Karnataka Politics: 'ಮೊಸರಲ್ಲಿ ಕಲ್ಲು ಹುಡುಕಬೇಡಿ' ಸಿದ್ದುಗೆ ಬೊಮ್ಮಾಯಿ ಇತಿಹಾಸದ ಏಟು!

By Kannadaprabha NewsFirst Published Jan 31, 2022, 3:49 AM IST
Highlights

* ಮೊಸರಲ್ಲಿ ಕಲ್ಲು ಹುಡುಕಬೇಡಿ: ಸಿದ್ದುಗೆ ಸಿಎಂ

* ಶೇ. 96 ಭರವಸೆ ಈಡೇರಿಸಿದ್ದೇವೆ ಎಂದಿದ್ದೀರಿ, ಆದರೂ ಜನರು ನಿಮ್ಮನ್ನು ತಿರಸ್ಕರಿಸಿದರು

* 6 ತಿಂಗಳ ಸಾಧನೆ ಟೀಕಿಸಿದ್ದಕ್ಕೆ ತಿರುಗೇಟು

* ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

ಬೆಂಗಳೂರು(ಜ.31)  ನಮ್ಮ ಸರ್ಕಾರಕ್ಕೆ (Karnataka Govt) ಜವಾಬ್ದಾರಿಯ ಅರಿವಿದೆ. ಸಿದ್ದರಾಮಯ್ಯ (Siddaramaiah) ಅವರು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುವುದು ಬೇಡ. ಪ್ರಣಾಳಿಕೆಯಲ್ಲಿನ ಶೇ.96ರಷ್ಟುಭರವಸೆ ಈಡೇರಿಸಿದ್ದೇವೆ ಎಂದರೂ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಅದನ್ನು ಮರೆಯಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai)  ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಸರ್ಕಾರದ ಆರು ತಿಂಗಳ ಸಾಧನೆ ಕುರಿತು ಟೀಕಿಸಿದ ಹಾಗೂ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದ್ದ ಒಂದನ್ನೂ ಸರ್ಕಾರ ಈಡೇರಿಸಿಲ್ಲ ಎಂದಿದ್ದ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

Latest Videos

ಸಿದ್ದರಾಮಯ್ಯ ಅವರಿಂದ ಹೆಚ್ಚೇನೂ ನಿರೀಕ್ಷೆ ಮಾಡಲಾಗುವುದಿಲ್ಲ. ಜನಹಿತ ಯೋಜನೆಗಳನ್ನು ನಾವು ನೀಡಿದ್ದೇವೆ. ಇದರಿಂದ ಜನರಿಗೆ ಏನು ಉಪಯೋಗವಾಗಿದೆ ಎಂಬುದನ್ನು ನೋಡಬೇಕೆ ಹೊರತು ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬಾರದು. ನಮ್ಮ ಪ್ರಣಾಳಿಕೆಯ ಘೋಷಣೆಗಳಲ್ಲಿ ಶೇ.96 ರಷ್ಟುಅನುಷ್ಠಾನ ಮಾಡಿದ್ದೇವೆ ಎಂದು ಅವರು ಹೇಳಿದ್ದರು. ಆದರೂ ಜನ ತಿರಸ್ಕಾರ ಮಾಡಿದರು ಅದನ್ನು ಮರೆಯಬಾರದು ಎಂದರು.

ಕೈ ಹಿಡಿಯಲಿದ್ದಾರಾ ನಿರ್ದೇಶಕ ಎಸ್ ನಾರಾಯಣ್

ಕಾರ್ಯಕ್ರಮದ ಘೋಷಣೆ ಮಾತ್ರವಲ್ಲ ಅನುಷ್ಠಾನವೂ ಮುಖ್ಯ. ನಮಗೆ ನಮ್ಮ ಜವಾಬ್ದಾರಿಯ ಅರಿವಿದೆ. ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ರೈತರು, ಎಸ್‌ಸಿ-ಎಸ್‌ಟಿ ಸಮುದಾಯಗಳಿಗೆ ಒಳ್ಳೆಯದಾಗಬೇಕು ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಸಿದ್ದರಾಮಯ್ಯ ವಿನಾಕಾರಣ ರಾಜಕೀಯಕ್ಕಾಗಿ ಟೀಕೆ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಒಳಜಗಳ ಸಾರ್ವತ್ರಿಕ ಸತ್ಯ: ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಅಶೋಕ್‌ ಪಟ್ಟಣ್‌ ಗುಸುಗುಸು ಬಗ್ಗೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವಿನ ಒಳಜಗಳ ಅವರ ಆಂತರಿಕ ವಿಚಾರವಾದರೂ ಎಲ್ಲರಿಗೂ ಗೊತ್ತಿರುವ ಸಾರ್ವತ್ರಿಕ ಸತ್ಯ. ಕೇವಲ ಇದೊಂದೇ ಪ್ರಸಂಗವಲ್ಲ ಇಂತಹ ಹಲವಾರು ನಡೆದಿವೆ. ಒಂದು ಮಾತ್ರ ಬಹಿರಂಗಗೊಂಡಿದೆ. ಕಾಂಗ್ರೆಸ್‌ನವರು ಯಾವಾಗಲೂ ಜನ ಹಿತಕ್ಕಾಗಿ ಕೆಲಸ ಮಾಡಿದವರಲ್ಲ. ಆಡಳಿತದಲ್ಲೇ ಇರಲಿ, ವಿಪಕ್ಷದಲ್ಲೇ ಇರಲಿ ಅಧಿಕಾರಕ್ಕಾಗಿ ಗುದ್ದಾಟ ಮಾಡುತ್ತಾರೆ. ಅದು ಅವರ ಗುಣಧರ್ಮ ಎಂದು ಟೀಕಿಸಿದರು.

ಮೈಸೂರು ಬಿಜೆಪಿಯಲ್ಲಿ  ಜಗಳ ಇಲ್ಲ: ಮೈಸೂರಿನಲ್ಲಿ ಸಂಸದರು ಹಾಗೂ ಶಾಸಕರ ನಡುವೆ ನಡೆಯುತ್ತಿರುವ ಆರೋಪ-ಪ್ರತ್ಯಾರೋಪದ ಬಗ್ಗೆ ಮಾತನಾಡಿ, ಮೈಸೂರಿನಲ್ಲಿ ಸಂಸದರು ಹಾಗೂ ಶಾಸಕರ ನಡುವೆ ಜಗಳ ಅಲ್ಲ. ಅದು ಅಭಿವೃದ್ಧಿ ಆಗಬೇಕೆನ್ನುವ ವಿಭಿನ್ನ ದೃಷ್ಟಿಕೋನಗಳು. ಶಾಸಕರು ಮತ್ತು ಸಂಸದರನ್ನು ಕರೆದು ಮಾತನಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಖಾದರ್ ಗೆ ಸ್ಥಾನ:  ಕಾಂಗ್ರೆಸ್‌ ಶಾಸಕಾಂಗ ಪಕ್ಷಕ್ಕೆ  ಉಪನಾಯಕರಾಗಿ ಖಾದರ್‌:  ಮಾಜಿ ಸಚಿವ ಹಾಗೂ ಶಾಸಕ ಯು.ಟಿ.ಖಾದರ್‌ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಉಪನಾಯಕ ಸ್ಥಾನಕ್ಕೆ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನ ನೀಡದೆ ಇರುವುದಕ್ಕೆ ಅಸಮಾಧಾನಗೊಂಡಿರುವ ಅಲ್ಪಸಂಖ್ಯಾತ ಸಮುದಾಯವನ್ನು ಸಮಾಧಾನಪಡಿಸಲು ಕಾಂಗ್ರೆಸ್‌ ಪಕ್ಷ ವಿಧಾನಸಭೆ ಚುನಾವಣೆಗೆ ಒಂದೂಕಾಲು ವರ್ಷ ಬಾಕಿ ಇರುವಾಗ ಉಪನಾಯಕ ಹುದ್ದೆಗೆ ಯು.ಟಿ. ಖಾದರ್‌ ಅವರನ್ನು ನೇಮಿಸಿದೆ.

ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದ ಸಿ.ಎಂ. ಇಬ್ರಾಹಿಂ ಹಾಗೂ ನಜೀರ್‌ ಅಹಮದ್‌ ಅವರನ್ನು ತಪ್ಪಿಸಿ ಬಿ.ಕೆ. ಹರಿಪ್ರಸಾದ್‌ ಅವರಿಗೆ ಅವಕಾಶ ನೀಡಲಾಗಿತ್ತು. ಇದರಿಂದ ಸಮುದಾಯ ಮಾತ್ರವಲ್ಲದೆ ಅಲ್ಪಸಂಖ್ಯಾತರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡುವಂತೆ ಹೇಳಿದ್ದ ಕಾಂಗ್ರೆಸ್‌ನ ಹಿರಿಯ ನಾಯಕರಿಗೂ ಅಸಮಾಧಾನ ಉಂಟಾಗಿತ್ತು. ಇದೀಗ ಉಂಟಾಗಿದ್ದ ಗೊಂದಲ ಬಗೆಹರಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಈ ಆದೇಶ ಮಾಡಿದ್ದಾರೆ

ಯು.ಟಿ. ಖಾದರ್‌ ಅವರನ್ನು ಉಪನಾಯಕರನ್ನಾಗಿ ನೇಮಿಸಿರುವುದರಿಂದ ವಿಧಾನಸಭೆ ಚುನಾವಣೆ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಉಂಟಾಗುತ್ತಿದ್ದ ಕಾರ್ಯ ಭಾರ ತುಸು ಕಡಿಮೆಯಾಗುವ ಸಾಧ್ಯತೆ ಇದೆ.

 

click me!