
ಬೆಂಗಳೂರು[ನ.19]: ಯಶವಂತಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಂತಿಮ ಕ್ಷಣದಲ್ಲಿ ಕಣಕ್ಕಿಳಿದಿರುವ ಪಿ. ನಾಗರಾಜ್ (ಪಾಳ್ಯ ನಾಗರಾಜ್) ಅವರು ತಮ್ಮ ಕುಟುಂಬದ ಬಳಿ 38.5 ಕೋಟಿ ರು. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.
ಸೋಮವಾರ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಬಳಿ 10 ಲಕ್ಷ ರು. ನಗದು ಹಾಗೂ ಪತ್ನಿ ತುಂಗಾ ಅವರ ಬಳಿ 27.43 ಲಕ್ಷ ರು. ನಗದು ಇದೆ ಎಂದು ಹೇಳಿದ್ದಾರೆ. ನಾಗರಾಜ್ ಬಳಿ ಒಟ್ಟು 13.14 ಕೋಟಿ ರು. ಮೌಲ್ಯದ ಚರಾಸ್ತಿ, ಪತ್ನಿ ಬಳಿ 11.61 ಕೋಟಿ ರು. ಮೌಲ್ಯದ ಚರಾಸ್ತಿ, ಪುತ್ರ ಪುನೀತ್ ಬಳಿ 3.49 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ. ಈ ಪೈಕಿ ನಾಗರಾಜ್ 68 ಲಕ್ಷ ರು. ಮೌಲ್ಯದ ಜಾಗ್ವಾರ್ ಕಾರು, 35.5 ಲಕ್ಷ ರು. ಮೌಲ್ಯದ ಫಾರ್ಚೂನರ್ ಕಾರು, 10 ಲಕ್ಷ ರು. ಮೌಲ್ಯದ ಎರ್ಟಿಗಾ ಕಾರು ಹೊಂದಿದ್ದಾರೆ.
1 ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ:
ನಾಗರಾಜ್ ಬಳಿ 8 ಲಕ್ಷ ರು. ಮೌಲ್ಯದ 250 ಗ್ರಾಂ ಚಿನ್ನ, ಪತ್ನಿ ಬಳಿ 16 ಲಕ್ಷ ರು. ಮೌಲ್ಯದ ಅರ್ಧ ಕೆ.ಜಿ. ಚಿನ್ನ, 2 ಲಕ್ಷ ರು. ಮೌಲ್ಯದ 5 ಕೆ.ಜಿ. ಬೆಳ್ಳಿ, ಪುತ್ರನ ಬಳಿ 250 ಗ್ರಾಂ ಚಿನ್ನ ಇದೆ. ತನ್ಮೂಲಕ ನಾಗರಾಜ್ ಬಳಿ ಒಟ್ಟು 1 ಕೆ.ಜಿ. ಚಿನ್ನ, 5 ಕೆ.ಜಿ. ಬೆಳ್ಳಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಉಳಿದಂತೆ, 15.3 ಕೋಟಿ ರು.ಗಳಷ್ಟುಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಹೊಂದಿದ್ದಾರೆ. ಒಟ್ಟು 10.26 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಿಸಿಕೊಂಡಿದ್ದಾರೆ. ರಾಮನಗರದಲ್ಲಿ 2 ಕೋಟಿ ರು. ಮೌಲ್ಯದ 10 ಎಕರೆ ಕೃಷಿ ಜಮೀನು, 3 ಕೋಟಿ ರು. ಮೌಲ್ಯದ 3.26 ಎಕರೆ ಕೃಷಿಯೇತರ ಜಮೀನು, 2 ಕೋಟಿ ರು. ಮೌಲ್ಯದ ವಾಣಿಜ್ಯ ಪ್ರದೇಶ, 2 ಕೋಟಿ ರು. ಮೌಲ್ಯದ 35,027 ಚದರಡಿ ವಸತಿ ಪ್ರದೇಶ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ 25 ಲಕ್ಷ ರು. ಹಾಗೂ ಪುತ್ರನ ಹೆಸರಿನಲ್ಲಿ 1 ಲಕ್ಷ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಅಭ್ಯರ್ಥಿ ಹೆಸರು: ಪಿ. ನಾಗರಾಜ್
ವಿದ್ಯಾರ್ಹತೆ : ಎಸ್ಸೆಸ್ಸೆಲ್ಸಿ (ಅಪೂರ್ಣ)
ಆಸ್ತಿ ವಿವರ : 38.5 ಕೋಟಿ ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.