Cabinet Expansion : ಸಂಪುಟ ವಿಸ್ತರಣೆ,  ಸಿಎಂ ಬೊಮ್ಮಾಯಿ ಸ್ಪಷ್ಟ ಸಂದೇಶ

By Kannadaprabha News  |  First Published Dec 7, 2021, 3:58 AM IST

* ಬೆಳಗಾವಿ ಕಲಾಪ ಬಳಿಕ  ಸಂಪುಟ ವಿಸ್ತರಣೆ: ಸಿಎಂ

* ವರಿಷ್ಠರ ಜತೆ ಚರ್ಚಿಸಿ ವಿಸ್ತರಣೆ ಬಗ್ಗೆ ತೀರ್ಮಾನ

* ಸದ್ಯ ಮೇಲ್ಮನೆ ಚುನಾವಣೆ ಮೇಲೆ ನಮ್ಮ ಗಮನ
* ಬಿಎಎಸ್ ಯಡಿಯೂರಪ್ಪ ಸಹ ಸುಳಿವು ಕೊಟ್ಟಿದ್ದರು


ಹುಬ್ಬಳ್ಳಿ(ಡಿ. 07)  ರಾಜ್ಯ ಬಿಜೆಪಿಯಲ್ಲಿ(Karnataka BJP) ತೀವ್ರ ಸಂಚಲನ ಮೂಡಿಸಿರುವ ಸಚಿವ ಸಂಪುಟ (Cabinet reshuffle) ವಿಸ್ತರಣೆ ಸದ್ಯಕ್ಕಿಲ್ಲ, ಅದೇನಿದ್ದರೂ ಬೆಳಗಾವಿ ಅಧಿವೇಶನದ ನಂತರದ ಪ್ರಕ್ರಿಯೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೀಡಿದ್ದಾರೆ. ಬೆಳಗಾವಿ (Belagavi) ಅಧಿವೇಶನದ ಬಳಿಕವಷ್ಟೇ ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನಾವು ವಿಧಾನ ಪರಿಷತ್‌ (MLC Election) ಚುನಾವಣೆ ಕುರಿತಷ್ಟೇ ಗಮನ ಕೊಡುತ್ತಿದ್ದೇವೆ. ಆ ಬಳಿಕ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅದಾದ ನಂತರ ವರಿಷ್ಠರ ಸಲಹೆ ಪಡೆದು ಸಚಿವ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

Tap to resize

Latest Videos

undefined

ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇತ್ತೀಚೆಗೆ ಸುಳಿವು ಕೊಟ್ಟಿದ್ದರು. ಸಚಿವ ಸಂಪುಟಕ್ಕೆ ಯಾರನ್ನು ತೆಗೆದುಕೊಳ್ಳಬೇಕು? ಯಾರನ್ನು ಕೈಬಿಡಬೇಕು ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ತೀರ್ಮಾನಿಸಲಿದ್ದಾರೆ ಎಂದು ದಾವಣಗೆರೆಯಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ಪ್ರತಿಕ್ರಿಯಿಸಿದ್ದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರು ಮೊದಲಿಗೆ 29 ಸಚಿವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಆ ಬಳಿಕ ಬೊಮ್ಮಾಯಿ ಅವರು ದೆಹಲಿಗೆ ಭೇಟಿ ಕೊಟ್ಟಾಗಲೆಲ್ಲ ಸಂಪುಟ ವಿಸ್ತರಣೆಯ ಮಾತುಗಳು ಕೇಳಿಬರುತ್ತಲೇ ಇದ್ದವು. ಸ್ವತಃ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಈ ವಿಚಾರ ಪ್ರಸ್ತಾಪಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಹೊಸ ಮುಖಗಳಿಗೆ ಆದ್ಯತೆ  ನೀಡಲಾಗುತ್ತದೆಯಾ? ಅಥವಾ ವಿಧಾನ ಪರಿಷತ್ ನಲ್ಲಿ ಗೆದ್ದವರಿಗೆ ಮೊದಲ ಸಾರಿ ಸಂಪುಟ್ ಸೇರಲು ಅವಕಾಶ  ಮಾಡಿಕೊಡಲಾಗುತ್ತದೆಯಾ  ಎಂಬ ಪ್ರಶ್ನೆಗಳು ಮೂಡಿವೆ. ಸಚಿವಸ್ಥಾನದ ರೇಸ್ ನಲ್ಲಿರುವ ಕೆಲ ಶಾಸಕರು ಈಗಾಗಲೇ ಸದ್ದಿಲ್ಲದೆ ದೆಹಲಿ ಪ್ರವಾಸವನ್ನು ನಡೆಸಿದ್ದಾರೆ.  ಹಿಂದಿನ ಕಾಂಗ್ರೆಸ್ ನಂತೆ ಈಗ ಬಿಜೆಪಿಯಲ್ಲಿಯೂ ಹೈಕಮಾಂಡ್ ತೀರ್ಮಾನವೇ ಅಂತಿಮ.
 
ಜಿದ್ದಾಜಿದ್ದಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಜೆಡಿಎಸ್‌ (JDS) ಮತ್ತು ಕಾಂಗ್ರೆಸ್‌ (Congress) ಅಭ್ಯರ್ಥಿಗಳು ಮತಬೇಟೆಯಲ್ಲಿ ಜಿದ್ದಾ ಜಿದ್ದಿನ ಪೈಪೋಟಿಗಿಳಿದಿದ್ದಾರೆ. ಗ್ರಾಪಂ ಸದಸ್ಯರನ್ನೇ ಗುರಿಯಾಗಿಸಿಕೊಂಡು ಚುನಾವಣಾ (Election) ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎರಡೂ ಪಕ್ಷಗಳು ಗೆಲುವಿಗೆ ಶತ ಪ್ರಯತ್ನ ನಡೆಸುತ್ತಿವೆ. ಜೆಡಿಎಸ್‌ , ಕಾಂಗ್ರೆಸ್‌ ಪಕ್ಷಗಳಿಗೆ ಸರಿಸಮನಾಗಿ ಪೈಪೋಟಿ ನೀಡುವುದಕ್ಕೆ ಮುಂದಾಗಿರುವ ಬಿಜೆಪಿ, ಅಬ್ಬರದ ಚುನಾವಣಾ ಪ್ರಚಾರದೊಂದಿಗೆ ಮುನ್ನಡೆಯುತ್ತಿದೆ. 

ಅಖಾಡದಲ್ಲಿ ಹಿಂದಿನವರೇ ಇದ್ದರೂ ಈ ಬಾರಿ ವರಸೆ ಮಾತ್ರ ಬದಲಾಗಿದೆ. ಕಾಂಗ್ರೆಸ್ ನ ಕೆಲ ನಾಯಕರೆ ತಮಗೆ ವಿಧಾನ ಪರಿಷತ್ ಬೇಡ ಎಂದು ಹಿಂದಕ್ಕೆ ಸರಿದಿದ್ದಾರೆ. ಬಿಜೆಪಿ ಸಹ ಅಳೆದು ತೂಗಿ ಟಿಕೆಟ್ ನೀಡಿದೆ. 

 

click me!