ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್‌ ಆಕ್ರೋಶ

By Girish Goudar  |  First Published Dec 11, 2024, 6:54 PM IST

ಸಂಸತ್ ಸದನದಲ್ಲಿ ಅದಾನಿ ಹಗರಣದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸದೇ ಕೇವಲ ಎನ್‌ಡಿಎ ಸಂಸದರಿಗೆ ಮಾತ್ರ ಮಾತನಾಡಲು ಮುಕ್ತ ಅವಕಾಶ ಕಲ್ಪಿಸಿ ಪಕ್ಷಪಾತ ಮಾಡುತ್ತಿದ್ದಾರೆ. ಮೋದಿ ಸರ್ಕಾರದ ಸರ್ವಾಧಿಕಾರಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ದೂರಿದ ಕಾಂಗ್ರೆಸ್‌ 


ಬೆಂಗಳೂರು(ಡಿ.11):  ಬಿಜೆಪಿ ಗುಟ್ಟು, ಅದಾನಿಗೂ ಮೋದಿಗೂ ಬಿಡಿಸಲಾಗದ ನಂಟು. ರಾಜ್ಯಸಭಾ ಸಭಾಪತಿ ಹಾಗೂ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ಕಳೆದ ವರ್ಷ ಸಂಸತ್ತಿನಲ್ಲಿ ನಡೆದ ಹೊಗೆ ಬಾಂಬ್ ಭದ್ರತಾ ಲೋಪದ ಕುರಿತು ಚರ್ಚೆ ನಡೆಸುವಂತೆ ಕೋರಿದ 28 ನೋಟಿಸ್‌ಗಳನ್ನು ತಿರಸ್ಕರಿಸಿದ್ದಾರೆ ಎಂದು ರಾಜ್ಯ ಸರ್ಕಾರ ಕಿಡ ಕಾರಿದೆ. 

ರಾಜ್ಯಸಭೆ ಕಲಾಪದಲ್ಲಿ ರಾಜಕೀಯ ಪಕ್ಷಗಳ ನಡುವಿನ ಸಂಪರ್ಕದಿಂದ ರಾಷ್ಟ್ರೀಯ ಭದ್ರತೆಗೆ ಹೆಚ್ಚುತ್ತಿರುವ ಬೆದರಿಕೆಗಳ ಕುರಿತು ಚರ್ಚೆ ಪ್ರಾರಂಭಿಸಲು ನಿಯಮ 267 ಅಡಿಯಲ್ಲಿ ಸಲ್ಲಿಸಲಾದ ಅಧಿಸೂಚನೆಗಳನ್ನು ಸಹ ನಿರಾಕರಿಸಿ ತಾವು ಮೋದಿಯ ತಾಳಕ್ಕೆ ಮಾತ್ರ ಕುಣಿಯುವುದೆಂದು ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್‌ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ. 

Tap to resize

Latest Videos

ವೀರಪ್ಪನ್ ನಿಂದ ಬಚಾವ್ ಮಾಡಿ ಅಣ್ಣಾವ್ರಿಗೆ ಮರು ಜೀವ ಕೊಟ್ಟಿದ್ದೇ ಎಸ್‌ಎಂ ಕೃಷ್ಣ?

ಅಲ್ಲದೇ ಸಂಸತ್ ಸದನದಲ್ಲಿ ಅದಾನಿ ಹಗರಣದ ಬಗ್ಗೆ ಚರ್ಚೆ ನಡೆಸಲು ಅವಕಾಶ ಕಲ್ಪಿಸದೇ ಕೇವಲ ಎನ್‌ಡಿಎ ಸಂಸದರಿಗೆ ಮಾತ್ರ ಮಾತನಾಡಲು ಮುಕ್ತ ಅವಕಾಶ ಕಲ್ಪಿಸಿ ಪಕ್ಷಪಾತ ಮಾಡುತ್ತಿದ್ದಾರೆ. ಮೋದಿ ಸರ್ಕಾರದ ಸರ್ವಾಧಿಕಾರಿ ಆಡಳಿತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ದೂರಿದೆ. 

ಉಪರಾಷ್ಟ್ರಪತಿ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ಅವಿಶ್ವಾಸ ನಿರ್ಣಯ;ದೇಶದ ಇತಿಹಾಸದಲ್ಲೇ ಮೊದಲು!

ನವದೆಹಲಿ: ತಮ್ಮ ಬಗ್ಗೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟವು ರಾಜ್ಯಸಭೆ ಸ್ಪೀಕರ್‌ ಕೂಡ ಆದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಮಂಗಳವಾರ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿವೆ.

ಈ ಹಿಂದೆ 3 ಬಾರಿ ಲೋಕಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಮೂರೂ ವಿಫಲವಾಗಿದ್ದವು. ಆದರೆ ರಾಜ್ಯಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇದೇ ಮೊದಲು.ಕಾಂಗ್ರೆಸ್‌ , ತೃಣಮೂಲ ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಡಿಎಂಕೆ, ಆರ್‌ಜೆಡಿಯ ಒಟ್ಟು 60 ಜನರು ಸಂಸದರ ಸಹಿಯೊಂದಿಗೆ ಅವಿಶ್ವಾಸದ ಪತ್ರವನ್ನು ರಾಜ್ಯಸಭೆ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ 14 ದಿನ ಮೊದಲೇ ನೋಟಿಸ್‌ ನೀಡಬೇಕು. ಇದಕ್ಕೆ ರಾಜ್ಯಸಭೆ ಉಪಸಭಾಪತಿ ಒಪ್ಪಿಗೆ ಬೇಕು.

ಈ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು ‘ರಾಜ್ಯಸಭೆಯ ಪರಿಷತ್ತಿನ ಕಲಾಪಗಳನ್ನು ಅತ್ಯಂತ ಪಕ್ಷಪಾತದ ರೀತಿಯಲ್ಲಿ ನಡೆಸುತ್ತಿರುವ ರಾಜ್ಯಸಭೆಯ ಸಭಾಪತಿಯೂ ಆದ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದು ಬಿಟ್ಟು ಇಂಡಿಯಾ ಕೂಟಕ್ಕೆ ಬೇರೆ ಆಯ್ಕೆಗಳಿಲ್ಲ. ಇದು ಅತಿ ನೋವಿನ ನಿರ್ಧಾರ. ಆದರೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ’ ಎಂದಿದ್ದಾರೆ.ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಷ್‌ ಪ್ರತಿಕ್ರಿಯಿಸಿ, ‘ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ನಮ್ಮ ಹಕ್ಕುಗಳನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಅವಿಶ್ವಾಸ ನಿರ್ಣಯವನ್ನು ನೀಡಿದ್ದೇವೆ. ಅವರು ನಮಗೆ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದ್ದರು. 

ಬಿಜೆಪಿ ಪಾಳಯದಲ್ಲಿ ಕನಕಪುರದ ಬಂಡೆ ಡಿ.ಕೆ. ಮಾಡೆಲ್ ರಾಜಕಾರಣದ ಚರ್ಚೆ?

ರಿಜಿಜು ಕಿಡಿ:

ಕೇಂದ್ರ ಸಂಸದೀಯ ಸಚಿವ ಕಿರಣ್‌ ರಿಜಿಜು ಇದನ್ನು ಖಂಡಿಸಿ. ‘ಎನ್‌ಡಿಎಗೆ ರಾಜ್ಯಸಭೆಯಲ್ಲಿ ಬಹುಮತವಿದೆ. ನೋಟಿಸ್ ಅನ್ನು ತಿರಸ್ಕರಿಸಲಾಗುವುದು ಮತ್ತು ಈ ರೀತಿಯ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಧನಕರ್‌ ಬಗ್ಗೆ ಗೌರವವಿದೆ’ ಎಂದಿದ್ದರು. 

ನಿರ್ಣಯ ಅಂಗೀಕಾರ ಅನುಮಾನ:

ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳು ಅಗತ್ಯವಿರುವಷ್ಟು ಸಂಖ್ಯಾಬಲವನ್ನು ಹೊಂದಿಲ್ಲ. ಹೀಗಾಗಿ ಇದು ಕೇವಲ ಸಾಂಕೇತಿಕ ಪ್ರತಿಭಟನೆ ಇರಬಹುದು ಎಂದು ವಿಶ್ಲೇಷಿಸಲಾಗಿದೆ.

click me!