Assembly Elections 2023: ಮುಂದಿನ ವರ್ಷದ ಚುನಾವಣೆಗೆ ಹೊಸಪೇಟೆಯಿಂದಲೇ ಬಿಜೆಪಿ ರಣಕಹಳೆ

Published : Mar 28, 2022, 04:52 PM ISTUpdated : Mar 28, 2022, 05:34 PM IST
Assembly Elections 2023: ಮುಂದಿನ ವರ್ಷದ ಚುನಾವಣೆಗೆ ಹೊಸಪೇಟೆಯಿಂದಲೇ ಬಿಜೆಪಿ  ರಣಕಹಳೆ

ಸಾರಾಂಶ

ಸಾರ್ವತ್ರಿಕ ಚುನಾವಣೆಗೆ ಹೊಸಪೇಟೆಯಿಂದಲೇ ಬಿಜೆಪಿ  ರಣಕಹಳೆ ಚುನಾವಣೆಗೆ ರಣಕಹಳೆ ಮೊಳಗಿಸಿದ ಬಿಜೆಪಿ ವಿಜಯನಗರದಿಂದಲೇ ಬಿಜೆಪಿ ಚುನಾವಣೆ ಪ್ರಕ್ರಿಯೆ ಪ್ರಾರಂಭ ವಿಜಯನಗರ ಸಾಮ್ರಾಜ್ಯ ವಿಸ್ತರಣೆ ಮಾಡಿದಂತೆ ವಿಸ್ತರಣೆ ಎಂದ ಬಿಜೆಪಿ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್ 

ವಿಜಯನಗರ(ಮಾ.28): ಮುಂದಿನ ವರ್ಷ ನಡೆಯಲಿರೋ ಸಾರ್ವತ್ರಿಕ ಚುನಾವಣೆಗೆ (Karnataka Assembly Elections 2023) ಹೊಸಪೇಟೆಯಿಂದಲೇ (Hosapete) ಬಿಜೆಪಿ (BJP)  ರಣಕಹಳೆ ಮೊಳಗಿಸಲು ಸಜ್ಜಾಗಿದೆ. ರಾಜ್ಯಕಾರ್ಯಕಾರಿಣಿ ನೆಪದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಸೇರಿದಂತೆ ಇಡೀ ರಾಜ್ಯದ ಎಲ್ಲ ಶಾಸಕ, ಸಂಸದ, ಸಚಿವರು ಸೇರಿದಂತೆ 650ಕ್ಕೂ ಹೆಚ್ಚು ಪದಾಧಿಕಾರಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲು ನಿರ್ಧಾರ ಮಾಡಿದ್ದಾರೆ.  

ಕಾರ್ಯಕಾರಿಣಿಗೆ ಭೂಮಿ ಪೂಜೆ: ಏಪ್ರಿಲ್ 16 ಮತ್ತು 17 ರಂದು ನಡೆಯಲಿರೋ ಬಿಜೆಪಿ ಕಾರ್ಯಕಾರಿಣಿಗೆ ಹೊಸಪೇಟೆಯಲ್ಲಿ‌ ಭರದ ಸಿದ್ಧತೆ ನಡೆದಿದೆ. ಹತ್ತು ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ‌ಸಿದ್ದತೆ ಮಾಡಿಕೊಳ್ಳುವ ಮೂಲಕ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ (JP Nadda) ನೇತೃತ್ವದಲ್ಲಿ  ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಸಚಿವ ಆನಂದ ಸಿಂಗ್ ಆರ್ ಎಸ್ ಎಸ್ ಮುಖಂಡ ಅರುಣ್ ಜೀ ನೇತೃತ್ವದಲ್ಲಿ ಭೂಮಿ ಪೂಜೆ ನೇರವೆರಿಸಲಾಗಿದೆ.

"

ಕರ್ನಾಟಕದಲ್ಲಿ ಜೆಡಿಎಸ್ ಎಲ್ಲಿದೆ? : ತೇಜಸ್ವಿ ಸೂರ್ಯ

ವಿಜಯನಗರದ ಸಾಮ್ರಾಜ್ಯದಂತೆ ಬಿಜೆಪಿ ದೇಶ ವಿಸ್ತರಣೆ: ಚುನಾವಣೆಗೆ ವರ್ಷ ಇರೋ ಹಿನ್ನೆಲೆ ಕಾರ್ಯಕಾರಣಿಯಲ್ಲೇ ಚುನಾವಣೆ ಕುರಿತು ಮಹತ್ವದ ಚರ್ಚೆ ನಡೆಯಲಿದೆ. ವಿಜಯನಗರ ಸಂಸ್ಥಾನ ವಿಸ್ತರಣೆ ಮಾಡಿದಂತೆ ಬಿಜೆಪಿ ಪಕ್ಷವನ್ನು ವಿಸ್ತರಣೆ ಮಾಡುತ್ತೇವೆಂದು ಸಚಿವ ಆನಂದ ಸಿಂಗ್ ಈ ವೇಳೆ ಹೇಳಿದರು. ಇನ್ನೂ ಚುನಾವಣೆ ಇದ್ದಾಗ ಕಾರ್ಯಕರ್ತರನ್ನು ಕರೆಸಿ ಮಾತನಾಡೋದಲ್ಲ ಬಿಜೆಪಿ ವರ್ಷದ 365 ದಿನಗಳ ಕಾಲ ನಿರಂತರವಾಗಿ ಕೆಲಸ ಮಾಡ್ತದೆ. ಹೀಗಾಗಿ ಚುನಾವಣೆ ಯಾವಾಗ ಬಂದ್ರೂ ನಾವು ಸಿದ್ಧವೆಂದು ಆನಂದ ಸಿಂಗ್ (Anand Singh) ಹೇಳಿದರು

ಕಾರ್ಯಕಾರಿಗೆ ಬರಲಿದ್ದಾರೆ ಸಂಘದ ಮುಖಂಡರು: ವಿಜಯನಗರ (Vijayanagara) ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ನಡೆಯುತ್ತಿರೋ ರಾಜ್ಯಮಟ್ಟದ ಕಾರ್ಯಕಾರಣಿ ಇದಾಗಿರೋ ಹಿನ್ನೆಲೆ ಸಂಘ ಪರಿವಾರದ ಮುಖಂಡರಾದ ಸಂತೋಷ್ ಜೀ, ಅರುಣ್ ಜೀ, ಸೇರಿದಂತೆ ಹಲವು ಮುಖಂಡರು ಸೇರಿದಂತೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ನಳೀನ್ ಕುಮಾರ್ ಕಟೀಲು, ಪ್ರಹ್ಲಾದ ಜೋಷಿ, ಯಡಿಯೂರಪ್ಪ, ಸಿಎಂ ಬೊಮ್ಮಯಿ ಸೇರಿದಂತೆ ಇಡೀ ರಾಜ್ಯದ ಸಚಿವ ಸಂಪುಟ ಎಲ್ಲ ಸದಸ್ಯರು ಆಗಮಿಸಲಿದ್ದಾರೆ.

ರಾಜ್ಯ ಈ ಪರಿಸ್ಥಿತಿ ಬರೋದಕ್ಕೆ ಮೂಲ ಕಾರಣ ಸಿದ್ದರಾಮಯ್ಯ: ಹೆಚ್‌ಡಿಕೆ

ಹಿಜಾಬ್ ಮತ್ತು  ಅನ್ಯ ಧರ್ಮದ ಗಲಾಟೆ ವಿಚಾರ ಕುರಿತು ಚರ್ಚೆ: ಇನ್ನೂ ಕಾರ್ಯಕಾರಣಿಯಲ್ಲಿ ಚುನಾವಣೆ ಪ್ರಮುಖ ವಿಚಾರವಾಗಿದ್ದರೆ ಉಳಿದಂತೆ ಹಿಜಾಬ್ (Hijab), ಜಾತ್ರೆಯಲ್ಲಿ ಮತ್ತು ದೇವಸ್ಥಾನ ಪಕ್ಕದಲ್ಲಿ ಮುಸ್ಲಿಂ ಅಂಗಡಿ ಹಾಕೋ ವಿಚಾರವನ್ನು ಚರ್ಚೆ ಮಾಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಇಲ್ಲದ ಮತಗಳಿಗಿಂತ ಇರೋ ಮತಗಳನ್ನು ಗಟ್ಟಿಗೊಳಿಸಿ: ಇನ್ನೂ ಪ್ರತಿ ಕ್ಷೇತ್ರದಲ್ಲಿಯೂ ಎ ಬಿ ಸಿ ಮಾದರಿಯಲ್ಲಿ ‌ಮೂರು ವರ್ಗಗಳನ್ನು ಮಾಡಬೇಕೆನ್ನುವ ಸ್ಪಷ್ಟ ಸಂದೇಶ ನೀಡಲು ಮುಂದಾಗಿದೆ. ಬಿಜೆಪಿಗೆ ಬರಬಹುದಾದ ಮತಗಳನ್ನು 'ಎ' ವರ್ಗ ಮತ್ತು 50-50 ಇರೋರನ್ನು ' ಬಿ' ವರ್ಗ ಮತ್ತು ಬಿಜೆಪಿಗೆ ಬರೋದು ಡೌಟ್ ಅನ್ನೋವರನ್ನು ಸಿ ವರ್ಗ ಎಂದು ವರ್ಗೀಕರಣ ಮಾಡೋ ಮೂಲಕ ಬಿಜೆಪಿ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಿ ಎನ್ನುವ ಸ್ಪಷ್ಟವಾದ ಸಂದೇಶವನ್ನು ಕಾರ್ಯಕಾರಣಿ ಮೂಲಕ ನೀಡಲು ಬಿಜೆಪಿ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌