ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡೇ ತಿಂಗಳಿಗೆ ಅಸಮಾಧಾನ ಸ್ಫೋಟಗೊಂಡಿದೆ. ಇದರ ಪರಿಣಾಮ ಸಿಎಂ ಸಿದ್ದರಾಮಯ್ಯಗೆ ಸರ್ಕಾರ ಉಳಿಸಿಕೊಳ್ಳುವ ಚಿಂತೆ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್ ಸಚಿವರ ವಿರುದ್ಧ 30ಕ್ಕೂ ಹೆಚ್ಚು ಶಾಸಕರು ದೂರು ನೀಡಿದ್ದಾರೆ.
ಬೆಂಗಳೂರು(ಜು.25) ಭರ್ಜರಿ ಗೆಲುವಿನೊಂದಿಗೆ ಅದಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರಕ್ಕೆ ಎರಡೇ ತಿಂಗಳಿನಲ್ಲಿ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗುತ್ತಿದೆ. ಬಿಕೆ ಹರಿಪ್ರಸಾದ್ ಹೇಳಿಕೆ ಬೆನ್ನಲ್ಲೇ ಇದೀಗ ಪಕ್ಷದೊಳಗೆ ಅಸಮಾಧಾನ ಸ್ಫೋಟಗೊಂಡಿದೆ. ಇದೀಗ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವರ ನಡುವಿನ ಮುಸುಕಿನ ಗುದ್ದಾಟ ಬಹಿರಂಗವಾಗಿದೆ. ಈಗಾಗಲೇ ಸಚಿವರ ವಿರುದ್ಧ 30ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ. ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಆದರೆ ಬಂಡಾಯವೆದ್ದ ಶಾಸಕರನ್ನು ಸಮಾಧಾನ ಮಾಡಲಾಗಿತ್ತು. ಆದರೆ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಒಂದೆಡೆ ಸಿದ್ದಾರಮಯ್ಯ ಸರ್ಕಾರವನ್ನು ಪತನಗೊಳಿಸಲು ಹುನ್ನಾರ ನಡೆಯುತ್ತಿದೆ ಅನ್ನೋ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಈ ಅಸಮಧಾನ ಸ್ಫೋಟ, ಸರ್ಕಾರದ ಬುಡವನ್ನೇ ಅಲುಗಾಡಿಸುತ್ತಿದೆ.
ಶಾಸಕ ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಸಿದ್ದರಾಮ್ಯಗೆ ದೂರು ನೀಡಲಾಗಿದೆ. ಕೆಲ ಸಚಿವರ ದುರಂಹಕಾರ ಮೀತಿ ಮೀರಿದೆ. ತಮ್ಮ ಕೆಲಸಗಳನ್ನು ಮಾಡಿಕೊಡುತ್ತಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮನವಿಗಳನ್ನು ಆಲಿಸುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಬೆನ್ನಲ್ಲೇ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರ. ತುರ್ತು ಶಾಸಕಾಂಗ ಸಭೆ ಕರೆದಿದ್ದಾರೆ.
ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ: ಡಿ.ಕೆ.ಶಿವಕುಮಾರ್
ಸಚಿವರು ಹಿರಿಯ ಶಾಸಕರಿಗೆ ಸ್ಪಂದಿಸುತ್ತಿಲ್ಲ. ಶಾಸಕರ ವರ್ಗಾವಣೆ ಪತ್ರಗಳಿಗೆ ಸಚಿವರು ಮನ್ನಣೆ ನೀಡುತ್ತಿಲ್ಲ. ಕೆಲ ಅಧಿಕಾರಿ ಬಳಿಯೇ ಹಣ ಕೇಳುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸರ್ಕಾರವನ್ನು ಕೆಡುವ ಪ್ರಯತ್ನಗಳು ನಡೆಯುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಬೆನ್ನಲ್ಲೇ ಇದೀಗ ಸರ್ಕಾರದ ವಿರುದ್ಧ ಶಾಸಕರು ತಿರುಗಿ ಬಿದ್ದಿರುವುದು ಸಿಎಂ ಸಿದ್ದರಾಮಯ್ಯ ತಲೆನೋವು ಹೆಚ್ಚಿಸಿದೆ.
ಸಿಎಂ ಸಿದ್ದರಾಮಯ್ಯಗೆ ದೂರು ಕೊಟ್ಟ ಕಾಂಗ್ರೆಸ್ ಶಾಸಕರು
ಬಿಆರ್ ಪಾಟೀಲ್
ಶಿವಲಿಂಗೇಗೌಡ
ನರೇಂದ್ರ ಸ್ವಾಮಿ
ಎಂ ಕೃಷ್ಣಪ್ಪ
ಪ್ರಿಯಕೃಷ್ಣ
ವಿನಯ್ ಕುಲಕರ್ಣಿ
ರಾಯರೆಡ್ಡಿ
ನರೇಂದ್ರ ಸ್ವಾಮಿ
ಅಪ್ಪಾಜಿ ನಾಡಗೌಡ
ಯಶವಂತರಾಯಗೌಡ
ಎ.ಆರ್ ಕೃಷ್ಣಮೂರ್ತಿ
ಅಲ್ಲಮ ಪ್ರಭು ಪಾಟೀಲ್
ಸೇರಿದಂತೆ 30 ಶಾಸಕರು ಕಾಂಗ್ರೆಸ್ ಸಚಿವರ ವಿರುದ್ದ ದೂರು ನೀಡಿದ್ದಾರೆ. ಆಳಂದ ಶಾಸಕ ಬಿಆರ್ ಪಾಟೀಲ್ ಅವರ ಲೆಟರ್ ಹೆಡ್ ಪತ್ರದ ಮೂಲಕ ಸಿದ್ದರಾಮಯ್ಯಗೆ ದೂರು ನೀಡಲಾಗಿದೆ. ದೂರಿಗೆ 30ಕ್ಕೂ ಹೆಚ್ಚು ಶಾಸಕರು ಸಹಿ ಹಾಕಿದ್ದಾರೆ.
ಡಿಕೆಶಿ ಆಪರೇಶನ್ ಹೇಳಿಕೆ: ಬಿ.ಕೆ.ಹರಿಪ್ರಸಾದ್ ಹೇಳಿಕೆಯನ್ನ ಡೈವರ್ಟ್ ಮಾಡೋ ಹೇಳಿಕೆನಾ?
ಶಾಸಕರ ವರ್ಗಾವಣೆ ಶಿಫಾರಸ್ಸು ಪತ್ರಗಳಿಗೆ ಮಾನ್ಯತೆ ನೀಡುತ್ತಿಲ್ಲ. ಕೆಲ ಕೆಲ ಸಚಿವರು ವರ್ಗಾವಣೆಗೆ ಹಣ ಕೇಳಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಸಂಬಂಧಿಯೊಬ್ಬರ ವರ್ಗಾವಣೆಗೆ ಶಿಫಾರಸ್ಸು ಪತ್ರವನ್ನು ಹಿರಿಯ ಶಾಸಕರು ಸಚಿವರಿಗೆ ನೀಡಿದ್ದರು. ಶಿಫಾರಸು ಪತ್ರ ಹಿಡಿದು ವರ್ಗಾವಣೆಗೆಂದು ಸಚಿವರನ್ನು ಭೇಟಿ ಮಾಡಿದ್ದ ಅಧಿಕಾರಿ ಬಳಿಯೇ ಸಚಿವರ ಸಹೋದರ ಹಣ ಕೇಳಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಕೂಡಲೆ ಸಚಿವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.