ಸೆ.13ರಿಂದ ವಿಧಾನಸಭೆ ಅಧಿವೇಶನ, ಬಿಎಸ್‌ವೈ ಸ್ಥಾನಪಲ್ಲಟ

Published : Sep 12, 2021, 10:23 PM ISTUpdated : Sep 12, 2021, 10:25 PM IST
ಸೆ.13ರಿಂದ ವಿಧಾನಸಭೆ ಅಧಿವೇಶನ, ಬಿಎಸ್‌ವೈ ಸ್ಥಾನಪಲ್ಲಟ

ಸಾರಾಂಶ

* 10 ದಿನಗಳ ಕಾಲ ರಾಜ್ಯ ವಿಧಾನ ಮಂಡಲ ಅಧಿವೇಶ * ಸೆ.13ರಿಂದ  ವಿಧಾನಸೌಧದಲ್ಲಿ ನಡೆಯಲಿರುವ ಮಳೆಗಾಲದ ಅಧಿವೇಶನವನ್ನು  * ಸದನದಲ್ಲಿ ಬಿಎಸ್ ಯಡಿಯೂರಪ್ಪ ಆಸನದಲ್ಲಿ ಬದಲಾವಣೆ

ಶಿವಮೊಗ್ಗ, (ಸೆ.12): ನಾಳೆ (ಸೆ.13) 10 ದಿನಗಳ ಕಾಲ ರಾಜ್ಯ ವಿಧಾನ ಮಂಡಲ ಅಧಿವೇಶನ ಶುರುವಾಗಲಿದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳು ಸಜ್ಜಾಗಿವೆ.

ಕೊರೋನಾ ವೈರಸ್, ಲಾಕ್‌ಡೌನ್, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳನ್ನು ಉಭಯ ಸದನಗಳಲ್ಲಿ ಪ್ರಸ್ತಾಪ ಮಾಡಲು ವಿರೋಧ ಪಕ್ಷವಾದ ಕಾಂಗ್ರೆಸ್ ತೀರ್ಮಾನಿಸಿದೆ. ಇದಕ್ಕೆ ಸರಿಯಾಗಿ ಉತ್ತರಿಸಲು ಬೊಮ್ಮಾಯಿ ಸರ್ಕಾರ ಸಹ ಸಜ್ಜಾಗಿದೆ.

RCB ಸೇರಿಕೊಂಡ ವಿರಾಟ್, ಗುಡ್‌ ನ್ಯೂಸ್ ಕೊಟ್ಟ ಸುದೀಪ್; ಸೆ.12ರ ಟಾಪ್ 10 ಸುದ್ದಿ!

ಸದನದಲ್ಲಿ ಆಸನ ಬದಲಾವಣೆ
ಹೌದು...ಅಧಿವೇಶನದಲ್ಲಿ  ಮೊದಲ ಸಾಲಿನಲ್ಲಿ ಕೂತು ವಿರೋಧ ಪಕ್ಷಗಳಿಗೆ ಉತ್ತರಿಸುತ್ತ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಯಡಿಯೂರಪ್ಪ ಜಾಗಕ್ಕೆ ಇದೀಗ ಹೊಸ ಸಿಎಂ ಬಸವರಾಜ ಬೊಮ್ಮಾಯಿ ಕುಳಿತುಕೊಳ್ಳುವುದು ವಿಶೇಷ.

ಮಾಜಿ ಸಿಎಂ ಆಗಿರುವ ಬಿಎಸ್ ಯಡಿಯೂರಪ್ಪ ಅವರು ಆಡಳಿತ ಪಕ್ಷಕ್ಕೆ ನಿಗದಿಮಾಡಲಾಗಿರುವ 4ನೇ ಸ್ಥಾನಲ್ಲಿ ಕುಳಿತುಕೊಳ್ಳಲಿದ್ದು, ಅವರ ಪಕ್ಕ ಮತ್ತೋರ್ವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಲಿದ್ದಾರೆ. ಇನ್ನು ಆಡಳಿತ ಪಕ್ಷಕ್ಕೆ ಮೀಸಲಾದ ಮೊದಲ 3 ಸಾಲುಗಳಲ್ಲಿ ಸಚಿವರು ಕೂರಲಿದ್ದಾರೆ.

ಒಟ್ಟಿನಲ್ಲಿ ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಅಧಿವೇಶವನ್ನು ಎದುರಿಸುತ್ತಿದ್ದು, ವಿರೋಧ ಪಕ್ಷಗಳ ಮುಂದೆ ತಮ್ಮ ಸರ್ಕಾರವನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!