ಲೋಕಸಭೆ ಚುನಾವಣೆ 2024: ಬಿಜೆಪಿ ಟಿಕೆಟ್‌ ನಾಳೆ ಪ್ರಕಟ, ಯಡಿಯೂರಪ್ಪ

By Kannadaprabha NewsFirst Published Mar 21, 2024, 6:38 AM IST
Highlights

ಈಗಾಗಲೇ ಬಾಕಿ ಉಳಿದಿರುವ 5 ಕ್ಷೇತ್ರಗಳ ಕುರಿತು ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಸುದೀರ್ಘ ಚರ್ಚೆ ಯಾಗಿದೆ. ಮಾ.22ರಂದು ಅವರು ಪ್ರಧಾನಿ ಮೋದಿ ಜತೆ ಈ ಕುರಿತು ಚರ್ಚಿಸಿ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ 

ನವದೆಹಲಿ(ಮಾ.21): ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಉಳಿದ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಮಾ.22 ರಂದು ಘೋಷಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಹೇಳಿದರು. ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿ, ಈಗಾಗಲೇ ಬಾಕಿ ಉಳಿದಿರುವ 5 ಕ್ಷೇತ್ರಗಳ ಕುರಿತು ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಸುದೀರ್ಘ ಚರ್ಚೆ ಯಾಗಿದೆ. ಮಾ.22ರಂದು ಅವರು ಪ್ರಧಾನಿ ಮೋದಿ ಜತೆ ಈ ಕುರಿತು ಚರ್ಚಿಸಿ ಟಿಕೆಟ್ ಘೋಷಣೆ ಮಾಡಲಿದ್ದಾರೆ ಎಂದರು.

ಮೈತ್ರಿಯಿಂದಾಗಿ ಎನ್‌ಡಿಎ ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಅಮಿತ್ ಶಾ ಮತ್ತು ಮೋದಿ ಅವರ ಜತೆಗೆ ಸಂಪರ್ಕದಲ್ಲಿ ದ್ದಾರೆ. ಟಿಕೆಟ್ ಘೋಷಣೆ ಪೂರ್ಣಗೊಂಡ ಬಳಿಕ ರಾಜ್ಯಾದ್ಯಂತ ನಾವು ಪ್ರವಾಸ ಆರಂಭಿಸುತ್ತೇವೆ ಎಂದು ಮಾಹಿತಿ ನೀಡಿದರು.

ಪ್ರಚಾರಕ್ಕಾಗಿ ಏನೇನೋ ಮಾತನಾಡ್ತಾರೆ, ಎಚ್‌ಡಿಕೆ ಮಾತಿಗೆ ನಾನು ಉತ್ತರ ನೀಡಲ್ಲ: ಡಿ.ಕೆ. ಸುರೇಶ್‌

ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಲ್ಲ: ಪುತ್ರನಿಗೆ ಟಿಕೆಟ್ ಕೈತಪ್ಪಿದ ಕುರಿತು ಕೆ.ಎಸ್.ಈಶ್ವರಪ್ಪ ಅವರು ತಮ್ಮ ವಿರುದ್ಧ ಮಾಡುತ್ತಿರುವ ಟೀಕೆ ಗಳ ಕುರಿತ ಪ್ರಶ್ನೆಗೆ, ಅವರ ಬೇಜವಾರಿ ಹೇಳಿ ಕೆಗೆ ನಾನು ಪ್ರತಿಕ್ರಿಯಿಸಲ್ಲ. ಚುನಾ ವಣಾ ಸಮಿತಿಯಲ್ಲಿ ಆ ಕುರಿತು ಎಲ್ಲವೂ ನಿರ್ಧಾರ ಆಗುತ್ತದೆ. ಟಿಕೆಟ್ ಹಂಚಿಕೆಯಡಿಯೂರಪ್ಪನ ವೈಯಕ್ತಿಕ ನಿರ್ಧಾರ ಅಲ್ಲ. ಅದೆಲ್ಲ ಅವರಿಗೆ ಎರಡೂರು ದಿನದಲ್ಲಿ ಅರ್ಥ ಆಗಲಿದೆ. ಆಮೇಲೆ ಅವರೇ ಬರುತ್ತಾರೆ ಎಂದರು.

ನಾಳೆ ಮೋದಿ ಈ ಸಭೇಲಿ ಫೈನಲ್

ಮಾ.22ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಅಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ. ಆ ಬಳಿಕ ಹೆಸರು ಘೋಷಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ. 

click me!