
ನವದೆಹಲಿ(ಜ. 31) ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮುಕ್ತಾಯವಾಗಿದೆ. ನಗು ನಗುತ್ತಲೇ ಹೊರಬಂದಿರುವ ಬಿಎಸ್ ಯಡಿಯೂರಪ್ಪ ಇನ್ನು ಮೂರು ದಿನದಲ್ಲಿ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.
ಒಟ್ಟು 11 ಜನ ಸಚಿವರಾಗುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಉಪಚುನಾವಣೆಯಲ್ಲಿ ಗೆದ್ದ 11 ಜನರೋ ಎಂಬುದು ಗೊತ್ತಿಲ್ಲ. ರಾಣೆಬೆನ್ನೂರಿನ ಶಾಸಕ ಅರುಣ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡುವ ಪ್ರಸ್ತಾವನೆಯೇ ಇಲ್ಲ. ಜತೆಗೆ ಅಥಣಿಯ ಮಹೇಶ್ ಕುಮಟಳ್ಳಿ ಮತ್ತು ಕಾಗವಾಡದ ಶ್ರೀಮಂತ ಪಾಟೀಲ್ ಇಬ್ಬರಿಗೂ ಅಥವಾ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗುವುದು ಡೌಟು.
ವಿಸ್ತರಣೆ ವಿಳಂಬ; ರಹಸ್ಯ ಸ್ಥಳಕ್ಕೆ ಮಿತ್ರಮಂಡಳಿ
ಬೆಳಗಾವಿ ಮತ್ತು ಬೆಂಗಳೂರು ಭಾರ: ಉಮೇಶ್ ಕತ್ತಿ ಸಹ ಸಚಿವ ಸ್ಥಾನದ ರೇಸ್ ನಲ್ಲಿ ಇದ್ದಾರೆ. ಯಶವಂತಪುರದ ಎಸ್.ಟಿ.ಸೋ,ಶೇಖರ್, ಕೆಆರ್ ಪುರದ ಬೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್ ನ ಗೋಪಾಲಯ್ಯ, ಮಹದೇವಪುರದ ಅರವಿಂದ ಲಿಂಬಾವಳಿ ಸಹ ರೇಸ್ ನಲ್ಲಿ ಇದ್ದಾರೆ. ಅಲ್ಲಿಗೆ ಬೆಳಗಾವಿ ಮತ್ತು ಬೆಂಗಳೂರಿಗೆ ಅತಿ ಹೆಚ್ಚು ಸಚಿವ ಸ್ಥಾನ ಸಿಕ್ಕಂತೆ ಆಗುತ್ತದೆ. ಹೀಗೆ ಆದಲ್ಲಿ ಒಂದೆರಡು ಜಿಲ್ಲೆಗಳು ತಿರಸ್ಕಾರಕ್ಕೆ ಒಳಗಾಗುವುದು ಖಚಿತ.
ಸಾವಧಾನವಾಗಿ ಉತ್ತರಿಸಿದ ಬಿಎಸ್‌ವೈ: ಸಂಸತ್ ಭವನದ ಬಳಿ ಅಮಿತ್ ಶಾ ಭೇಟಿಯ ನಂತರ ಮಾತನಾಡಿದ ಯಡಿಯೂರಪ್ಪ ನಾವು ಒಂದಿಷ್ಟು ಸಲಹೆ ನೀಡಿದ್ದೇವೆ. ಆ ಸಲಹೆಗಳನ್ನು ಕೇಂದ್ರ ನಾಯಕರು ಸಕಾರಾತ್ಮವಾಗಿ ಸ್ವೀಕರಿಸಿದ್ದಾರೆ. ಎಲ್ಲವನ್ನು ಬೆಂಗಳೂರಿಗೆ ಬಂದು ಹೇಳುತ್ತೇನೆ ಎಂದು ತಿಳಿಸಿದರು. ಈ ವೇಳೆ ಪುತ್ರ, ಸಂಸದ ಬಿವೈ ರಾಘವೇಂದ್ರ ಜತೆಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.