ಗ್ರಾಮ ಪಂಚಾಯಿತಿ ಆಯ್ತು ಇದೀಗ ಮತ್ತೊಂದು ಎಲೆಕ್ಷನ್‌ಗೆ ರಣಕಹಳೆ ಊದಿದ ಬಿಜೆಪಿ

By Suvarna NewsFirst Published Jan 3, 2021, 6:34 PM IST
Highlights

ಗ್ರಾಮ ಪಂಚಾಯಿತಿ ಚುನಾವನೆ ಮುಗಿಯುತ್ತಿದ್ದಂತೆಯೇ ಇದೀಗ ಬಿಜೆಪಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ರಣಕಹಳೆ ಊದಿದೆ.

ಶಿವಮೊಗ್ಗ, (ಜ.03): ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 140ರಿಂದ 150 ಸೀಟುಗಳನ್ನು ಗೆಲ್ಲಲು ಬಿಜೆಪಿ ಪ್ಲಾನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸಿದೆ.

ಹೌದು... ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶ ಮಾಡಿತ್ತು. ಇದೀಗ  ರಾಜ್ಯದಲ್ಲಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜನವರಿ 11, 12 ಮತ್ತು 13 ರಂದು ಜನಸೇವಕ ಯಾತ್ರೆ ನಡೆಸಲು ಬಿಜೆಪಿ ತೀರ್ಮಾನ ಮಾಡಿದೆ.

ಯಡಿಯೂರಪ್ಪನವರ ಮುಂದಿನ ಗುರಿ ಏನು? ಕಾರ್ಯಕಾರಣಿ ಸಭೆಯಲ್ಲಿ ಬಹಿರಂಗ..!

ಒಟ್ಟು ಐದು ತಂಡಗಳಲ್ಲಿ ಮೂವತ್ತು ಜಿಲ್ಲೆಗಳಲ್ಲಿ ಜನಸೇವಕ ಯಾತ್ರೆ ನಡೆಯಲಿದೆ. ಮತ್ತೆ ಸಚಿವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿಯನ್ನ ಬಿಜೆಪಿ ವಹಿಸಿದೆ. ಮೊದಲ ತಂಡದ ನೇತೃತ್ವವನ್ನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಹಿಸಿಕೊಂಡಿದ್ದರೆ, ಎರಡನೇ ತಂಡದ ನೇತೃತ್ವವನ್ನ ಸಚಿವ ಕೆ.ಎಸ್. ಈಶ್ವರಪ್ಪ ಹೆಗಲಿಗೆ ನೀಡಲಾಗಿದೆ.

ಮೂರನೇ ತಂಡದ ನೇತೃತ್ವವನ್ನು ಡಿಸಿಎಂ ಗೋವಿಂದ ಕಾರಜೋಳ ವಹಿಸಿಕೊಂಡಿದ್ದು, ನಾಲ್ಕನೇ ತಂಡದ ನೇತೃತ್ವ ಸಚಿವ ಜಗದೀಶ್ ಶೆಟ್ಟರ್ ಹೊರಲ್ಲಿದ್ದಾರೆ. ಹಾಗೂ ಐದನೇ ತಂಡದ ನೇತೃತ್ವವನ್ನು ಡಿಸಿಎಂ‌ ಡಾ. ಅಶ್ವಥ್ ನಾರಾಯಣ ವಹಿಸಿಕೊಂಡಿದ್ದರೆ. ಜೊತೆಗೆ ಹಲವು ಸಚಿವರನ್ನು ಜನ ಸೇವಕ ಯಾತ್ರೆಯ ತಂಡದಲ್ಲಿ ಸೇರಿಸಿಕೊಂಡಿದೆ.

click me!