ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾ ವಣೆಯ ಮತದಾನದ ಪ್ರಮಾಣವು ಶೇ. 67.90 ರಷ್ಟು ಆಗಿದೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿದೆ.
ಬೆಂಗಳೂರು[ಡಿ.07] : ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಉಪಚುನಾ ವಣೆಯ ಮತದಾನದ ಪ್ರಮಾಣವು ಶೇ. 67.90 ರಷ್ಟು ಆಗಿದೆ ಎಂದು ಚುನಾವಣಾ ಆಯೋಗವು ಅಧಿಕೃತವಾಗಿ ಪ್ರಕಟಿಸಿದೆ.
ಗುರುವಾರ ಅಂದಾಜು ಶೇಕಡಾವಾರು ನೀಡಿದ್ದ ಆಯೋಗವು ಶುಕ್ರವಾರ ಎಲ್ಲಾ ಕ್ಷೇತ್ರ ಗಳಿಂದ ಮಾಹಿತಿ ಪಡೆದುಕೊಂಡು ಅಧಿಕೃತ ವಾಗಿ ಫಲಿತಾಂಶದ ಮಾಹಿತಿಯನ್ನು ನೀಡಿದೆ. ಹೊಸಕೋಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.90.90 ರಷ್ಟು ಮತದಾನವಾಗಿದ್ದು, ಕೆ.ಆರ್.ಪುರಕ್ಷೇತ್ರದಲ್ಲಿ ಅತಿ ಕಡಿಮೆ ಶೇ.46.74ರಷ್ಟು ಮತದಾನ ದಾಖಲಾಗಿದೆ. 15 ವಿಧಾನಸಭಾ ಕ್ಷೇತ್ರದಲ್ಲಿ 37.77 ಲಕ್ಷ ಮತದಾರರಿದ್ದು, 25.65ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಶೇ.67.90ರಷ್ಟು ಮತ ದಾನವಾಗಿದೆ ಎಂದು ಆಯೋಗವು ಅಂತಿಮ ಅಂಕಿ-ಅಂಶವನ್ನು ಬಿಡುಗಡೆ ಮಾಡಿದೆ.
ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ 2.19ಲಕ್ಷ ಮತದಾರರಿದ್ದು, 1.65 ಲಕ್ಷ ಮತದಾರರು ಮತಚಲಾಯಿಸಿದ್ದಾರೆ. ಇದರಲ್ಲಿ 86,653 ಪುರುಷರು, 79034 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು ಶೇ.75 .37ರಷ್ಟು ಮತದಾನವಾಗಿದೆ.ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 1.86 ಲಕ್ಷ ಮತದಾರರಿದ್ದು,1.41 ಲಕ್ಷ ಮತದಾರರು ಮತದಾನ ಮಾಡಿದ್ದಾರೆ. ಈ ಪೈಕಿ 74,071 ಪುರುಷರು, 67,874 ಮಹಿಳೆಯರು ಮತ್ತು ಒಬ್ಬರು ಇತರರು ಮತದಾನ ಮಾಡಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು ಶೇ.76.24ರಷ್ಟು ಮತದಾನ ವಾಗಿದೆ. ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ 2.44 ಲಕ್ಷ ಮತದಾರರಿದ್ದು, 1.78 ಲಕ್ಷ ಮತ ದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಶೇ.73.03ರಷ್ಟು ಮತದಾನವಾಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ 1.72 ಲಕ್ಷ ಮತದಾರರಿದ್ದು, 1.33 ಲಕ್ಷ ಮತದಾರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.77.53ರಷ್ಟು ಮತದಾನವಾಗಿದೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ೧.೮೩ಮತದಾರರಿದ್ದು, 1.45 ಲಕ್ಷ ಮತದಾರರುತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಶೇ.79.03ರಷ್ಟು ಮತದಾನವಾಗಿದೆ. ರಾಣೆಬೆ ನ್ನೂರು ವಿಧಾನಕ್ಷೇತ್ರದಲ್ಲಿ 2.33 ಲಕ್ಷ ಮತದಾರರಿದ್ದು, 1.72 ಮತದಾರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ. 73.93 ರಷ್ಟು ಮತದಾನವಾಗಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 2.37 ಲಕ್ಷ ಮತದಾರರಿದ್ದು, 1.54 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಶೇ.65.02ರಷ್ಟು ಮತದಾನವಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷ ಮತದಾರರಿದ್ದು, 1.73 ಲಕ್ಷ ಮತದಾರರು ಮತದಾನ ಮಾಡಿದ್ದಾರೆ.ಕ್ಷೇತ್ರದಲ್ಲಿ ಶೇ.86.84ರಷ್ಟು ಮತದಾನವಾಗಿದೆ.
ಫಲಿತಾಂಶ ನೋಡಿ ಜೆಡಿಎಸ್ ಜತೆ ಮೈತ್ರಿ ನಿರ್ಧಾರ...
ಕೆ.ಆರ್.ಪುರ ವಿಧಾನಕ್ಷೇತ್ರದಲ್ಲಿ 4.87 ಲಕ್ಷ ಮತದಾರರಿದ್ದು, 2.28 ಲಕ್ಷ ಮತದಾರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.46.74 ರಷ್ಟು ಮತದಾನವಾಗಿದೆ. ಯಶವಂತಪುರ ಕ್ಷೇತ್ರದಲ್ಲಿ 4.80 ಲಕ್ಷ ಮತದಾರರಿದ್ದು, 2.84 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಶೇ.59.10ರಷ್ಟು ಮತದಾನವಾಗಿದೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 2.85 ಲಕ್ಷ ಮತದಾರರಿದ್ದು, 1.46 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 74,985 ಪುರುಷರು, 71,404 ಮಹಿಳೆಯರು, 11 ಇತರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.51.21ರಷ್ಟು ಮತದಾನವಾಗಿದೆ.ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ 1.93 ಲಕ್ಷ ಮತದಾರಿದ್ದು, 93,144 ಮತದಾರರು
ಮತಚಲಾಯಿಸಿದ್ದಾರೆ. 48,845ಪುರುಷರು, 44,298 ಮಹಿಳೆಯರು, 1 ಇತರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.48.05ರಷ್ಟು ಮತದಾನವಾಗಿದೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 2.16 ಲಕ್ಷ ಮತದಾರರಿದ್ದು, 1.97 ಲಕ್ಷ ಮತದಾರರು ಮತ ಚಲಾಯಿಸಿದ್ದಾರೆ. 99,257 ಪುರುಷರು, 97,745 ಮಹಿಳೆಯರು, 4 ಇತರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.90.90ರಷ್ಟು ಮತದಾನವಾಗಿದೆ. ಕೆ.ಆರ್ .ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2.08 ಲಕ್ಷ ಮತದಾರರಿದ್ದು, 1.67 ಲಕ್ಷ ಮತದಾರರು ಮತಚಲಾಯಿಸಿದ್ದಾರೆ. 84,181 ಪುರುಷರು, 83,502 ಮಹಿಳೆಯರು 2 ಇತರರು ಮತದಾನ ಮಾಡಿದ್ದಾರೆ. ಕ್ಷೇತ್ರದಲ್ಲಿ ಶೇ.80.52 ಮತದಾನವಾಗಿದೆ.
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 2.27 ಲಕ್ಷ ಮತದಾರರಿದ್ದು, 1.83 ಲಕ್ಷ ಮತದಾರರು ಮತದಾನ ಮಾಡಿದ್ದಾರೆ.93,157 ಪುರುಷರು, 90573 ಮಹಿಳೆಯರು, 3 ಇತರರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಶೇ.80 .59ರಷ್ಟು ಮತದಾನವಾಗಿದೆ.