ಮೂರು ಸಚಿವರ ಖಾತೆ ಬದಲು: ಶ್ರೀರಾಮುಲುಗೆ ಶಾಕ್, ಡಿಸಿಎಂ ಸಿಗಲಿಲ್ಲ, ಆರೋಗ್ಯ ಖಾತೆಯೂ ಇಲ್ಲ!

By Suvarna NewsFirst Published Oct 12, 2020, 1:14 PM IST
Highlights

ಸಚಿವ ಶ್ರೀರಾಮುಲುಗೆ ಒಂದೇ ಖಾತೆ| ಶ್ರೀರಾಮುಲು ಖಾತೆಗಳಿಗೆ ಕತ್ತರಿ| ಹಿಂದುಳಿದ ವವರ್ಗಗಳ ಖಾತೆಯೂ ವಾಪಾಸ್| ಎರಡು ಖಾತಡೆ ಬದಲು ಒಂದೇ ಖಾತೆ ಕೊಟ್ಟ ಸಿಎಂ
 

ಬೆಂಗಳೂರು(ಅ.12) ಕರ್ನಾಟಕ ಸಿಎಂ ಬಿ. ಎಸ್‌. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ಒಟ್ಟು ಮೂವರು ಸಚಿವರ ಖಾತೆಗಳನ್ನು ಬದಲಾಯಿಸಿದ್ದು, ಇದಕ್ಕೆ ರಾಜ್ಯಪಾಲರೂ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಚಿವ ಶ್ರೀರಾಮುಲು ಬಳಿ ಇದ್ದ ಎರಡು ಖಾತೆಗಳನ್ನು ಹಿಂಪಡೆದು, ಒಂದು ಹೊಸ ಖಾತೆ ಜವಾಬ್ದಾರಿ ವಹಿಸಲಾಗಿದೆ. ಈ ಬದಲಾವಣೆಯಿಂದ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆನ್ನಲಾಗಿದೆ.

"

ಯಾರಿಗೆ ಯಾವ ಖಾತೆ?

ಸಚಿವ ಶ್ರೀರಾಮುಲು ಖಾತೆಗಳಿಗೆ ಕತ್ತರಿ ಹಾಕಲಾಗಿದ್ದು, ಆರೋಗ್ಯ ಇಲಾಖೆ ಜೊತೆ ಅವರಿಗೆ ನೀಡಲಾಗಿದ್ದ ಹಿಂದುಳಿದ ವರ್ಗಗಳ ಖಾತೆಯೂ ಹಿಂಪಡೆಯಲಾಗಿದೆ. ಎರಡು ಖಾತೆಗಳ ಬದಲು ಸಮಾಜ ಕಲ್ಯಾಣ ಇಲಾಖೆ ಖಾತೆಯನ್ನು ಅವರಿಗೆ ನೀಡಲಾಗಿದೆ.

ಆರೋಗ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ: ಸುಧಾಕರ್

ಶ್ರೀರಾಮುಲುರಿಂದ ಹಿಂಪಡೆಯಲಾದ ಹಿಂದುಳಿದ ವರ್ಗಗಳ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದು, ಆರೋಗ್ಯ ಇಲಾಖೆಯನ್ನು ಈ ಹಿಂದೆ ಬಂದ ಮಾಹಿತಿಯಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ರವರಿಗೆ ವಹಿಸಲಾಗಿದೆ. 

ಇನ್ನು ಶ್ರೀರಾಮುಲುಗೆ ನೀಡಲಾದ ಸಮಾಜ ಕಲ್ಯಾಣ ಖಾತೆ ಈ ಹಿಂದೆ ಗೋವಿಂದ ಕಾರಜೋಳ ಬಳಿ ಇತ್ತು. ಆದರೀಗ ಕಾರಜೋಳರಿಗೆ ಲೋಕೋಪಯೋಗಿ ಖಾತೆ ಜವಾಬ್ದಾರಿ ವಹಿಸಲಾಗಿದೆ.

ಇನ್ನು ಈ ಖಾತೆ ಬದಲಾವಣೆಗೆ ರಾಜ್ಯಪಾಲರು ಅಂಕಿತ ನೀಡಿದ್ದಾರೆ.  
 

click me!