ಬಿಜೆಪಿ ಪರ ಗುಂಡಿ ಅದುಮಿದ ಮತಗಟ್ಟಅಧಿಕಾರಿ - ಕೆಲಕಾಲ ಚಾಮನೂರು ಉದ್ವಿಗ್ನ

By Kannadaprabha News  |  First Published May 11, 2023, 12:48 PM IST

ಚುನಾವಣಾ ಕೆಲಸದಲ್ಲಿದ್ದ ಅಧಿಕಾರಿಯೊಬ್ಬರು ದೃಷ್ಟಿವಿಕಲಚೇತನ ಮಹಿಳಾ ಮತದಾರರೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಪರ ಬಟನ್‌ ಒತ್ತಿದ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಈ ಮಗಟ್ಟೆಸುತ್ತಮುತ್ತ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.


ಕಲಬುರಗಿ (ಮೇ.11) : ಚುನಾವಣಾ ಕೆಲಸದಲ್ಲಿದ್ದ ಅಧಿಕಾರಿಯೊಬ್ಬರು ದೃಷ್ಟಿವಿಕಲಚೇತನ ಮಹಿಳಾ ಮತದಾರರೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ ಬಿಜೆಪಿ ಪರ ಬಟನ್‌ ಒತ್ತಿದ ಘಟನೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿ ನಡೆದಿದೆ. ಇದರಿಂದಾಗಿ ಈ ಮಗಟ್ಟೆಸುತ್ತಮುತ್ತ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.

ಚುನಾವಣಾ ಅಧಿಕಾರಿ ಬಿ.ಸಿ. ಚವ್ಹಾಣ್‌(election official BC Chauhan) ಎಂಬುವವರ ಮೇಲೆ ಈ ಬಲವಾದಂತಹ ಆರೋಪ ಬಂದಾಗ ಸುದ್ದಿ ತಿಳಿದು ಚಾಮನೂರು ಮತಗಟ್ಟೆ (Chamanur Polling booth)ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ್‌ ಖರ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಚಿತ್ತಾಪುರ ಚುನಾವಣಾಧಿಕಾರಿ ನವೀನ್‌ ಕುಮಾರ್‌ ಅವರು ಅಧಿಕಾರಿಯನ್ನು ಬದಲಾಯಿಸಿದರು.

Tap to resize

Latest Videos

undefined

ಕಲಬುರಗಿ ದಕ್ಷಿಣ ಕ್ಷೇತ್ರ: ಮತದಾರರಿಗೆ ಹಣ ಹಂಚಿಕೆ ಪ್ರಕರಣ-ಪೋಲೀಸ್ ಆಯುಕ್ತರಿಗೆ ಜಿಲ್ಲಾಧಿಕಾರಿಯಿಂದಲೇ ದೂರು

ಬಸಮ್ಮ ಎಂಟಮನ್‌ ಎಂಬ ದೃಷ್ಟಿವಿಕಲ ಚೇತನ ಮಹಿಳೆ ಮತಗಟ್ಟೆಗೆ ಹೋಗಿ ಕಾಂಗ್ರೆಸ್‌ ಅಭ್ಯರ್ಥಿಯ ಚಿಹ್ನೆಗೆ ಬಟನ್‌ ಒತ್ತುವಂತೆ ಮನವಿ ಮಾಡಿದ್ದಾರೆ. ಆದರೆ ಚುನಾವಣಾಧಿಕಾರಿ ಚವ್ಹಾಣ್‌ ಅವರು ಬಿಜೆಪಿ ಅಭ್ಯರ್ಥಿಯ ಮುಂದಿರುವ ಬಟನ್‌ ಒತ್ತಿದ್ದಾರೆ. ಅದು ಮಹಿಳೆ ಗಮನಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮತಗಟ್ಟೆಯೊಳಗಿನ ಈ ಘಟನೆ ಬಯಲಿಗೆ ಬಂದಿದೆ.

ಇದಕ್ಕೂ ಮೊದಲು ಮತಯಂತ್ರ ಪರೀಕ್ಷೆ ಸಮಯದಲ್ಲಿ ಸಹ ಬಿಜೆಪಿಯ ಸುಮಾರು ಐವತ್ತಕ್ಕೂ ಅಧಿಕ ಮತ ಹಾಕಲಾಗಿದೆ ಎಂದು ಹೇಳಲಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ನಂತರ ಅದನ್ನು ಡಿಲಿಟ್‌ ಮಾಡಲಾಗಿದೆ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡ ಭಗವಾನ್‌ ಆರೋಪಿಸಿದ್ದಾರೆ.

ನಾನು ಮಣ್ಣಿನ ಮಗ, ನನ್ನ ಗೌರವ ಉಳಿಸಿ, ಕಾಂಗ್ರೆಸ್‌ಗೆ ಕಣ್ಮುಚ್ಚಿ ಮತ ಹಾಕಿ: ಮಲ್ಲಿಕಾರ್ಜುನ ಖರ್ಗೆ

ಸ್ಥಳಕ್ಕೆ ಬಂದ ಪ್ರಿಯಾಂಕ್‌ ಖರ್ಗೆ(Priyank kharge) ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ತಕ್ಷಣ ಇಂತಹ ಅಕ್ರಮಗಳು ಕೇಳಿ ಬಂದಿರುವ ಅಧಿಕಾರಿಯನ್ನ ಬದಲಾಯಿಸುವಂತೆ ಚುನಾವಣಾ ಅಧಿಕಾರಿ ಮೇಲೆ ಒತ್ತಡ ಹೇರಿದ ಮೇಲೆ ಅವರನ್ನು ಬದಲಾಯಿಸಿದ ನಂತರP ಆರೋಪಿಯನ್ನು ಪೊಲೀಸ್‌ ವಶಕ್ಕೆ ಒಪ್ಪಿಸಲಾಗಿದೆ.

click me!