ಗೆದ್ದು ಸೋತ ರಾಜ್ಯದ ಕಾಂಗ್ರೆಸ್ ನಾಯಕರು!

By Web DeskFirst Published Nov 14, 2019, 8:17 AM IST
Highlights

ಗೆದ್ದು ಸೋತ ರಾಜ್ಯದ ಕಾಂಗ್ರೆಸ್ ನಾಯಕರು! ಸ್ಥಾನಮಾನ ಪಡೆಯದಂತೆ ನೋಡಿಕೊಂಡ ಕೈಟೀಮ್|  ಪ್ರಸಕ್ತ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಅನರ್ಹಗೊಳಿಸುವ ಪ್ರಯತ್ನದಲ್ಲಿ ಸೋಲು

ಬೆಂಗಳೂರು[ಅ.14]: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಅನರ್ಹ ಶಾಸಕರನ್ನು ಬಿಜೆಪಿ ಸರ್ಕಾರ ರಚನೆಯಾಗಿ ಮೂರು ತಿಂಗಳು ಕಳೆದರೂ ಯಾವುದೇ ಸ್ಥಾನಮಾನ ಪಡೆಯದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ. ಅಷ್ಟರಮಟ್ಟಿಗೆ ಅದು ಅವರ ಗೆಲುವೇ ಸರಿ.

ಆದರೆ, ಪ್ರಸಕ್ತ ವಿಧಾನಸಭೆಯ ಅವಧಿ ಪೂರ್ಣಗೊಳ್ಳುವವರೆಗೆ ಅನರ್ಹಗೊಳಿಸುವ ಪ್ರಯತ್ನ ನಡೆಸಿದರೂ ಅದರಲ್ಲಿ ಮಾತ್ರ ಕಾಂಗ್ರೆಸ್ ನಾಯಕರು ಸೋಲು ಅನುಭವಿಸಬೇಕಾಯಿತು. ಅದಕ್ಕೆ ಸುಪ್ರೀಂಕೋರ್ಟ್ ಅವಕಾಶ ನೀಡಲಿಲ್ಲ.

'15 ದಿನದಲ್ಲಿ ತನಗೆ ಪ್ರಮೋಶನ್ ಸಿಕ್ಕರೂ ಅಚ್ಚರಿಯಿಲ್ಲ'

ಇದೇ ವೇಳೆ ಬಿಜೆಪಿ ಸರ್ಕಾರದಲ್ಲಿ ತಕ್ಷಣವೇ ಸಚಿವ ಸ್ಥಾನ ಅಥವಾ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಪಡೆಯಲು ಬಯಸಿದ್ದ ಅನರ್ಹ ಶಾಸಕರಿಗೆ ಆರಂಭದಲ್ಲಿ ಸೋಲೇ ಎದುರಾಗಿತ್ತು. ಪರಿಣಾಮ, ಕಳೆದ ಮೂರು ತಿಂಗಳ ಕಾಲ ನ್ಯಾಯಾಲಯದ ತೀರ್ಪಿಗಾಗಿ ಚಾತಕ ಪಕ್ಷಿಗಳಂತೆ ಎದುರು ನೋಡುತ್ತಲೇ ಇದ್ದರು. ತಮ್ಮ ನೆರವಿನಿಂದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಯಾವುದೇ ಅಧಿಕಾರ ಅನುಭವಿಸುವಂತಿರಲಿಲ್ಲ.

ಸುಪ್ರೀಂ ತೀರ್ಪಿನಿಂದ ಅನರ್ಹರಿಗೆ ರಿಲೀಫ್, ಆದ್ರೂ ಕೊನೆ ಕಾಣದ ಸಂಕಷ್ಟ!

ಇದೀಗ ಅಂತಿಮವಾಗಿ ಗೆಲುವು ಸಾಧಿಸಿರುವ ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಗೆದ್ದರೆ ಸರ್ಕಾರದಲ್ಲಿ ಅಧಿಕಾರ ಅನುಭವಿಸಲು ಸಾಧ್ಯವಿದೆ. ಒಂದು ವೇಳೆ ಸೋಲು ಅನುಭವಿಸಿದರೆ ವಿಧಾನಪರಿಷತ್ತಿಗೆ ಆಯ್ಕೆಯಾಗಿ ಸರ್ಕಾರದಲ್ಲಿ ಅಧಿಕಾರಯುತ ಸ್ಥಾನ ಪಡೆಯಬಹುದಾಗಿದೆ.

click me!