
ನವದೆಹಲಿ(ಮೇ.26): ಕರ್ನಾಟಕದ ಸಚಿವ ಸಂಪುಟ ಸರ್ಕಸ್ ಅಂತಿಮ ಹಂತ ತಲುಪಿದೆ. ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡೆಸಿದೆ ಸತತ ಸಭೆಯಲ್ಲಿ 24 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಆಪ್ತರಿಗೆ ಮಣೆ ಹಾಕಲಾಗಿದೆ. ವಿಶೇಷ ಅಂದರೆ ಎರಡೂ ಸದಸ್ಯ ಅಲ್ಲದ ಬೋಸರಾಜ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ. ಇನ್ನುಳಿದಂತೆ ಲಕ್ಷ್ಮಿ ಹೆಬ್ಬಾಳ್ಕರ್, ಬೈರತಿ ಸುರೇಶ್, ಶಿವರಾಜ ತಂಗಡಗಿ ಸೇರಿದಂತೆ 24 ಶಾಸಕರಿಗೆ ಸಿದ್ದು ಸಂಪುಟ ಸೇರುವ ಸಾಧ್ಯತೆ ಇದೆ.
ಸಿದ್ದರಾಯ್ಯ ಸಚಿವ ಸಂಪುಟಕ್ಕೆ ಸೇರಿಕೊಳ್ಳಲಿರುವ 24 ಶಾಸಕರ ಪಟ್ಟಿ!
ಈಶ್ವರ ಖಂಡ್ರೆ
ಲಕ್ಷ್ಮಿ ಹೆಬ್ಬಾಳಕರ್
ಶಿವಾನಂದ ಪಾಟೀಲ್
ದರ್ಶನಾಪುರ
ಡಾ. ಎಚ್. ಸಿ. ಮಹಾದೇವಪ್ಪ
ಪಿರಿಯಾಪಟ್ಟಣ ವೆಂಕಟೇಶ್
ಎಸ್.ಎಸ್. ಮಲ್ಲಿಕಾರ್ಜುನ
ಬೈರತಿ ಸುರೇಶ್
ಕೃಷ್ಣ ಬೈರೇಗೌಡ
ರಹೀಂ ಖಾನ್
ಪುಟ್ಟರಂಗ ಶೆಟ್ಟಿ
ಚಿಂತಾಮಣಿ ಸುಧಾಕರ್
ಎಚ್.ಕೆ. ಪಾಟೀಲ್
ಚೆಲುವರಾಯಸ್ವಾಮಿ
ಮಧುಗಿರಿ ರಾಜಣ್ಣ
ಸಂತೋಷ್ ಲಾಡ್
ಮಧು ಬಂಗಾರಪ್ಪ
ಮಾಂಕಾಳ ವೈದ್ಯ
ಶಿವರಾಜ ತಂಗಡಗಿ
ತಿಮ್ಮಾಪುರ
ರುದ್ರಪ್ಪ ಲಮಾಣಿ
ಶರಣ ಪ್ರಕಾಶ್ ಪಾಟೀಲ್
ಭೋಸರಾಜು
ನಾಗೇಂದ್ರ
ಲೋಕಸಭೆ ರಿಸಲ್ಟ್ ಮೇಲೆ ಕಾಂಗ್ರೆಸ್ ಸರ್ಕಾರದ ಭವಿಷ್ಯ: ಎಚ್‌ಡಿಕೆ
24 ನೂತನ ಸಚಿವರು ನಾಳೆ 11.45ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಯಚೂರು ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್ ಕೇಳಿದ್ದ ಬೋಸರಾಜ್‌ಗೆ ಅದೃಷ್ಠ ಒಲಿದಿದೆ ಎರಡೂ ಸದನದ ಸದಸ್ಯರಲ್ಲದ ಬೋಸರಾಜ್‌ಗೆ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿ 10 ಮಂದಿ ಸಂಪುಟದಲ್ಲಿದ್ದು, 34 ಸದಸ್ಯ ಬಲದ ಸಂಪುಟದಲ್ಲಿ ಹಾಲಿ 24 ಸ್ಥಾನಗಳು ಖಾಲಿ ಇವೆ. ಸಚಿವ ಸಂಪುಟ ಸೇರ್ಪಡೆಗೆ ಆಕಾಂಕ್ಷಿಗಳಿಂದ ತೀವ್ರ ಒತ್ತಡವಿರುವ ಕಾರಣ ಈ ಎಲ್ಲ ಸ್ಥಾನಗಳನ್ನು ತುಂಬಿಕೊಳ್ಳಲು ಸರಣಿ ಸಭೆ ನಂತರ ವರಿಷ್ಠರು ತೀರ್ಮಾನಿಸಿದರು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿದೆ.
ಜೂ.1ರಿಂದ ವಿದ್ಯುತ್ ಬಿಲ್ ಕಟ್ಟಬೇಡಿ: ಸಂಸದ ಪ್ರತಾಪ್ ಸಿಂಹ
ಸಂಪುಟ ವಿಸ್ತರಣೆ ಸಲುವಾಗಿದೆಹಲಿ ತಲುಪಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಗುರುವಾರ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಸರಣಿ ಸಭೆ ನಡೆಸಿದರು. ಇಬ್ಬರೂ ನಾಯಕರು ತಮ್ಮದೇ ಆದ ಪಟ್ಟಿಹೊಂದಿದ್ದರಿಂದ ಈ ಪಟ್ಟಿಗಳ ನಡುವೆ ಸಮತೋಲನ ರೂಪಿಸಲು ವರಿಷ್ಠರು ಹರಸಾಹಸ ನಡೆಸಿದರು. ಬಳಿಕ ಸೋನಿಯಾ ಗಾಂಧಿ ಜೊತೆ ನಡೆಸಿದ ಸಿದ್ದರಾಮಯ್ಯ ಸಂಪುಟ ಪಟ್ಟಿ ಅಂತಿಮಗೊಳಿಸಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳು ಪ್ರಭಾವಿ ಖಾತೆಗಳಿಗಾಗಿ ಪಟ್ಟು ಹಿಡಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.