ಮುಖ್ಯಮಂತ್ರಿ ಸ್ಥಾನಕ್ಕೆ ಬಿ. ಎಸ್‌. ಯಡಿಯೂರಪ್ಪ ರಾಜೀನಾಮೆ, ವಿದಾಯ ಭಾಷಣ!

By Suvarna News  |  First Published Jul 26, 2021, 12:05 PM IST

* ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ

* ರಾಜೀನಾಮೆ ಘೋಷಿಸಿದ ಬಿ. ಎಸ್‌. ಯಡಿಯೂರಪ್ಪ

* ಬಿಎಸ್‌ವೈ ಅಧಿಕಾರಕ್ಕೇರಿ ಎರಡು ವರ್ಷ ಪೂರೈಸಿದ ದಿನವೇ ಸಿಕ್ತು ಉತ್ತರ


ಬೆಂಗಳೂರು(ಜು.26): ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿದ್ದ ಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರಕ್ಕೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಹೌದು ಸಿಎಂ ಬಿಎಸ್‌. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

"

Tap to resize

Latest Videos

ಕಳೆದ ಕೆಲ ಸಮಯದಿಂದ ರಾಜ್ಯ ಮುಖ್ಯಮಂತ್ರಿ ಸಿಎಂ ಬಿ. ಎಸ್. ಯಡಿಯತೂರಪ್ಪ ಬದಲಾಗುತ್ತಾರೆಂಬ ವಿಚಾರ ಸದ್ದು ಮಾಡಿತ್ತು. ಹೀಗಿರುವಾಗ ಅವರ ಬದಲು ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಇದಕ್ಕೆ ತಕ್ಕಂತೆ ಬಿಜೆಪಿ ಹೈಕಮಾಂಡ್‌ ಏನು ಹೇಳುತ್ತೋ ನಾನು ಹಾಗೇ ನಡೆದುಕೊಳ್ಳುತ್ತೇನೆ ಎಂದಿದ್ದ ಬಿಎಸ್‌ವೈ ಮಾತುಗಳು ಅನೇಕ ಬಗೆಯ ಸಂಶಯಕ್ಕೆ ಕಾರಣಮತ್ವಾತಗಿದ್ದವು. ಬಳಿಕ ನಡೆದ ಕಾವಿ ಬೆಂಬಲ, ಬಿಎಸ್‌ವೈ ಪುತ್ರನ ದೆಹಲಿ ಭೇಟಿ ಇವೆಲ್ಲವೂ ಅನೇಕ ವದಂತಿಗಳಿಗೆ ಸಾಕ್ಷಿಯಾಗಿದ್ದವು.

ಆದರೀಗ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷ ಪೂರೈಸುವ ಸಂದರ್ಭದಲ್ಲೇ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ. ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆ ಆಯೋಜಿಸಲಾಗಿದ್ದ ಸಾಧನಾ ಸಮೇವೇಶದಲ್ಲಿ ಮಾತನಾಡಿದ ಬಿಎಸ್‌ವೈ ಕೆಂದ್ರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಈ ವೇಳೆ ನಾನು ನಿಮ್ಮ ಅಪ್ಪಣೆ ಪಡೆದು, ತೀರ್ಮಾನ ಮಾಡಿದ್ದೇನೆ. ಊಟದ ಬಳಿಕ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಲು ತೀರ್ಮಾನ ಮಾಡಿದ್ದೇನೆ. ದುಃಖದಿಂದ ಅಲ್ಲ, ಸಂತೋಷ, ಖುಷಿಯಿಂದ ತೀರ್ಮಾನಿಸಿದ್ದೇನೆ. 75 ವರ್ಷ ದಾಟಿದ ಯಡಿಯೂರಪ್ಪನಿಗೆ ಮತ್ತೆರಡು ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಮೋದಿ, ಅಮಿತ್ ಶಾ ಹಾಗೂ ನಡ್ಡಾರವರಿಗೆ ಶಬ್ಧಗಳಲ್ಲಿ ಅಭಿನಮಧನೆ ಅಲ್ಲಿಸಲು ಸಾಧ್ಯವಿಲ್ಲ, ಅವರಿಗೆ ಋಣಿಯಾಗಿದ್ದೇನೆ ಎಂದಿದ್ದಾರೆ.

ಸಿಎಂ ಸ್ಥಾನಕ್ಕೆ ಬಿ. ಎಲ್. ಸಂತೋಷ್ ಹೆಸರು, ನಾಲ್ವರಿಗೆ ಡಿಸಿಎಂ ಸ್ಥಾನ?

ಬಿಎಸ್‌ವೈ ಭಾಷಣದ ಮುಖ್ಯಾಂಶಗಳು: 

* ಕಳೆದೆರಡು ವರ್ಷದಲ್ಲಿ ನನ್ನೊಂದಿಗೆ ನಿಂತು ಸರ್ಕಾರ ಸುಗಮವಾಗಿ ಸಾಗಲು ಜೊತೆಯಾಗಿ ನಿಂತ ಅಧಿಕಾರಿಗಳಿಗೆ 

* ದೇಶದ ಸಮಗ್ರತೆಗೆ ಧಕ್ಕೆ ತಂದ ಪಾಕ್ ಪಾಪಿಗಳನ್ನು ಸದೆಬಡಿದ ಭಾರತೀಯ ಸೇನೆಯ ಕಾರ್ಗಿಲ್ ಯೋಧರಿಗೆ ನಮನ. 

* ಟೋಕಿಯೋದಲ್ಲಿ ಭಾಗಹಿಸಿದವರಿಗೆ : ಐದು ಕೋಟಿ- ಚಿನ್ನದ ಪದಕ ಗೆದ್ದವರಿಗೆ, ಬೆಳ್ಳಿ ಪಡೆದವರಿಗೆ ಮೂರು ಕೋಟಿ, ಕಂಚು ಗೆದ್ದವರಿಗೆ ಎರಡು ಕೋಟಿ ಘೋಷಣೆ.

* ಶಿಕಾರಿಪುರ ತಾಲೂಕಿನಲ್ಲಿ ಅಂದು ಬಸವನಬಾಗೇವಾಡಿ, ಬಸವಕಲ್ಯಾಣ, ಶಿವಮೊಗ್ಗದಿಂದ ಪಾದಯಾತ್ರೆ ಮಾಡಿ ಪಕ್ಷ ಬಲಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವು.

* ಅಂದು ಶಾಸಕ ಸಭೆಯಲ್ಲಿ ಯಾರೂ ಇರಲಿಲ್ಲ. ಗೆದ್ದ ಇಬ್ಬರಲ್ಲಿ ವಸಂತ ಬಂಗೇರ ಗೆದ್ದಾಗ ನಾನೊಬ್ಬನೇ ಉಳಿದಿದ್ದೆ. ನಾನೆಂದು ಹಿಂದೆ ನೊಡಿಲ್ಲ. ನನ್ನ ಕರ್ತವ್ಯ ಜನ ಮೆಚ್ಚುವಂತೆ ಮಾಡಿದ್ದೇನೆ ಎನ್ನುವ ತೃಪ್ತಿ ಸಮಾಧಾನ, ವಿಶ್ವಾಸ ನನಗಿದೆ.

* ಮಂಡ್ಯ ಜಿಲ್ಲೆಯ ಭೂಕಕೆರೆಯಲ್ಲಿ ಹುಟ್ಟಿ, ಶಿವಮೊಗ್ಗದ ಶಿಕಾರಿಪುರದಲ್ಲಿ ಸಂಘದಲ್ಲಿ ತೊಡಗಿಸಿಕೊಂಡೆ. ಬಳಿಕ ಪುರಸಭೆಯಲ್ಲಿ ನಿಂತು ಗೆದ್ದು ಅಧ್ಯಕ್ಷನಾದೆ. ಆಗ ಮನೆಯಿಂದ ಕಚೇರಿಗೆ ಹೋಗಲು ದಾರಿ ಮಧ್ಯೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಆದರೆ ಭಗವಂತನ ದಯೆಯಿಂದ ಬದುಕುಳಿದೆ. ಅಂದೇ ನನ್ನ ಬದುಕು ರಾಜ್ಯದ ಜನತೆಗೆ ಮೀಸಲು ಎಂದಿದ್ದೆ. ಅದೇ ರೀತಿ ನಡೆದುಕೊಂಡೆ ಎಂದ ಆತ್ಮವಿಶ್ವಾಸ ನನಗಿದೆ.

* ಅಂದಿನ ಜನಸಂಘದ ತಾಲೂಕು, ಜಿಲ್ಲಾ ಅಧ್ಯಕ್ಷನಾಗಿ ನನ್ನ ಕೆಲಸ ಆರಂಭಿಸಿ, ರೈತ, ದಲಿತ ಪರ ಹೋರಾಟ ಮಾಡಿದೆ.

* ಶಿವಮೊಗ್ಗದಲ್ಲಿ ಐವತ್ತು, ಅರ್ವತ್ತು ಜನರನ್ನು ಸೇರಿಸಿ ಆಯೋಜಿಸಿದ್ದೆ. ರಾಜನಾಥ್ ಸಿಂಗ್ ಅಚ್ಚರಿಗೀಡಾಗಿದ್ದರು. ಮಹಿಳಾ ಸಮಾವೇಶ ಕಂಡು ಸುಷ್ಮಾ ಸ್ವರಾಜ್ ಅಚ್ಚರಿಗೀಡಾಗಿದ್ದರು. 

* ಕರ್ನಾಟಕದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಿದ್ದಕ್ಕೆ ಇಂದು ಈ ಸ್ಥಾನದಲ್ಲಿದ್ದೇನೆ.

* ಅಂದು ವಾಜಪೇಯಿ ಕೇಂದ್ರದಲ್ಲಿ ಸಚಿವನಾಗಬೇಕು ಎಂದಿದ್ದರು. ಆದರೆ ನಾನು ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕು. ಯಾವ ಕಾರಣಕ್ಕೂ ದೆಹಲಿಗೆ ಬರಲ್ಲ ಎಂದಿದ್ದೆ. ಆಗ ವಾಜಪೇಯಿ, ಅಡ್ವಾಣಿ, ಜೋಷಿ ಬರುವಾಗ ಇನ್ನೂರು ಸೇರುತ್ತಿರಲಿಲ್ಲ. ಆದರೀಗ ಇದು ಬದಲಾಗಿದೆ. ಇಂದು ರಾಜ್ಯದಲ್ಲಿ ಬಿಜೆಪಿ ಬಂದಿದೆ. ಶಿಕಾರಿಪುರ ಜನ ನನ್ನನ್ನು ಏಳು ಬಾರಿ ಶಾಸಕನಾಗಿ ಮಾಡಿದ್ರು. ಜನ ನನ್ನ ಕೈ ಬಿಡಲಿಲ್ಲ.

ಬೆಳಗಾವಿಗೆ ಸಿಎಂ ಬಂದ್ರೂ ಭೇಟಿಗೆ ಬಾರದ ಜಾರಕಿಹೊಳಿ, ಜೊಲ್ಲೆ..!

* ಪಿಎಂ ಮೋದಿ ಕೇಂದ್ರ ಸರ್ಕಾರ 75 ವರ್ಷ ದಾಟಿದ ವ್ಯಕ್ತಿಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂದಿತ್ತು. ಆದರೆ ಬಿಎಸ್‌ವೈ ಬಗ್ಗೆ ಅತ್ಯಂತ ವಾತ್ಸಲ್ಯ, ಪ್ರೀತಿ ವಿಶ್ವಾಸದಿಂದ ಅವಕಾಶ ಕೊಟ್ಟರು. ಎರಡು ವರ್ಷ ರಾಜ್ಯದ ಸಿಎಂ ಆಗಲು ಅವಕಾಶ ಮಾಡಿಕೊಟ್ಟರು.

* ಮತ್ತೆ ಮೋದಿ, ಶಾ ಮುಂದಿನ ಚುನಾವಣೆಯಲ್ಲಿ ಗೆದ್ದು ಮುನ್ನಡೆದರೆ ಭಾರತ ಜಗತ್ತಿನಲ್ಲಿ ಪ್ರಭಾವಶಾಲಿಯಾಗುತ್ತದೆ. ದೇವರಲ್ಲಿ ಈ ನಮ್ಮ ಮೋದಿ, ಶಾ ಜೋಡಿ ಗೆದ್ದು ಬರಲಿ ಎಂದು ಪ್ರಾರ್ಥಿಸುತ್ತೇನೆ. 

* ಶಿವಮೊಗ್ಗದಲ್ಲಿ ನನ್ನ ಬಳಿ ಕಾರು ಇಲ್ಲದಾಗ ಸೈಕಲ್‌ನಲ್ಲಿ ಓಡಾಡಿ ಕೆಲಸ ಮಾಡಿದ್ದೇವೆ. ಇಂದು ಪಕ್ಷ ಸದೃಢವಾಗಿದೆ. ನಾವೆಲ್ಲಾ ಒಟ್ಟಾಗಿ ಬಲಪಡಿಸಿದ್ದೇವೆ. 

* ಜನರ ಆಶೀರ್ವಾದದಿಂದ ಸಾಧನೆ ಮಾಡಿದ್ದೇವೆ. ಮಾಧ್ಯಮ ಸ್ನೇಹಿತರಿಗೂ ಧನ್ಯವಾದ. ನಮ್ಮ ಒಳ್ಳೆ ಕೆಲಸ ಜನರಿಗೆ ತೋರಿಸಿಕೊಟಟ್ಟಿದ್ದೀರಿ.

* ಒಂದು ಸಂದರ್ಭದಲ್ಲಿ ಅನಿವಾರ್ಯವಾಗಿ ಜೆಡಿಎಸ್‌ ಜೊತೆ ಅನಿವಾರ್ಯವಾಗಿ ಸರ್ಕಾರ ರಚಿಸಿದೆವು. ಒಂದು ವರ್ಷದ ಬಳಿಕ ಅವರು ಸಿಎಂ ಸ್ಥಾನ ನನಗೆ ಬಿಟ್ಟು ಕೊಡಬೇಕಿತ್ತು. ಆದರೆ ತಂದೆ ಮಗ ಸೇರಿ ಕೆಲ ಷರತ್ತು ಹಾಕಲಾರಂಭಿಸಿದರು. ಆದರೆ ನಾನು ಇದಕ್ಕೊಪ್ಪಲಿಲ್ಲ. ಅದನ್ನು ನಾನು ಮರೆಯಲು ಸಾಧ್ಯವಿಲ್ಲ.

* ಬಹುಶಃ ಬೇರೆ ಬೇರೆ ಕಾರಣಗಳಿಂದ ನಮಗೆ ಬಹುಮತ ಬರಲಿಲ್ಲ. ಸ್ವತಂತ್ರವಾಗಿ ಸ್ಥಾನ ಗೆಲ್ಲಲು ಅವಕಾಶವಿದ್ದರೂ ಇದು ಆಗಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬಹುಮತ ಗೆಲ್ಲುವಂತೆ ಮಾಡುತ್ತೇವೆಂಬ ವಿಶ್ವಾಸ ನನಗಿದೆ. ನಾನು ಸೇರಿ ಕಾರ್ಯಕರ್ತರೊಂದಿಗೆ ಸೇರಿ ಪಕ್ಷ ಮತ್ತಷ್ಟು ಬಲಪಡಿಸುತ್ತೇವೆ.

* ಅಧಿಕಾರ ವಹಿಸಿಕೊಂಡಾಗ ಎರಡು ವರ್ಷ ನನಗೆ ಮಂತ್ರಿ ಮಂಡಲ ಮಾಡಲು ಬಿಡಲಿಲ್ಲ ಕೇಂದ್ರದವರು. ಪ್ರವಾಹ, ಬರಗಾಲ ಹೀಗಿರುವಾಗ ಎಲ್ಲಾ ಕಡೆ ಸುತ್ತಬೇಕಾಯ್ತು. ಅದೊಂದು ಅಗ್ನಿ ಪರೀಕ್ಷೆಯಾಗಿತ್ತು.

* ಈಗ ಕಳೆದ ಒಂದೂವರೆ ವರ್ಷದಿಂದ ಕೋವಿಡ್‌ನಿಂದ ಜನ ಸಂಕಷ್ಟಕ್ಕೆ ತುತ್ತದರು. ಅದನ್ನೆದುರಿಸಲು ಶಕ್ತಿ ಮೀರಿ ಪ್ರಯತ್ನಿಸಿದೆವು. ಪರಿಣಾಮವಾಗಿ ಇಡೀ ದೇಶದಲ್ಲಿ ಕರ್ನಾಟಕ ಯಸಶ್ವಿಯಾಗಿದೆ ಎಂದು ಮೋದಿಯೇ ಹೇಳಿದ್ದಾರೆ.

* ಅಗ್ನಿ ಪರೀಕ್ಷೆ ಒಂದಾದ ಬಳಿಕ ಮತ್ತೊಂದು ಬಂದರೂ ಎದೆಗುಂದದೆ ಎದುರಿಸಿದ್ದೇವೆ.

* ಸರ್ಕಾರಿ ನೌಕರರ ಬೆಂಬಲಕ್ಕೂ ನಾನು ಋಣಿ. ನನ್ನ ಮೇಲೆ ವಿಶ್ವಾಸವಿಟ್ಟು ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಯ್ತು.

* ಎಲ್ಲರ ಸಹಕಾರದಿಂದ ಒಂದು ಬದಲಾವಣೆ ತರಲು ಸಾಧ್ಯವಾಯ್ತು. ಮುಂದಿನ ದಿನಗಳಲ್ಲಿ ಇನ್ನೂ ಅಭಿವೃದ್ಧಿ ಮಾಡಿ ರಾಜ್ಯವನ್ನು ಮುನ್ನಡೆಸುವ ಯತ್ನ ಮಾಡಬೇಕು.

* ನಾನು ಶಕ್ತಿಮೀರಿ ಕೆಲಸ ಮಾಡಿದ್ದೇನೆ.

* ಚುನಾಯಿತ ಪ್ರತಿನಿಧಿ, ಅಧಿಕಾರಿಗಳ ಬಗ್ಗೆ ವಿಶ್ವಾಸ ಕಡಿಮೆಯಾಗುತ್ತಿದೆ. ಹೀಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಅನೇಕರು ಪ್ರಾಮಾಣಿಕರಾಗಿದ್ದಾರೆ ಅದರಲ್ಲು ಯಾವುದೇ ಸಂಶಯವಿಲ್ಲ.

* ನಾನು ನಿಮ್ಮ ಅಪ್ಪಣೆ ಪಡೆದು, ತೀರ್ಮಾನ ಮಾಡಿದ್ದೇನೆ. ಊಟದ ಬಳಿಕ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪತ್ರ ನೀಡಲು ತೀರ್ಮಾನ ಮಾಡಿದ್ದೇನೆ. ದುಃಖದಿಂದ ಅಲ್ಲ, ಸಂತೋಷ, ಖುಷಿಯಿಂದ ತೀರ್ಮಾನಿಸಿದ್ದೇನೆ. 75 ವರ್ಷ ದಾಟಿದ ಯಡಿಯೂರಪ್ಪನಿಗೆ ಮತ್ತೆರಡು ವರ್ಷ ಸಿಎಂ ಆಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟ ಮೋದಿ, ಅಮಿತ್ ಶಾ ಹಾಗೂ ನಡ್ಡಾರವರಿಗೆ ಋಣಿಯಾಗಿದ್ದೇನೆ. 

click me!