ಶಿರಾ ಬೈ ಎಲೆಕ್ಷನ್: ಕುಮಾರಸ್ವಾಮಿ ಭಾವನಾತ್ಮಕ ಮಾತು...!

By Suvarna NewsFirst Published Sep 30, 2020, 2:09 PM IST
Highlights

ಶಿರಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, (ಸೆ.30): ಶಿರಾದಲ್ಲಿ ನಾವು ಸೂತಕದ ಮನೆಯಲ್ಲಿದ್ದೇವೆ. ಹೀಗಿದ್ದೂ ಚುನಾವಣೆ ಎದುರಿಸಬೇಕಿರುವುದು ದುರ್ವಿಧಿ. ನಾವು ಅನಿವಾರ್ಯವಾಗಿ ಎದುರಿಸಬೇಕಾದ ನೋವಿನ ಚುನಾವಣೆ ಇದು. ಇತರರು ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಅವರಿಗೆ ಇದು ಲಾಭ-ನಷ್ಟದ ವಿಚಾರ. ಆದರೆ ನಾವಿಲ್ಲಿ ನಮ್ಮ ನೋವಿಗೆ ಗೆಲುವಿನ ಮೂಲಕ ಪರಿಹಾರ ಹುಡುಕ ಬಯಸುತ್ತಿದ್ದೇವೆ' ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಶಿರಾ ಕ್ಷೇತ್ರದ ಜೆಡಿಎಸ್​ ಶಾಸಕ ಸತ್ಯನಾರಾಯಣ ಅವರು ಇತ್ತೀಚಿಗೆ ನಿಧನರಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ನವೆಂಬರ್​ 3ರಂದು ಉಪ ಚುನಾವಣೆ ನಡೆಯಲಿದ್ದು, ನ.10ರಂದು ಫಲಿತಾಂಶ ಪ್ರಕಟವಾಗಲಿದೆ.

ಶಿರಾ ಉಪಚುನಾವಣೆ ಜೆಡಿಎಸ್‌ಗೆ ಸವಾಲು; ನಡೆಯುತ್ತಿದೆ ಭಾರೀ ಕಸರತ್ತು

ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಎಚ್​ಡಿಕೆ, ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇಲ್ಲಿ ಗೆದ್ದಿದ್ದರು. ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್​ಗೆ ಉಳಿಸಿಕೊಟ್ಟಿದ್ದರು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾ ನಾವೇ ಗೆಲ್ಲಬೇಕಾದ ಕ್ಷೇತ್ರ' ಎಂದು ಭಾವನಾತ್ಮಕವಾಗಿ ಇನ್ನ್‌fff ಬರೆದುಕೊಂಡಿದ್ದಾರೆ.

ಶಿರಾ ನಾವು ಗೆದ್ದ ಕ್ಷೇತ್ರವೂ ಹೌದು, ಆಪರೇಷನ್ ಕಮಲ ಮೆಟ್ಟಿ ಉಳಿಸಿಕೊಂಡ ಕ್ಷೇತ್ರವೂ ಹೌದು. ಸತ್ಯಣ್ಣ ಇಲ್ಲಿ ಗೆದ್ದಿದ್ದರು. ಬಿಜೆಪಿಯವರ ಆಮಿಷಕ್ಕೆ ಆಕರ್ಷಿತರಾಗದೇ ಕ್ಷೇತ್ರವನ್ನು ಜೆಡಿಎಸ್ಗೇ ಉಳಿಸಿಕೊಟ್ಟಿದ್ದರು. ಸತ್ಯಣ್ಣ ಇದ್ದಿದ್ದರೆ ಈ ಕ್ಷೇತ್ರ ನಮ್ಮಲ್ಲೇ ಇರುತ್ತಿತ್ತು. ನ್ಯಾಯಬದ್ಧವಾಗಿ ಶಿರಾ ನಾವೇ ಗೆಲ್ಲಬೇಕಾದ ಕ್ಷೇತ್ರ.
2/3

— H D Kumaraswamy (@hd_kumaraswamy)

ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಶಿರಾ ನಮ್ಮದೇ ಕ್ಷೇತ್ರ. ರಾಜರಾಜೇಶ್ವರಿ ನಗರವೂ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಅಚಲವಾಗಿದೆ. ಸೂಕ್ತ, ನ್ಯಾಯ ಸಮ್ಮತ ಅಭ್ಯರ್ಥಿಗಳನ್ನು ಶೀಘ್ರವೇ ಪಕ್ಷ ಘೋಷಿಸುತ್ತದೆ ಎಂದಿದ್ದಾರೆ.

ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಶಿರಾ ನಮ್ಮದೇ ಕ್ಷೇತ್ರ. ರಾಜರಾಜೇಶ್ವರಿ ನಗರವೂ ಜೆಡಿಎಸ್ ಪ್ರಾಬಲ್ಯವಿರುವ ಕ್ಷೇತ್ರ. ಎರಡೂ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ಅಚಲವಾಗಿದೆ. ಸೂಕ್ತ, ನ್ಯಾಯ ಸಮ್ಮತ ಅಭ್ಯರ್ಥಿಗಳನ್ನು ಶೀಘ್ರವೇ ಪಕ್ಷ ಘೋಷಿಸುತ್ತದೆ.
1/3

— H D Kumaraswamy (@hd_kumaraswamy)
click me!