
ಬೆಂಗಳೂರು,(ಜ.13): ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಇದೇ 20 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ನಡ್ಡಾ ಅವರ ಪದಾರೋಹಣ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಬಿಜೆಪಿ ನಿರ್ಧರಿಸಿದೆ.
ಇತ್ತ ಕರ್ನಾಟಕ ಬಿಜೆಪಿ ರಾಜ್ಯದ 18 ಸಂಘಟನಾತ್ಮಕ ಜಿಲ್ಲೆಗಳಲ್ಲಿ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.
ಬಿಜೆಪಿ ನೂತನ ಅಧ್ಯಕ್ಷರ ಮುಂದಿವೆ ಸಾಲು ಸಾಲು ಸವಾಲು!
ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಬಿಜೆಪಿ ಸಾಂಸ್ಥಿಕ ಚುನಾವಣೆಗಳು ಪದ್ಧತಿಯಂತೆ ಈ ವರ್ಷ ದೇಶಾದ್ಯಂತ ನಡೆಯುತ್ತಿದೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂಸ್ಥಿಕ ಚುನಾವಣೆಗಳ ಸಹ ಉಸ್ತುವಾರಿಗಳಾದ ಸಿ.ಟಿ.ರವಿ, ಉಪಾಧ್ಯಕ್ಷರಾದ ಭಾನು ಪ್ರಕಾಶ್, ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ರಾಜ್ಯ ಸಾಂಸ್ಥಿಕ ಚುನಾವಣೆಗಳ ಉಪಚುನಾವಣಾಧಿಕಾರಿ ಹಾಲಪ್ಪ ಆಚರ್ ಸೇರಿದಂತೆ ಹಲವು ಮುಖಂಡರು ಸರ್ವಾನುಮತದಿಂದ ನೂತನ ಜಿಲ್ಲಾಧ್ಯಕ್ಷರುಗಳನ್ನು ಆಯ್ಕೆ ಮಾಡಿದ್ದಾರೆ ಎಂದು ರಾಜ್ಯ ಸಾಂಸ್ಥಿಕ ಚುನಾವಣಾಧಿಕಾರಿಯಾದ ಅಶ್ವಥ್ ನಾರಾಯಣ ತಿಳಿಸಿದ್ದಾರೆ.
ನೂತನ ಜಿಲ್ಲಾಧ್ಯಕ್ಷರ ಪಟ್ಟಿ ಇಂತಿದೆ.
1.ಹಾಸನ-ಹೆಚ್.ಕೆ.ಸುರೇಶ್
2.ಕೊಡಗು-ರಾಬೀನ್ ದೇವಯ್ಯ
3.ಚಿಕ್ಕಮಗಳೂರು-HC ಕಲ್ಮರುಡಪ್ಪ
4.ಶಿವಮೊಗ್ಗ-ಟಿ.ಡಿ.ಮೇಘರಾಜ್
5.ಹಾವೇರಿ-ಸಿದ್ದರಾಜು ಕಲಕೋಟಿ
6.ಗದಗ-ಮೋಹನ್ ಮಾಳ ಶೆಟ್ಟಿ
7.ಬೆಳಗಾವಿ ನಗರ-ಶಶಿ ಪಾಟೀಲ್
8.ಬೆಳಗಾವಿ ಗ್ರಾಮಾಂತರ-ಸಂಜಯ್ ಪಾಟೀಲ್
9.ಚಿಕ್ಕೋಡಿ-ಡಾ. ರಾಜೇಶ್ ನಿರಲಿ
10.ವಿಜಯಪುರ-ಆರ್.ಎಸ್. ಪಾಟೀಲ್
11.ಕಲಬುರಗಿ ಗ್ರಾಮಾಂತರ-ಶಿವರಾಜ ಪಾಟೀಲ್ ರದ್ದೆವಾಡಿ
12.ಯಾದಗಿರಿ-ಶರಣ ಭೋಪಾಲ್ ರೆಡ್ಡಿ
13.ಕೊಪ್ಪಳ-ಮಾಜಿ ಶಾಸಕ ದೊಡ್ಡನಗೌಡ ಹೆಚ್.ಪಾಟೀಲ್
14.ಚಿತ್ರದುರ್ಗ-ಎ.ಮುರಳಿ
15.ಚಿಕ್ಕಬಳ್ಳಾಪುರ-ರಾಮಲಿಂಗಪ್ಪ
16.ಕೋಲಾರ-ಕೆ.ಎನ್. ವೇಣುಗೋಪಾಲ್
17.ಬೆಂಗಳೂರು ಉತ್ತರ-ಬಿ.ನಾರಾಯಣ
18.ದಕ್ಷಿಣ ಕನ್ನಡ- ಸುದರ್ಶನ್ ಮೂಡಬಿದರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.