Karnataka Politics ಎಂ.ಬಿ.ಪಾಟೀಲ್‌ಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ, ಡಿಕೆಶಿ, ಸಿದ್ದುಗೆ ಸವಾಲು

By Suvarna News  |  First Published Jan 25, 2022, 3:56 PM IST

* ಕರ್ನಾಟಕ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರಾಗಿ ಎಂಬಿ ಪಾಟೀಲ್ ನೇಮಕ
* ಎಂ.ಬಿ.ಪಾಟೀಲರಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ
* ಸಿದ್ದು-ಡಿಕೆ ಶಿವುಮಾರ್‌ಗೆ ಸವಾಲು



ಬೆಂಗಳೂರು, (ಜ.25):  ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ.ಬಿ ಪಾಟೀಲ್ (MB patil) ಅವರನ್ನು ಕರ್ನಾಟಕ ಕಾಂಗ್ರೆಸ್(Karnataka Congress) ಚುನಾವಣಾ ಪ್ರಚಾರ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇನ್ನೂ ಎಂಬಿ ಪಾಟೀಲ್ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿರುವ ಸಂಬಂಧ ಬಿಜೆಪಿ ಟ್ವೀಟ್  ಮಾಡಿದ್ದುಮ ಅಭಿನಂದನೆ ತಿಳಿಸುವುದರ ಜತೆ ವ್ಯಂಗ್ಯವಾಡಿದೆ.

Latest Videos

undefined

Karnataka Politics: ಡಬಲ್‌ ಇಂಜಿನ್‌ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ನಿಮ್ಮ ಹೊಸ ಜವಾಬ್ದಾರಿ ಧರ್ಮ ವಿಭಜನೆಗೆ ಪ್ರೇರಣೆ ನೀಡದಿರಲಿ ಎಂದು ನಾವು ಆಶಿಸುತ್ತೇವೆ. ಎಂ.ಬಿ.ಪಾಟೀಲ್‌ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ವೀರಶೈವ - ಲಿಂಗಾಯಿತ ಧರ್ಮ ವಿಭಜ‌ನೆಗೆ ಕಾರಣೀಕರ್ತರಾಗಿದ್ದರು. ಆಗ ಎಂಬಿ ಪಾಟೀಲರು ಸಿದ್ದರಾಮಯ್ಯನವರ ಕೈಗೊಂಬೆಯಾಗಿದ್ದರು, ಈಗ ಸಮಯದ ಗೊಂಬೆಯಾಗದಿರಿ ಎಂದು ಬಿಜೆಪಿ ಟಾಂಗ್ ಕೊಟ್ಟಿದೆ.

ಎಂ.ಬಿ ಪಾಟೀಲ್ (ಮಲ್ಲನಗೌಡ ಬಸನಗೌಡ ಪಾಟೀಲ) ಈ ಹಿಂದೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವಾರಗಿ ಕೆಲಸ ಮಾಡಿದ್ದರು. ಹೆಚ್.ಡಿ ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ತಮ್ಮ 27ನೇ ವಯಸ್ಸಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ ಎಂ.ಬಿ. ಪಾಟೀಲ್ ಮುಂದೆ ಲೋಕಸಭೆ ಸದಸ್ಯರಾಗಿಯೂ ಆಯ್ಕೆ ಆಗಿದ್ದರು.

ಎಂ.ಬಿ.ಪಾಟೀಲರಿಗೆ ಅಭಿನಂದನೆಗಳು. ನಿಮ್ಮ ಹೊಸ ಜವಾಬ್ದಾರಿ ಧರ್ಮ ವಿಭಜನೆಗೆ ಪ್ರೇರಣೆ ನೀಡದಿರಲಿ ಎಂದು ನಾವು ಆಶಿಸುತ್ತೇವೆ.

ಎಂ.ಬಿ.ಪಾಟೀಲ್‌ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ವೀರಶೈವ - ಲಿಂಗಾಯಿತ ಧರ್ಮ ವಿಭಜ‌ನೆಗೆ ಕಾರಣೀಕರ್ತರಾಗಿದ್ದರು.

ಆಗ ಅವರು ಸಿದ್ದರಾಮಯ್ಯನವರ ಕೈಗೊಂಬೆಯಾಗಿದ್ದರು, ಈಗ ಸಮಯದ ಗೊಂಬೆಯಾಗದಿರಿ. pic.twitter.com/RAQIAul5UQ

— BJP Karnataka (@BJP4Karnataka)

ಸಿದ್ದು-ಡಿಕೆಶಿಗೆ ಸವಾಲು
ಕಾಂಗ್ರೆಸ್ ಸೇರಲು ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಬಹಿರಂಗಪಡಿಸುವಂತೆ ಬಿಜೆಪಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದೆ. 

ಸಿದ್ದರಾಮಯ್ಯ ಹಾಗೂ ಡಿಕೆಶಿ ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುತ್ತಿದ್ದಾರೆ.ಬಿಜೆಪಿಯವರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಭ್ರಮೆ ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಈ ಇಬ್ಬರು ನಾಯಕರಿಗೆ ಧೈರ್ಯವಿದ್ದರೆ, ಅವರ ಸಂಪರ್ಕಕ್ಕೆ ಬಂದ ಒಬ್ಬ ಬಿಜೆಪಿ ಶಾಸಕನ ಹೆಸರನ್ನು ಬಹಿರಂಗಪಡಿಸಲಿ. #ಕಾಂಗ್ರೆಸ್‌ಕಳ್ಳಾಟ ಎಂದು ಟ್ವೀಟ್ ಮೂಲಕ ಸವಾಲು ಹಾಕಿದೆ.

ಸಿದ್ದರಾಮಯ್ಯನವರೇ,

ನಿಮ್ಮ ಜೊತೆ ಯಾರಾದರೂ ಬಂದರೆ ಅದು ತತ್ವ ಸಿದ್ದಾಂತದ ನಂಬಿಕೆಯಿಂದಲ್ಲ. ಅದು ಅವಕಾಶವಾದ ಹಾಗೂ ಅಧಿಕಾರ ದಾಹಕ್ಕಾಗಿ ಮಾತ್ರ.

— BJP Karnataka (@BJP4Karnataka)

ಸಿದ್ದರಾಮಯ್ಯನವರೇ, ನಿಮ್ಮ ಜೊತೆ ಯಾರಾದರೂ ಬಂದರೆ ಅದು ತತ್ವ ಸಿದ್ದಾಂತದ ನಂಬಿಕೆಯಿಂದಲ್ಲ. ಅದು ಅವಕಾಶವಾದ ಹಾಗೂ ಅಧಿಕಾರ ದಾಹಕ್ಕಾಗಿ ಮಾತ್ರ.#ಕಾಂಗ್ರೆಸ್‌ಕಳ್ಳಾಟ ಎಂದು ಟ್ವೀಟ್ ಮಾಡಿದೆ..

click me!