ಬದಲಾಯ್ತು ಟ್ರೆಂಡ್‌, ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ!

By Suvarna NewsFirst Published May 2, 2021, 10:24 AM IST
Highlights

ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಉಪ ಚುನಾವಣಾ ಕಣದಲ್ಲಿ ಭಾರೀ ಪೈಪೋಟಿ| ಬೆಳಗಾವಿ, ಬಸವ ಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ| ಹೀಗಿದೆ ಈವರೆಗಿನ ಫಲಿತಾಂಶ

ಬೆಂಗಳೂರು(ಮೇ.02):  ಪಂಚರಾಜ್ಯ ಚುನಾವಣೆ ಮಧ್ಯೆ ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳ ಫಲಿತಾಂಶವೂ ಭಾರೀ ಕುತೂಹಲ ಮೂಡಿಸಿದೆ. ಈ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡು ಬಂದಿದ್ದು, ಉಭಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಸದ್ಯ ಮತ ಎಣಿಕೆ ಆರಂಭವಾಗಿದ್ದು, ಟ್ರೆಂಡ್‌ ಬದಲಾಗಿದೆ. ಹೌದು ಕಾಂಗ್ರೆಸ್‌ ಹಿಂದಿಕ್ಕಿದ ಬಿಜೆಪಿ ಎರಡು ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

 

ಹೌದು ಬೆಳಗಾವಿ ಕ್ಷೇತ್ರದಲ್ಲಿ ಹಾದು ಏಣಿ ಆಟ ಆರಂಭವಾಗಿದೆ. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಸತೀಶ್ ಜಾರಕಿಹೊಳಿ ಹಿಂದುಳಿದಿದ್ದಾರೆ. ಕಾಂಗ್ರೆಸ್‌ ನಾಯಕ ಸತೀಶ್ ಜಾರಕಿಹೊಳಿಗೆ 66,832 ಮತಗಳು ಲಭಿಸಿದ್ದು, ಮುನ್ನಡೆ ಸಾಧಿಸಿರುವ ಮಂಗಳಾ ಅಂಗಡಿಗೆ 69,894 ಮತ ಗಳಿಸಿದ್ದಾರೆ.

ಇನ್ನು ಮಸ್ಕಿ ವಿಧಾನಸಭಾ ಚುನಾವಣಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರವೀಹಾಳ 22,624 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ 14,733 ಮತಗಳ ಅಂತರದಿಂದ ಹಿಂದೆ ಉಳಿದಿದ್ದಾರೆ.

ಇನ್ನು ಬಸವಕಲ್ಯಾಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 12,023 ಮತಗಳಿಂದ ಶರಣು ಸಲಗರ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ನಾರಾಯಣ ರಾವ್‌ 6,291 ಮತಗಳನ್ನು ಗಳಿಸಿದ್ದಾರೆ.

ಮತ ಎಣಿಕೆಗೆ ಕೋವಿಡ್‌ ಮಾರ್ಗಸೂಚಿ

ಮೂರು ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆಯು ಭಾನವಾರ ಬೆಳಗ್ಗೆ 8 ಗಂಟೆಯಿಂದ ಎಣಿಕೆ ನಡೆಯಲಿದ್ದು, ಕೋವಿಡ್‌ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮತ ಎಣಿಕೆ ಕೊಠಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿದ್ದು, 17 ಕೊಠಡಿಗಳಲ್ಲಿ ಮತ ಎಣಿಕೆ ವ್ಯವಸ್ಥೆ ಮಾಡಲಾಗಿದೆ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಬಿವಿಬಿ ಕಾಲೇಜಿನಲ್ಲಿ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ಎಸ್‌ಆರ್‌ಪಿಎಸ್‌ ಕಾಲೇಜಿನಲ್ಲಿ ಜರುಗಲಿದೆ. ಎರಡು ಕಾಲೇಜಿನಲ್ಲಿಯೂ ತಲಾ ಮೂರು ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಮತ ಎಣಿಕೆ ಕೇಂದ್ರದ ಸುತ್ತ ಯಾವುದೇ ಜನರನ್ನು ಸೇರುವಂತಿಲ್ಲ. ಅಲ್ಲದೇ, ಯಾವುದೇ ರೀತಿಯಾದ ಮೆರವಣಿಗೆ, ವಿಜಯೋತ್ಸವ ಆಚರಣೆ ಮಾಡುವಂತಿಲ್ಲ. ಮತ ಎಣಿಕೆಯ ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಯ ಜತೆ ಇಬ್ಬರಿಗೆ ಮಾತ್ರ ಪ್ರಮಾಣ ಪತ್ರ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಮಾಧ್ಯಮದವರಿಗೂ ಇದೇ ಮಾರ್ಗಸೂಚಿ ಅನ್ವಯವಾಗಲಿದೆ. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಆಯೋಗವು ಸ್ಪಷ್ಟವಾಗಿ ತಿಳಿಸಿದೆ.

click me!