರ್ಚೆ ಆಗೋದು. ಇದು 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ. ನೀವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಮೂಲಕ ಮುಂದಿನ ಅವಧಿಗೆ ಸಿಎಂ ಸ್ಥಾನ ಸಿಗುವ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.
ಮೈಸೂರು (ಏ.15): ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಮೈಸೂರು-ಕೊಡಗು ಜಿಲ್ಲಾ ಒಕ್ಕಲಿಗ ಜನಾಂಗದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಡಿಕೆ ಶಿವಕುಮಾರ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗುವ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ. 'ದೆಹಲಿಯಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗಿದೆ' ಎಂದು ಹೇಳಿರುವುದು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಮುಂದಿನ ಅವಧಿಗೆ ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್‌ಗೆ ಅಧಿಕಾರ ವಹಿಸುತ್ತದಾ ಹೈಕಮಾಂಡ್? ದೆಹಲಿಯಲ್ಲಿ ತೀರ್ಮಾನ ಆಗಿರುವುದೇನು? ಡಿಕೆ ಶಿವಕುಮಾರ ಅವರ ಹೇಳಿಕೆ ಬಳಿಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ಒಕ್ಕಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ, ಮೈಸೂರಿನಲ್ಲಿ ಕೆಲವು ತೊಂದರೆಗಳಿವೆ, ಇಲ್ಲ ಅಂಥ ನಾನು ಹೇಳಲ್ಲ. ನಮ್ಮ ಸಮಾಜದವರಿಗೆ ಸ್ವಲ್ಪ ಸಮಸ್ಯೆ ಇದೆ. ಅವರಿಗೆ ಇಲ್ಲಿ ರಕ್ಷಣೆ ಇಲ್ಲ, ನಾಯಕತ್ವದ ಸಮಸ್ಯೆ ಇದೆ. ಈಗ ಸಚಿವ ವೆಂಕಟೇಶ್ ಹಾಗೂ ಹರೀಶ್ ಗೌಡ ಮುಂದಾಳತ್ವ ವಹಿಸಿಕೊಂಡಿದ್ದಾರೆ. ನಾನು ನಿಮ್ಮೂರಿನ ಅಳಿಯ. ನನಗೂ ದೊಡ್ಡ ಜವಾಬ್ದಾರಿ ಇದೆ. ನೀವು ತಲೆ ಕಡೆಸಿಕೊಳ್ಳಲು ಹೋಗಬೇಡಿ. ಸ್ವಲ್ಪ ದಿನ ಅಷ್ಟೇ. ಚಲುವರಾಯಸ್ವಾಮಿ, ಕೃಷ್ಟೇಗೌಡ ಬಂದು ನನ್ನ ಹತ್ರ ನ್ಯಾಯ ಆಡ್ತಿದ್ರು. ಭಾಗದ ನ್ಯಾಯ ಆಡ್ತಿದ್ರು. ನೀವು ಆಡೊದು ಬೇಡ. ನಿಮ್ಮ ನ್ಯಾಯ ನಡೆಯುವುದಿಲ್ಲ. ಇದೆಲ್ಲ ದೆಹಲಿಯಲ್ಲಿ ನಡೆಯಬೇಕು ಅಂಥ ಹೇಳಿದ್ದೇನೆ. ದೆಹಲಿಯಲ್ಲಿ ಏನು ಆಗಬೇಕು ಅದು ತೀರ್ಮಾನ ಆಗಿದೆ. ಅದರ ಬಗ್ಗೆ ಚರ್ಚೆ ಬೇಡ, ಈಗ ಚರ್ಚೆ ಆಗೋದು. ಇದು 5 ವರ್ಷದ ಸರ್ಕಾರ ಅಲ್ಲ, 10 ವರ್ಷದ ಸರ್ಕಾರ. ನೀವು ಬೆಂಬಲವಾಗಿ ನಿಲ್ಲಬೇಕು ಎನ್ನುವ ಮೂಲಕ ಮುಂದಿನ ಅವಧಿಗೆ ಸಿಎಂ ಸ್ಥಾನ ಸಿಗುವ ಬಗ್ಗೆ ಪರೋಕ್ಷವಾಗಿ ತಿಳಿಸಿದ್ದಾರೆ.
undefined
ಈ ಚುನಾವಣೇಲಿ 2047ರವರೆಗಿನ ಭವಿಷ್ಯ: ಮೋದಿ
ದೇವೇಗೌಡ ಆಸ್ತಿ ಎಷ್ಟಿದೆ ಲೆಕ್ಕ ಕೊಡ್ಲಾ?
ದೇವೇಗೌಡರ ಕುಟುಂಬದ ಬಳಿ ಒಂದು ಸಾವಿರ ಎಕರೆ ಆಸ್ತಿ ಇದೆ. ನಾನು ಜೈಲಿಗೆ ಹೋದಾಗ ಕುಮಾರಸ್ವಾಮಿ, 'ಎಷ್ಟೋ ದುಡ್ಡು ಹೊಡೆದಿದ್ದಾರೆ ತಿಂದವರು ಅನುಭವಿಸುತ್ತಾರೆ' ಅಂದ್ರು. ನಾನು ಎಲ್ಲವನ್ನು ತಡೆದುಕೊಂಡು ಸುಮ್ಮನಿದ್ದೇನೆ. ಅವರೆಲ್ಲಾ ಕಳೆಕಾಯಿ, ಆಲೂಗೆಡ್ಡೆ ಬೆಳದು ಬಿಟ್ಟಿದ್ರಾ. ಅವರ ಕುಟುಂಬದ ಆಸ್ತಿ ಎಷ್ಟಿದೆ ಅಂಥ ಲೆಕ್ಕಾ ಕೊಡ್ಲಾ? ಬೆಂಗಳೂರು ಸುತ್ತ ಮುತ್ತನೇ ಒಂದು ಸಾವಿರ ಎಕರೆ ಇದೆ. ನಾನು ಅದರ ಬಗ್ಗೆ ಚರ್ಚೆ ಮಾಡಲ್ಲ, ಅದರ ಅವಶ್ಯಕತೆಯೂ ಇಲ್ಲ.ಈ ವೇದಿಕೆಗೆ ಬರಬೇಕಾದರೆ, ಅಧ್ಯಕ್ಷನಾಗಬೇಕಾದರೆ ಎಷ್ಟು ಕಿರುಕುಳ ಕೊಟ್ರು. ಐಟಿ, ಇಡಿ ಎಷ್ಟು ಕೇಸ್ ಗಳು ಹಾಕಿದ್ರು. ನಾನು ಏನ್ ಮಾಡಬಾರದನ್ನ ಮಾಡಿದ್ದೀನಿ. ತಾವು ಗಾಜಿನ ಮನೆಯಲ್ಲಿದ್ದು ಬೇರೆಯವರ ಬಗ್ಗೆ ಮಾತನಾಡಬಾರದು. ತಮ್ಮನ್ನು ಬಿಟ್ಟು ಬೇರೆ ಯಾರೂ ಬೆಳೆಯಬಾರದು, ಬೆಳೆಯೋರನ್ನ ಸಹಿಸೊಲ್ಲ ಅಂದ್ರೆ ಕಷ್ಟ ಎಂದು ದೇವೇಗೌಡ, ಕುಮಾರಸ್ವಾಮಿಗೆ ತಿರುಗೇಟು ನೀಡಿದರು.