G Parameshwar: ಸಂಜೆವರೆಗೆ ಮನೆಯಿಂದ ಹೊರಬರದ ಪರಮೇಶ್ವರ್, ವಿಶೇಷ ಹೋಮ, ಪೂಜೆ ಬಳಿಕ ಸಿಎಂ ಭೇಟಿ!

Kannadaprabha News   | Kannada Prabha
Published : May 28, 2026, 04:26 AM IST
cm siddaramaiah parameshwar DK shivakumar

ಸಾರಾಂಶ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯ ಚರ್ಚೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದ್ದರೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr G Parameshwar) ಬುಧವಾರ ಸಂಜೆವರೆಗೆ ಮನೆಯಿಂದ ಹೊರಗೆ ಬರದೆ ಕುತೂಹಲ ಮೂಡಿಸಿದರು.

 ಬೆಂಗಳೂರು (ಮೇ.28) ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆಯ ಚರ್ಚೆ ಸೇರಿದಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿದ್ದರೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌(Dr G Parameshwar) ಬುಧವಾರ ಸಂಜೆವರೆಗೆ ಮನೆಯಿಂದ ಹೊರಗೆ ಬರದೆ ಕುತೂಹಲ ಮೂಡಿಸಿದರು.

ಸಂಜೆವರೆಗೆ ಮನೆಯಿಂದ ಹೊರಬರದೆ ಮನೆಯಲ್ಲಿದ್ದ ಗೃಹಸಚಿವ

ನಾಯಕತ್ವ ಬದಲಾವಣೆ ಕುರಿತಂತೆ ರಾಜ್ಯ ಕಾಂಗ್ರೆಸ್‌ನಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದೆ. ಬಹುತೇಕ ಎಲ್ಲ ಶಾಸಕರು, ಸಚಿವರು ದಿನವಿಡೀ ಚಟುವಟಿಕೆಯಲ್ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನಿವಾಸ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ(Randeep surjewala) ಭೇಟಿಯಲ್ಲಿ ತೊಡಗಿದ್ದರು. ಆದರೆ, ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಡಾ.ಪರಮೇಶ್ವರ್‌ ಮಾತ್ರ ಸಂಜೆವರೆಗೆ ಮನೆಯಲ್ಲಿಯೇ ಇದ್ದರು.

ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಹೋಮ, ವಿಶೇಷ ಪೂಜೆ

ಬುಧವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಏರ್ಪಡಿಸಿದ್ದ ಹೋಮ, ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಡಾ.ಪರಮೇಶ್ವರ್‌, ಮಧ್ಯಾಹ್ನದ ನಂತರ ಮನೆಯಲ್ಲಿ ರಿಲ್ಯಾಕ್ಸಾಗಿದ್ದರು. ಸಂಜೆ 6 ಗಂಟೆ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕಾಗಮಿಸಿ ಅವರೊಂದಿಗೆ ಚರ್ಚೆ ನಡೆಸಿದರು. ನಂತರ ಸಿದ್ದರಾಮಯ್ಯ ನಿವಾಸಕ್ಕಾಗಮಿಸಿದ ಸುರ್ಜೇವಾಲಾ ಅವರೊಂದಿಗೂ ಪ್ರತ್ಯೇಕ ಮಾತುಕತೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಖ್ಯಮಂತ್ರಿ ಇಳಿಯೋ ಮಾತು ನಿಜವಾಯ್ತು, ಇಬ್ಭಾಗವಾಗತ್ತಾ ಕಾಂಗ್ರೆಸ್​? ಡಿಕೆಶಿ 8 ವರ್ಷ ಸಿಎಂ?
ಹೌದು..ಸಿಎಂ ರಾಜೀನಾಮೆ ಕೊಡ್ತೀನಿ ಅಂತಾ ಹೇಳಿ ಬಂದಿದ್ದಾರೆ: ಆರ್‌ವಿ ದೇಶಪಾಂಡೆ