ಸಂತೋಷ್‌ ಜೀ-ಬಿಎಸ್‌ವೈ ಭೇಟಿ ಬಗ್ಗೆ ಬಿಜೆಪಿ ಸಾರಥಿ ಸ್ಪಷ್ಟನೆ

Published : Nov 24, 2020, 05:00 PM ISTUpdated : Nov 24, 2020, 06:01 PM IST
ಸಂತೋಷ್‌ ಜೀ-ಬಿಎಸ್‌ವೈ ಭೇಟಿ ಬಗ್ಗೆ ಬಿಜೆಪಿ ಸಾರಥಿ ಸ್ಪಷ್ಟನೆ

ಸಾರಾಂಶ

ಕರ್ನಾಟಕದಲ್ಲಿ ಆಗಾಗ ನಾಯಕತ್ವದ ಬದಲಾವಣೆ ಹಾಗೂ ಸತೋಷ್‌ ಜೀ-ಬಿಎಸ್‌ವೈ ಭೇಟಿ ಬಗ್ಗೆ ಇದಕ್ಕೆ ರಾಜ್ಯ ಬಿಜೆಪಿ ಸಾರಥಿ ಸ್ಪಷ್ಟನೆ ಕೊಟ್ಟಿದ್ದಾರೆ.

ದಾವಣಗೆರೆ, (ನ.24): ನಾಯಕತ್ವದ ಬದಲಾವಣೆಯ ಚರ್ಚೆಯೇ ಇಲ್ಲ. ಮುಂದಿನ ಎರಡೂವರೆ ವರ್ಷಗಳ ಕಾಲ ಬಿ.ಎಸ್‌. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸ್ಪಷ್ಟಪಡಿಸಿದರು.

ದಾವಣಗೆರೆಯಲ್ಲಿ  ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನರ್‌ ರಚನೆ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಮುಖ್ಯಮಂತ್ರಿ, ನಾವು ಕೇಂದ್ರ ನಾಯಕರ ಜತೆಗೆ ಮಾತನಾಡಿದ್ದೇವೆ. ಕೆಲವೇ ದಿನಗಳಲ್ಲಿ ಆಗುತ್ತದೆ. ಕಾದು ನೋಡಿ ಎಂದು ಹೇಳಿದರು.

ಬಿಜೆಪಿ ನಾಯಕರ ಸಭೆಯಲ್ಲಿ ಕಾಂಗ್ರೆಸ್‌ ಹಾಜರ್: ಹಲ್‌-ಚಲ್ ಎಬ್ಬಿಸಿದ ರಮೇಶ್ ಜಾರಕಿಹೊಳಿ

ಮುಖ್ಯಮಂತ್ರಿಗಳು ಮತ್ತು ನಾನು 15 ದಿನಕ್ಕೊಮ್ಮೆ ಭೇಟಿಯಾಗುತ್ತೇವೆ. ಅದೇ ರೀತಿ ಸಂತೋಷ್‌ಜಿ ಅವರು ನಮ್ಮ ಮಾರ್ಗದರ್ಶಕರು. ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇವೆ ಎಂದು ತಮ್ಮ ಭೇಟಿಗೆ ಸ್ಪಷ್ಟನೆ ನೀಡಿದರು. 

ಇದೇ ವೇಳೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಪ್ರತಿಕ್ರಿಯಿಸಿ, ನಿಗಮ ಆಗಬೇಕು ಎಂಬ ಬೇಡಿಕೆ ಇತ್ತು. ಅದರಂತೆ ಮಾಡಿದ್ದಾರೆ. ಅನುದಾನವನ್ನು ಬೇಡಿಕೆಯಂತೆ ಮುಖ್ಯಮಂತ್ರಿ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್