ಕರ್ನಾಟಕ ಬಿಜೆಪಿಯ ಮತ್ತಿಬ್ಬರು ಶಾಸಕರುಗಳಿಗೆ ಕೊರೋನಾ ದೃಢ

By Suvarna NewsFirst Published Sep 30, 2020, 3:56 PM IST
Highlights

ಇಷ್ಟು ದಿನ ಜನ ಸಾಮಾನ್ಯರನ್ನು ಕಾಡುತ್ತಿದ್ದ ಮಹಾಮಾರಿ ಕೊರೋನಾ ಇದೀಗ ರಾಜಕೀಯ ನಾಯಕರ ಬೆನ್ನುಬಿದ್ದಿದ್ದು, ಇದೀಗ ಇಬ್ಬರು ಶಾಸಕರುಗಳಿಗೆ ಸೋಂಕು ತಗುಲಿದೆ.

ಬೆಂಗಳೂರು, (ಸೆ.30): ಕರ್ನಾಟಕದ ಇಬ್ಬರು ಬಿಜೆಪಿ ಶಾಸಕರುಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನವಲಗುಂದ ಶಾಸಕ ಪಾಟೀಲ ಮುನೇನಕೊಪ್ಪ ಹಾಗೂ ಬಸವನಗುಡಿ ಬಿಜೆಪಿ ಶಾಸಕ ರವಿ ಸುಬ್ರಮಣ್ಯ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಭಾನುವಾರ ಪರೀಕ್ಷೆಗೆ ಒಳಗಾಗಿದ್ದ ಶಾಸಕ ರವಿ ಸುಬ್ರಮಣ್ಯ ಅವರ ವರದಿ ಮಂಗಳವಾರ ಬಂದಿದ್ದು, ಆ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಶನಿವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ಅಧಿವೇಶನದಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದವರು ಕೂಡ ಕೋವಿಡ್ ತಪಾಸಣೆಗೆ ಒಳಗಾಗಿ ಪ್ರತ್ಯೇಕವಾಗಿರಬೇಕಿದೆ. ಇತ್ತೀಚೆಗೆ ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.

10ನೇ ಬಾರಿ ಪರೀಕ್ಷೆಯಲ್ಲಿ ರೇಣುಕಾಚಾರ್ಯಗೆ ಕೊರೋನಾ ಶಾಕ್, ಆಸ್ಪತ್ರೆಗೆ ದಾಖಲು

ನವಲಗುಂದ ಶಾಸಕ
ಕಳೆದ‌ ನಾಲ್ಕೈದು ದಿನಗಳಿಂದ ಬೆಂಗಳೂರಲ್ಲೇ ಇದ್ದರು. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದ್ದರಿಂದ ಅಪೋಲೋ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಾಗ ಕೊರೋನಾ ದೃಢಪಟ್ಟಿದೆ.

ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಹುಷಾರಾಗಿದ್ದೇನೆ. ನನ್ನ ಸಂಪರ್ಕದಲ್ಲಿ ಬಂದಿರುವವರು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಕೋರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಂದಿರುವುದನ್ನು ಶಾಸಕರು ತಿಳಿಸಿದ್ದಾರೆ.

click me!