
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿರುವ 136 ಅಭ್ಯರ್ಥಿಗಳ ಪೈಕಿ 35 ಮಂದಿ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಾಗಿದ್ದಾರೆ.
ಕುಡುಚಿ - ಮಹೇಂದ್ರ ಕೆ. ತಮ್ಮಣ್ಣನವರ್, ಬೆಳಗಾವಿ ಉತ್ತರ - ಆಸಿಫ್ ಸೇಠ್, ಕಿತ್ತೂರು- ಬಾಬಾಸಾಹೇಬ್ ಪಾಟೀಲ್, ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ್ ವೈದ್ಯ, ಬಾದಾಮಿ - ಭೀಮಸೇನ್ ಬಿ. ಚಿಮ್ಮನಕಟ್ಟಿ, ನಾಗಠಾಣ- ವಿಠಲ್ ಕಟಕದೋಂಡ, ಸಿಂಧಗಿ- ಅಶೋಕ್ ಎಂ.ಮನಗುಳಿ, ಗುಲ್ಬರ್ಗಾ ದಕ್ಷಿಣ- ಅಲ್ಲಮಪ್ರಭು ಪಾಟೀಲ್, ಶಿರಸಿ- ಭೀಮಣ್ಣ ನಾಯ್‌್ಕ, ರಾಣೆಬೆನ್ನೂರು- ಪ್ರಕಾಶ್ ಕೋಳಿವಾಡ, ಬಳ್ಳಾರಿ ನಗರ- ನಾರಾ ಭರತ್‌ರೆಡ್ಡಿ, ಕೂಡ್ಲಿಗಿ - ಡಾ.ಶ್ರೀನಿವಾಸ್ ಎನ್.ಟಿ., ಚಿತ್ರದುರ್ಗ- ಕೆ.ಸಿ.ವೀರೇಂದ್ರ, ಜಗಳೂರು- ಬಿ.ದೇವೇಂದ್ರಪ್ಪ, ಮಾಯಕೊಂಡ - ಕೆ.ಎಸ್.ಬಸವರಾಜು, ಚನ್ನಗಿರಿ - ಬಸವರಾಜು ವಿ. ಶಿವಗಂಗ, ಮೂಡಿಗೆರೆ - ನಯನ ಜ್ಯೋತಿ ಜವಾರ್, ಚಿಕ್ಕಮಗಳೂರು - ಎಚ್.ಡಿ.ತಮ್ಮಯ್ಯ, ಕಡೂರು- ಆನಂದ್ ಕೆ.ಎಸ್., ಪಾವಗಡ -ಎಚ್.ವಿ.ವೆಂಕಟೇಶ್, ಚಿಕ್ಕಬಳ್ಳಾಪುರ- ಪ್ರದೀಪ್ ಈಶ್ವರ್, ಪುಲಕೇಶಿನಗರ - ಎ.ಸಿ.ಶ್ರೀನಿವಾಸ್, ದೇವನಹಳ್ಳಿ- ಕೆ.ಎಚ್.ಮುನಿಯಪ್ಪ, ನೆಲಮಂಗಲ- ಎನ್.ಶ್ರೀನಿವಾಸಯ್ಯ, ರಾಮನಗರ- ಎಚ್.ಎ.ಇಕ್ಬಾಲ್ ಹುಸೇನ್, ಮದ್ದೂರು- ಕೆ.ಎಂ.ಉದಯ್, ಮಂಡ್ಯ -ಪಿ.ರವಿಕುಮಾರ್, ಪುತ್ತೂರು -ಅಶೋಕ್ ಕುಮಾರ್ ರೈ, ಮಡಿಕೇರಿ -ಡಾ.ಮಂಥರ್‌ಗೌಡ, ವಿರಾಜಪೇಟೆ -ಎ.ಎಸ್.ಪೊನ್ನಣ್ಣ, ಕೆ.ಆರ್.ನಗರ- ಡಾ.ರವಿಶಂಕರ್, ನಂಜನಗೂಡು -ದರ್ಶನ್ ಧ್ರುವನಾರಾಯಣ್, ಚಾಮರಾಜ -ಕೆ.ಹರೀಶ್ ಗೌಡ, ಗುಂಡ್ಲುಪೇಟೆ- ಎಚ್.ಎನ್.ಗಣೇಶ್ ಪ್ರಸಾದ್ ಇಷ್ಟೂ ಮಂದಿ ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒಕ್ಕಲಿಗರ ಪರ್ಯಾಯ ನಾಯಕನಾಗಿ ಡಿಕೆಶಿ: 53 ಒಕ್ಕಲಿಗರಿಗೆ ಟಿಕೆಟ್ ನೀಡಿದ್ದ ಕಾಂಗ್ರೆಸ್
ಎಸ್.ಎಂ. ಕೃಷ್ಣ ನಂತರ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ, ರಾಜ್ಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಪರ್ಯಾಯ ನಾಯಕರಾಗಿ ಹೊರಹೊಮ್ಮಿದ್ದಾರೆ.
ಹಳೇ ಮೈಸೂರು ಭಾಗ ಸೇರಿದಂತೆ ಒಕ್ಕಲಿಗ (Okkaliga) ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ, ಪ್ರಚಾರ ಸೇರಿ ಇನ್ನಿತರ ಕೆಲಸಗಳನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದರು. ಕಾಂಗ್ರೆಸ್‌ನಿಂದ ಒಕ್ಕಲಿಗ ಸಮುದಾಯಕ್ಕೆ ಸೇರಿದ 53 ಮಂದಿಗೆ ಟಿಕೆಟ್ ಕೊಡಿಸುವಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ, ರಾಮನಗರ, ಮಂಡ್ಯ (mandya), ಮೈಸೂರು (Mysore) ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯದ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಹೀಗಾಗಿ 53 ಮಂದಿ ಒಕ್ಕಲಿಗ ಅಭ್ಯರ್ಥಿಗಳಲ್ಲಿ 42 ಮಂದಿ ಗೆಲುವು ಸಾಧಿಸಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಡಿಮೆ ಅಂತರದಲ್ಲಿ ಸೋಲುವಂತಾಗಿದೆ.
ಒಕ್ಕಲಿಗ ಸಮುದಾಯ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಸಂಘಟಿತವಾಗಿ ವಿವಿಧ ಹೋರಾಟಗಳನ್ನು ನಡೆಸಿ, ಪ್ರಜಾಧ್ವನಿ ಸಮಾವೇಶಗಳನ್ನು ಮಾಡುವ ಮೂಲಕ ಕಾಂಗ್ರೆಸ್‌ನತ್ತ ಮತದಾರರನ್ನು ಸೆಳೆಯುವಲ್ಲಿ ಡಿ.ಕೆ. ಶಿವಕುಮಾರ್ ಯಶಸ್ವಿಯಾಗಿದ್ದಾರೆ. ಅದರ ಜತೆಗೆ 2022ರಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ 160 ಕಿಮೀ ಪಾದಯಾತ್ರೆ ನಡೆಸುವ ಮೂಲಕ ಅಂದೇ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭಿಸುವಲ್ಲಿ ಶಿವಕುಮಾರ್ ಮಹತ್ವದ ಪಾತ್ರವಹಿಸಿದರು. ಅದರ ಜತೆಗೆ 75ನೇ ಸ್ವಾತಂತ್ರ ದಿನದ ಅಂಗವಾಗಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆ, ರಾಜ್ಯದಲ್ಲಿ 550 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆಯ ವ್ಯವಸ್ಥಿತ ಆಯೋಜನೆ ಮಾಡುವ ಕಾಂಗ್ರೆಸ್ ಸಂಘಟನೆ ವೃದ್ಧಿಸುವಂತೆ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.