ಖಾತೆ ಅಂತಿಮ, ಯಾರ ಬಳಿ ಇದ್ದಿದ್ದು ಯಾರಿಗೆ, ಲಾಭ ನಷ್ಟದ ಲೆಕ್ಕಾಚಾರ!

By Suvarna News  |  First Published Feb 10, 2020, 5:47 PM IST

ಕರ್ನಾಟಕದ ನೂತನ ಸಚಿವರಿಗೆ ಖಾತೆ ಹಂಚಿಕೆ/ ಯಾರಿಗೆ ಯಾವ ಖಾತೆ?/ ಲಾಭ ನಷ್ಟದ ಲೆಕ್ಕಾಚಾರ/ ಬಿಎಸ್‌ವೈ ರಣತಂತ್ರ ಏನು?


ಬೆಂಗಳೂರು[ಫೆ.10]: ಅಂತೂ ಇಂತೂ ಯಡಿಯೂರಪ್ಪ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಫೈನಲ್ ಪಟ್ಟಿ ರೆಡಿಯಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಿದ್ಧಪಡಿಸಿರುವ ಈ ಪಟ್ಟಿಗೆ ರಾಜ್ಯಪಾಲ ವಜುಭಾಯಿ ವಾಲಾ ಅಂಕಿತ ಹಾಕಿದ್ದಾರೆ. ನಿರೀಕ್ಷೆಯಂತೆ ರಮೇಶ್ ಜಾರಕಿಹೊಳಿ ಹಾಗೂ ಎಸ್. ಟಿ. ಸೋಮಶೇಖರ್ ತಮಗೆ ಬೇಕಾದ ಖಾತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿ. ಎಸ್. ವೈ ಅಳೆದು ತೂಗಿ ಈ ಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರಕ್ಕೆ ನನಗೆ ಮನಸ್ಸಿರಲಿಲ್ಲ: ರಮೇಶ್‌ ಜಾರಕಿಹೊಳಿ

Tap to resize

Latest Videos

  ಹಾಗಾದರೆ ಯಾರಿಗೆ ಯಾವ ಖಾತೆ ಸಿಕ್ಕಿದೆ? ಯಾರ ಬಳಿ ಇದ್ದ ಖಾತೆ ಯಾರ ಪಾಲಾಗಿದೆ ಎನ್ನುವುದರ ಸಂಪೂರ್ಣ ಪಟ್ಟಿ ಇಲ್ಲಿದೆ. ಡಿಸಿಎಂ ಅಶ್ವಥ್ ನಾರಾಯಣ ಅವರ ಬಳಿ ಇದ್ದ ಪ್ರಮುಖ ಖಾತೆ ವೈದ್ಯಕೀಯ ಶಿಕ್ಷಣವನ್ನು ಮತ್ತೊಬ್ಬ ಡಾಕ್ಟರ್ ಸುಧಾಕರ್ ಅವರಿಗೆ ನೀಡಲಾಗಿದೆ. ಆದರೆ ಮತ್ತೊಬ್ಬ ಡಿಸಿಎಂ ಲಕ್ಷಣ ಸವದಿ ಸಾರಿಗೆ ಖಾತೆ ಭದ್ರವಾಗಿದೆ.


* ರಮೇಶ್ ಜಾರಕಿಹೊಳಿ(ವಾಲ್ಮೀಕಿ) ಜಲಸಂಪನ್ಮೂಲ ಖಾತೆ (ಸಿಎಂ ಬಿಎಸ್ ಯಡಿಯೂರಪ್ಪ ಬಳಿ ಇತ್ತು)

* ಆನಂದ್ ಸಿಂಗ್(ರಜಪೂತ) - ಆಹಾರ ಮತ್ತು ನಾಗರಿಕರ ಪೂರೈಕೆ ಖಾತೆ( ಶಶಿಕಲಾ ಜೊಲ್ಲೆ  ಬಳಿ ಇತ್ತು)

* ಶ್ರೀಮಂತ್ ಪಾಟೀಲ್ (ಮರಾಠ ಜೈನ್)- ಜವಳಿ ಖಾತೆ(ನಾಗೇಶ್ ಬಳಿ ಇತ್ತು) 

* ಕೆ. ಗೋಪಾಲಯ್ಯ(ಒಕ್ಕಲಿಗ)- ಸಣ್ಣ ಕೈಗಾರಿಕೆ, ಸಕ್ಕರೆ ಖಾತೆ(ಸಿಟಿ ರವಿ)

* ಎಸ್.ಟಿ. ಸೋಮಶೇಖರ್(ಒಕ್ಕಲಿಗ) -ಸಹಕಾರ ಖಾತೆ(ಬಸವರಾಜ ಬೊಮ್ಮಾಯಿ)

* ಬಿ. ಸಿ. ಪಾಟೀಲ್(ಲಿಂಗಾಯತ)- ಅರಣ್ಯ ಖಾತೆ(ಸಿಸಿ ಪಾಟೀಲ್ ಬಳಿ ಇತ್ತು)

* ಡಾ. ಕೆ. ಸುಧಾಕರ್(ಒಕ್ಕಲಿಗ)- ವೈದ್ಯಕೀಯ ಶಿಕ್ಷಣ( ಅಶ್ವತ್ಥ ನಾರಾಯಣ ಬಳಿ ಇತ್ತು)

* ಭೈರತಿ ಬಸವರಾಜ್-  ನಗರಾಭಿವೃದ್ಧಿ ಖಾತೆ (ಬೆಂಗಳೂರು ನಗರ ಹೊರತುಪಡಿಸಿ)

* ನಾರಾಯಣಗೌಡ(ಒಕ್ಕಲಿಗ) ಪೌರಾಡಳಿತ ಖಾತೆ (ಆರ್. ಅಶೋಕ್ ಬಳಿ ಇತ್ತು).

* ಶಿವರಾಮ್ ಹೆಬ್ಬಾರ್(ಬ್ರಾಹ್ಮಣ)- ಕಾರ್ಮಿಕ ಖಾತೆ( ಸುರೇಶ್ ಕುಮಾರ್ ಬಳಿ ಇತ್ತು)

ಡಿಕೆಶಿ ಬಳಿಯಿದ್ದ ಖಾತೆಯೇ ಬೇಕೆಂದು ಪಟ್ಟು: ಜಲಸಂಪನ್ಮೂಲ ಖಾತೆ ಜಾರಕಿಹೊಳಿಗೆ?
 

ಫೆಬ್ರವರಿ 10ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ


 

click me!