28 ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಕ ಮಾಡಿದ ಬಿಜೆಪಿ‌: ಕೇಂದ್ರದಿಂದ ಚುನಾವಣಾ ಪ್ರಭಾರಿ ನಿಯೋಜನೆ

Published : Jan 27, 2024, 04:00 PM ISTUpdated : Jan 27, 2024, 04:04 PM IST
28 ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿ ನೇಮಕ ಮಾಡಿದ ಬಿಜೆಪಿ‌: ಕೇಂದ್ರದಿಂದ ಚುನಾವಣಾ ಪ್ರಭಾರಿ ನಿಯೋಜನೆ

ಸಾರಾಂಶ

ಲೋಕಸಭಾ ಚುನಾವಣೆ ಸಿದ್ಧತೆ ಆರಂಭಿಸಿರುವ ಕರ್ನಾಟಕ ಬಿಜೆಪಿ 28 ಲೋಕಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು (ಜ.27): ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧತೆಯನ್ನು ಆರಂಭಿಸಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇಂದು 28 ಲೋಕಸಭಾ ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಮತ್ತೊಂದೆಡೆ ಬಿಜೆಪಿ ಹೈಕಮಾಂಡ್‌ನಿಂದ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್  ಪ್ರಭಾರಿಯಾಗಿ ನಿಯೋಜನೆಗೊಂಡಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಭಾರಿ ಮತ್ತು ಸಹ ಪ್ರಭಾರಿಗಳನ್ನು ನಿಯುಕ್ತಗೊಳಿಸಿದ್ದಾರೆ. ಕರ್ನಾಟಕಕ್ಕೆ ‌ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್  ಪ್ರಭಾರಿಯಾಗಿ ಹಾಗೂ ಸುಧಾಕರ್ ರೆಡ್ಡಿ ಸಹ ಪ್ರಭಾರಿಯಾಗಿ ನಿಯುಕ್ತಿಗೊಂಡಿದ್ದಾರೆ. ಈ ಮೂಲಕ ಬಿಜೆಪಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಪೂರ್ಣ ಸಿದ್ಧತೆಯನ್ನು ನಡೆಸಿಕೊಂಡಿದೆ. ಇನ್ನು ಯಾವ ಅಜೆಂಡಾದ ಮೇಲೆ ಚುನಾವಣೆ ಎದುರಿಸಲಿದೆ ಎನ್ನುವುದು ಇನ್ನಷ್ಟೇ ಬಹಿರಂಗ ಆಗಬೇಕಿದೆ.

Breaking: ಗಣರಾಜ್ಯೋತ್ಸವಕ್ಕೆ ಕಾಂಗ್ರೆಸ್‌ ಶಾಸಕರಿಗೆ ಗುಡ್‌ ನ್ಯೂಸ್‌, 32 ಶಾಸಕರಿಗೆ ನಿಗಮ ಮಂಡಳಿ ಸ್ಥಾನ!

ಲೋಕಸಭಾ ಕ್ಷೇತ್ರ- ಉಸ್ತುವಾರಿಗಳು- ಸಂಚಾಲಕರು

  1. ಬೆಂಗಳೂರು ಗ್ರಾಮೀಣ- ನಿರ್ಮಲ್ ಕುಮಾರ್ ಸುರಾನಾ- ಮುನಿರತ್ನ
  2. ಬೆಂಗಳೂರು ದಕ್ಷಿಣ- ಎಂ. ಕೃಷ್ಣಪ್ಪ- ಉಮೇಶ್ ಶೆಟ್ಟಿ
  3. ಬೆಂಗಳೂರು ಸೆಂಟ್ರಲ್- ಗುರುರಾಜ್ ಗಂಟಿಹೊಳೆ - ಗೌತಮ್ ಕುಮಾರ್ ಜೈನ್
  4. ಬೆಂಗಳೂರು ಉತ್ತರ - ಎಸ್.ಆರ್. ವಿಶ್ವನಾಥ್- ಸಚ್ಚಿದಾನಂದ ಮೂರ್ತಿ
  5. ಮೈಸೂರು- ಉಸ್ತುವಾರಿ ಅಶ್ವಥ್ ನಾರಾಯಣ್- ರವಿಶಂಕರ್ ಹಾಗೂ ರಾಬಿನ್ ದೇವಯ್ಯ
  6. ಚಾಮರಾಜನಗರ (ಎಸ್‌ಸಿ)- ಎಮ್ ವಿ ಪನೀಶ್- ಮಲ್ಲಿಕಾರ್ಜುನಪ್ಪ
  7. ಮಂಡ್ಯ- ಸುನಿಲ್ ಸುಬ್ರಮಣಿ- ಸಿ.ಪಿ ಉಮೇಶ್
  8. ಹಾಸನ- ಎಂ.ಕೆ ಪ್ರಾಣೇಶ್- ಪ್ರಸನ್ನ.
  9. ದಕ್ಷಿಣ ಕನ್ನಡ- ಕೋಟಾ ಶ್ರೀನಿವಾಸ್ ಪೂಜಾರಿ- ನಿತಿನ್ ಕುಮಾರ್.
  10. ಉಡುಪಿ ಚಿಕ್ಕಮಗಳೂರು- ಆರಗ ಜ್ಞಾನೇಂದ್ರ- ಕುಟ್ಯಾರು ನವೀನ್ ಶೆಟ್ಟಿ, ರವೀಂದ್ರ ಬೆಳವಾಡಿ.
  11. ಶಿವಮೊಗ್ಗ- ರಘುಪತಿ ಭಟ್- ಗಿರೀಶ್ ಪಟೇಲ್.
  12. ಉತ್ತರ ಕನ್ನಡ- ಹರತಾಳು ಹಾಲಪ್ಪ- ಗೋವಿಂದ ನಾಯಕ್.
  13. ಧಾರವಾಡ- ಈರಣ್ಣ ಕಡಾಡಿ- ನಾಗರಾಜ್.
  14. ಹಾವೇರಿ- ಅರವಿಂದ್ ಬೆಲ್ಲದ್- ಕಳಕಪ್ಪ ಬಂಡಿ.
  15. ಬೆಳಗಾವಿ - ವೀರಣ್ಣ ಚರಂತಿಮಠ- ಸಂಜಯ್ ಪಾಟೀಲ್
  16. ಚಿಕ್ಕೋಡಿ- ಅಭಯ್ ಪಾಟೀಲ್- ರಾಜೇಶ್ ನೆರ್ಲಿ.
  17. ಬಾಗಲಕೋಟೆ- ಲಿಂಗಾರಾಜು ಪಾಟೀಲ್- ಸಿದ್ದು ಸವದಿ.
  18. ಬಿಜಾಪುರ (ಎಸ್‌ಸಿ) - ರಾಜಶೇಖರ್ ಶೀಲವಂತ್- ಅರುಣ್ ಶಹಪುರ.
  19. ಬೀದರ್- ಅಮರನಾಥ್ ಪಾಟೀಲ್- ಅರಹಂತ ಸಾವ್ಲೆ.
  20. ಗುಲ್ಬರ್ಗ- ರಾಜುಗೌಡ- ಶೋಭಾ ಬನಿ.
  21. ರಾಯಚೂರು (ಎಸ್‌ಟಿ) - ದೊಡ್ಡನಗೌಡ ಪಾಟೀಲ್- ಗುರು ಕಾಮ.
  22. ಕೊಪ್ಪಳ- ರಘುನಾಥ್ ರಾವ್ ಮಲ್ಕಾಪುರೆ- ಗಿರಿಗೌಡ.
  23. ಬಳ್ಳಾರಿ (ಎಸ್‌ಟಿ) - ಎನ್ ರವಿಕುಮಾರ್- ವೈ.ಎಂ ಸತೀಶ್.
  24. ದಾವಣಗೆರೆ- ಬೈರತಿ ಬಸವರಾಜ್- ವೀರೇಶ್ ಹಾನಗವಾಡಿ.
  25. ಚಿತ್ರದುರ್ಗ (ಎಸ್‌ಸಿ)- ಚನ್ನಬಸಪ್ಪ- ಲಿಂಗಮೂರ್ತಿ.
  26. ತುಮಕೂರು- ಕೆ. ಗೋಪಾಲಯ್ಯ- ಬೈರಣ್ಣ
  27. ಚಿಕ್ಕಬಳ್ಳಾಪುರ - ಕಟ್ಟಾ ಸುಬ್ರಮಣ್ಯ- ಎ.ವಿ. ನಾರಾಯಣಸ್ವಾಮಿ
  28. ಕೋಲಾರ- (ಎಸ್‌ಸಿ)- ಬಿ. ಸುರೇಶ್‌ಗೌಡ, ಮ್ಯಾಗೇರಿ ನಾರಾಯಣಸ್ವಾಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ