'ಬಿಹಾರದಲ್ಲಿಯೂ ನಮ್ಮದೆ ಸರ್ಕಾರ' ಗುಟ್ಟು ಹೇಳಿದ ಕೇಂದ್ರ ಸಚಿವ

By Suvarna News  |  First Published Nov 10, 2020, 11:39 PM IST

ಮೋದಿ ಮತ್ತು ಬಿಜೆಪಿ ಪರವಾಗಿ ಜನಾದೇಶ/ ಬಿಹಾರದಲ್ಲಿಯೂ ಸರ್ಕಾರ ರಚನೆ ಮಾಡಲಿದ್ದೇವೆ/ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ/ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಕೇಂದ್ರ ಸಚಿವ


ನವದೆಹಲಿ( ನ.  10) ಬಿಹಾರ ಹೊರತುಪಡಿಸಿ ದೇಶಾದ್ಯಂತ 58 ಸ್ಥಾನಗಳಿಗೆ  ನಡೆದ ಉಪಚುನಾವಣೆ  48 ಕಡೆ ಬಿಜೆಪಿ ಗೆದ್ದಿದೆ ಮತದಾರರು ನಿಶ್ಚಳ ಬಹುಮತ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಆರ್ ಆರ್ ನಗರ, ಶಿರಾದಲ್ಲಿ ನಮಗೆ ವಿಜಯ ಸಿಕ್ಕಿದೆ. ಎಲ್ಲಿ ಬಿಜೆಪಿ ಅಲೆ? ಎಂದು  ಕೇಳುತ್ತಿದ್ದವರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯಗೆ ಟಾಂಗ್ ನೀಡಿದರು. 

Tap to resize

Latest Videos

undefined

'ಸಿದ್ದರಾಮಯ್ಯಗೆ ಈಗ ಜ್ಞಾನೋದಯ, ಬಿಜೆಪಿಗೆ ಬೆಂಬಲ'

ಮೋದಿ ಮತ್ತು ಬಿಎಸ್ ವೈ ನೇತೃತ್ವವನ್ನು ಜನ ಒಪ್ಪಿಕೊಂಡಿದ್ದಾರೆ. ಬಿಎಸ್ ವೈ ಆಡಳಿತವನ್ನು ಕರ್ನಾಟಕ ಜನರು ಮೆಚ್ಚುಕೊಂಡಿದ್ದಾರೆ ಅನ್ನೋದು ಈಗ ಸಾಬೀತಾಗಿದೆ. ಬಿಹಾರದಲ್ಲೂ ಎನ್ ಡಿ ಎ ಸರ್ಕಾರ ರಚನೆ ಮಾಡಲಿದೆ. ಪಶ್ಚಿಮ ಬಂಗಾಳದಲ್ಲೂ ಟಿಎಂಸಿ ಗೆ ಸೋಲಾಗಲಿದೆ ಎಂದು ಭವಿಷ್ಯ ನುಡಿದರು. 

ಬಿಹಾರ ಚುನಾವಣಾ ಫಲಿತಾಂಶ ರೋಚಕ ಘಟ್ಟಕ್ಕೆ ತೆರಳುತ್ತಿದ್ದು ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವೆ ರೋಚಕ ಹಣಾಹಣಿ ಏರ್ಪಟ್ಟಿದೆ. 

click me!