ಎಂಎಲ್‌ಸಿ ಟಿಕೆಟ್‌ ಆಕಾಂಕ್ಷಿ​ಗ​ಳಿಗೆ ಕಟೀಲ್‌ ಶಾಕ್‌!

By Kannadaprabha News  |  First Published Jun 11, 2020, 7:35 AM IST

ಎಂಎಲ್‌ಸಿ ಟಿಕೆಟ್‌ ಆಕಾಂಕ್ಷಿ​ಗ​ಳಿಗೆ ಕಟೀಲ್‌ ಶಾಕ್‌!| ಸಾಮಾ​ಜಿಕ, ಭೌಗೋ​ಳಿಕ ವಿಚಾರ ಪರಿ​ಗ​ಣನೆ| ಆಯ್ಕೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಿ


ಕಲಬುರಗಿ/ಸೇಡಂ(ಜೂ.11): ರಾಜ್ಯಸಭೆಯ ರೀತಿಯಲ್ಲೇ ವಿಧಾನ ಪರಿಷತ್‌ ಚುನಾವಣೆಗೂ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸುಳಿವು ನೀಡಿದ್ದಾರೆ. ಸಾಮಾಜಿಕ, ಭೌಗೋಳಿಕ ವಿಚಾರ ಸೇರಿ ಎಲ್ಲವನ್ನೂ ಪರಿಶೀಲಿಸಿ ಪರಿಷತ್‌ ಚುನಾವಣೆಗೆ ಟಿಕೆಟ್‌ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ರಾಜ್ಯಸಭೆ ಫೈಟ್ ಮುಗಿಯುತ್ತಿದ್ದಂತೆಯೇ MLC ಟಿಕೆಟ್ ಫೈಟ್: ಮತ್ತೆ ಶಾಕ್ ಕೊಡುತ್ತಾ ಹೈಕಮಾಂಡ್?

Tap to resize

Latest Videos

ಬುಧವಾರ ಕಲಬುರಗಿ, ಸೇಡಂನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿ, ಟಿಕೆಟ್‌ ನೀಡುವ ವಿಚಾರದಲ್ಲಿ ಪಕ್ಷ ಹೇಗೆ ವಿಭಿನ್ನವಾಗಿ ಚಿಂತಿಸುತ್ತದೆ ಎಂಬುದಕ್ಕೆ ರಾಜ್ಯಸಭೆ ಅಭ್ಯರ್ಥಿ ಆಯ್ಕೆಯೇ ಉತ್ತಮ ಉದಾಹರಣೆ. ಇನ್ನು ಪರಿಷತ್‌ ಚುನಾವಣೆಯ ಅಭ್ಯರ್ಥಿ ಆಯ್ಕೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಿ ಎಂದು ಪ್ರತಿಕ್ರಿಯಿಸಿದರು.

ರಾಜ್ಯಸಭೆಯಲ್ಲಿ ನಾವು ಪಕ್ಷದ ನಿಷ್ಠಾವಂತ, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದೇವೆ. ಒಂದು ರಾಜಕೀಯ ಪಕ್ಷ ಹೇಗೆಲ್ಲ ವಿಚಾರ ಮಾಡಬಹುದು, ವಿಭಿನ್ನ ಚಿಂತನೆ ನಡೆಸಬಹುದು ಎನ್ನುವುದನ್ನು ನಾವು ಉಳಿದ ರಾಜಕೀಯ ಪಕ್ಷಗಳಿಗೆ ತೋರಿಸಿ ಕೊಟ್ಟಿದ್ದೇವೆ ಎಂದು ಹೇಳಿದರು.

click me!