
ಬೆಂಗಳೂರು(ಫೆ.05): ರಾಜ್ಯದಲ್ಲಿ ನಡೆಯುತ್ತಿರುವ ಹಿಜಾಬ್(Hijab Row) ವಿವಾದ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿಗೆ(Rahul Gandhi) ರಾಜ್ಯ ಬಿಜೆಪಿ(Karnataka BJP) ತಿರುಗೇಟು ನೀಡಿದ್ದು, ಭಾರತದ ಭವಿಷ್ಯಕ್ಕೆ ರಾಹುಲ್‌ಗಾಂಧಿ ಅಪಾಯಕಾರಿ ಎಂದು ತಿಳಿಸಿದೆ.
ಹಿಜಾಬ್ ವಿವಾದದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ(Students Education) ಅಡ್ಡಿಯಾಗುತ್ತಿದ್ದು, ದೇಶ ತನ್ನ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ ಎಂದು ರಾಹುಲ್‌ಗಾಂಧಿ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿ, ಶಿಕ್ಷಣವನ್ನು ಕೋಮುವಾದ(Communal) ಮಾಡುವ ಮೂಲಕ ಕಾಂಗ್ರೆಸ್‌ನ ಸಹ ಮಾಲೀಕ ರಾಹುಲ್ ಗಾಂಧಿ ಅವರು ಭಾರತದ ಭವಿಷ್ಯಕ್ಕೆ ಅಪಾಯಕಾರಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಕಿಡಿಕಾರಿದೆ.
Hijab Row ಕರ್ನಾಟಕದ 6 ಜಿಲ್ಲೆಗೆ ಹಬ್ಬಿದ ಹಿಜಾಬ್ ವಿವಾದ, ಇತರ ಜಿಲ್ಲೆಗಳಲ್ಲಿ ಪ್ರತಿಭಟನೆ ಬಲು ಜೋರು!
ಶಿಕ್ಷಣ ಪಡೆಯಲು ಹಿಜಾಬ್ ಅತ್ಯಗತ್ಯವಾಗಿದ್ದರೆ, ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲಿ ರಾಹುಲ್ ಗಾಂಧಿ ಅದನ್ನು ಏಕೆ ಕಡ್ಡಾಯಗೊಳಿಸಿಲ್ಲ ಎಂದು ಪ್ರಶ್ನೆ ಮಾಡಿದೆ.
ವಿದ್ಯಾರ್ಥಿನಿಯರ ಹಿಜಾಬ್‌ಗೆ ರಾಹುಲ್ ಬೆಂಬಲ
ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಇದೀಗ ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್ ಗಾಂಧಿ ಮಧ್ಯಪ್ರವೇಶ ಮಾಡಿದ್ದು, ಹಿಜಾಬ್ ಸಹಿತ ತಮಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿರುವ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಬೆಂಬಲ ಘೋಷಿಸಿದ್ದಾರೆ.
Hijab Row ಕರ್ನಾಟದ ಹಿಜಾಬ್ ವಿವಾದ, ರಾಜಕೀಯ ಉದ್ದೇಶಕ್ಕೆ ವಿದ್ಯಾರ್ಥಿಗಳು ಬಲಿಯಾದ್ರಾ
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಹಿಜಾಬ್ ವಿಷಯವನ್ನು ಶಿಕ್ಷಣದ ಮಾರ್ಗಕ್ಕೆ ತಂದು ಅಡ್ಡಿಪಡಿಸುವ ಮೂಲಕ ದೇಶವು ತನ್ನ ಹೆಣ್ಣು ಮಕ್ಕಳ ಭವಿಷ್ಯವನ್ನು ಕಸಿಯುತ್ತಿದೆ. ದೇವಿ ಸರಸ್ವತಿ ಯಾರನ್ನೂ ತಾರತಮ್ಯ ಮಾಡಲ್ಲ ಮತ್ತು ಎಲ್ಲರಿಗೂ ಜ್ಞಾನವನ್ನು ಧಾರೆ ಎರೆಯುತ್ತಾಳೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಮೂಲಕ ಉಡುಪಿಯ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯಕರಿಗೆ ಪ್ರವೇಶ ನಿರಾಕರಿಸಿದ್ದನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇದೇ ವಿಷಯದ ಬಗ್ಗೆ ಎರಡು ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಕೂಡಾ ಪ್ರತಿಕ್ರಿಯೆ ನೀಡಿ, ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದರು. ಕಾಂಗ್ರೆಸ್ ನಾಯಕ ಶಶಿ ತರೂರ್ ಕೂಡ ಹಿಜಾಬ್ ಧಾರಣೆ, ತಿಲಕ ಧಾರಣೆ ತಪ್ಪಲ್ಲ ಎಂದಿದ್ದರು.
ರಾಹುಲ್ ವಿರುದ್ಧ ಮುಂದುವರಿದ ಬಿಜೆಪಿ ವಾಗ್ದಾಳಿ
ಕೇಂದ್ರ ಸರ್ಕಾರದ ಕಾರ್ಯವೈಖರಿ ವಿರುದ್ಧ ಸಂಸತ್ತಿನ ಕಲಾಪದಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಟೀಕಾಪ್ರಹಾರವನ್ನು ಬಿಜೆಪಿ ಮುಂದುವರಿಸಿದೆ. ಈ ಹಿಂದೆ ಭಾರತದ ಯುವರಾಜನಂತೆ ವರ್ತಿಸುತ್ತಿದ್ದ ರಾಹುಲ್ ಗಾಂಧಿ ಅವರು ಇದೀಗ ತಮ್ಮನ್ನು ತಾವು ಮಹಾರಾಜ ಅಂದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಕಿಡಿಕಾರಿದ್ದಾರೆ. ಈ ಹಿಂದೆ ಕಾಮಿಡಿ ಕಿಂಗ್ ಆಗಿದ್ದ ರಾಹುಲ್ ಇದೀಗ ಅಂಧಕಾರದ ಯುವರಾಜನಾಗಿದ್ದಾರೆ ಎಂದು ರಾಹುಲ್ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಜೈ ಪಾಂಡಾ, ಹೌದು ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ಸಂವಿಧಾನ ಗುರುತಿಸುತ್ತದೆ. ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಭಾರತವು ಒಂದು ದೇಶವಲ್ಲ ಎಂಬುದು ಕೇವಲ ಹಾಸ್ಯಾಸ್ಪದವಷ್ಟೇ ಅಲ್ಲದೆ ದುಷ್ಟಹೇಳಿಕೆಯಾಗಿದೆ ಎಂದರು.
ದೇವಸ್ಥಾನ, ಚರ್ಚ್ ಬಳಿಕ ರಾಹುಲ್ ಸಮ್ಮುಖದಲ್ಲಿ ಪ್ರಮಾಣ
ಶಾಸನಸಭೆ ಆಯ್ಕೆಯಾದ ಬಳಿಕ ಅನ್ಯ ಪಕ್ಷಗಳಿಗೆ ಪಕ್ಷಾಂತರ ಮಾಡಲ್ಲ ಎಂದು ಇತ್ತೀಚೆಗೆ ದೇವಸ್ಥಾನ, ಮಸೀದಿ, ಚಚ್‌ರ್‍ಗಳಲ್ಲಿ ಪ್ರಮಾಣ ಮಾಡಿದ್ದ ಗೋವಾ ಕಾಂಗ್ರೆಸ್ ಅಭ್ಯರ್ಥಿಗಳು, ಶುಕ್ರವಾರ ಇದೇ ಪ್ರಮಾಣವನ್ನು ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಮಾಡಲಿದ್ದಾರೆ. ಪುಟ್ಟರಾಜ್ಯವಾಗಿದ್ದಾಗ್ಯೂ ಶಾಸಕರ ಪಕ್ಷಾಂತರ ದೇಶದಲ್ಲೇ ಅತಿಹೆಚ್ಚು ಎಂಬ ಕುಖ್ಯಾತಿಗೆ ಗೋವಾ ಪಾತ್ರವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.