ಕಾಂಗ್ರೆಸ್‌ಗೆ ಮುಗಿಯದ ಟಿಕೆಟ್‌ ಕಗ್ಗಂಟು: ಶಕ್ತಿ ದೇವತೆ ಮೊರೆ ಹೋದ ಡಿಕೆ ಶಿವಕುಮಾರ!

By Ravi Janekal  |  First Published Apr 11, 2023, 12:05 AM IST

ಕಾಂಗ್ರೆಸ್ ಪಕ್ಷದಲ್ಲಿನ ಟಿಕೆಟ್ ಕಗ್ಗಂಟಿನ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಚಿಕ್ಕಮಗಳೂರು  ಶೃಂಗೇರಿ ಶಾರಾದಾಂಬೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
 
ಚಿಕ್ಕಮಗಳೂರು (ಏ.10): ಕಾಂಗ್ರೆಸ್ ಪಕ್ಷದಲ್ಲಿನ ಟಿಕೆಟ್ ಕಗ್ಗಂಟಿನ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಚಿಕ್ಕಮಗಳೂರು  ಶೃಂಗೇರಿ ಶಾರಾದಾಂಬೆ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.

ದೇವರ ದರ್ಶನಕ್ಕೂ ಬಂದರೂ ಬಿಡದ ಆಕಾಂಕ್ಷಿಗಳು : 

Latest Videos

undefined

ವಿಧಾನಸಭಾ ಚುನಾವಣೆಯ(Karnataka assembly eletion) ಎರಡನೇ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆ ಜಿಲ್ಲೆಯ ಕಡೂರು ಕ್ಷೇತ್ರ(Kaduru assembly constituency) ಸೇರಿದಂತೆ ಟಿಕೆಟ್ ತಪ್ಪಿರುವ ಆಕಾಂಕ್ಷಿಗಳ ಪಕ್ಷದ ಅಧಿಕೃತ ಅಭ್ಯಥಿಗಳು ಎದುರೇ ಸ್ಪರ್ಧಿಸಲು ಮುಂದಾಗಿದ್ದು ಪಕ್ಷದಲ್ಲಿ ಎದ್ದಿರುವ ಬಂಡಾಯದ ಬಿಸಿಯನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಶಾರದಾಂಬೆ ದರ್ಶನಕ್ಕೆ ಮುಂದಾಗಿದ್ದು, ದೇವರ ದರ್ಶನಕ್ಕೂ ಬಂದರೂ ಬಿಡದ ಆಕಾಂಕ್ಷಿಗಳು ತಮ್ಮ ಮುಖಂಡರಿಗೆ ಟಿಕೆಟ್ ನೀಡಬೇಕೆಂದು ಮನವಿಮಾಡಿದ್ದು, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ(Chikkamagaluru assembly constituency) ದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ ಅವರಿಗೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.

ಹಸ್ತ ಪಾಳಯದಲ್ಲಿ ಶುರುವಾಯ್ತು ಡಿಕೆ ಹೊಸ ಆಟ...ಖರ್ಗೆ ಪರ ಅರಳಿತೇಕೆ ಕೆಪಿಸಿಸಿ ಅಧ್ಯಕ್ಷನ ಹೃದಯ..?

 

ಈಗಾಗಲೇ ಶೃಂಗೇರಿ ಮತ್ತು ಕಡೂರು ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್ ಮುಖಂಡರು ಪ್ರಕಟಿಸಿದ್ದು, ಇನ್ನೂ ಮೂರು ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಬೇಕಿದೆ. ತರೀಕೆರೆ ಕ್ಷೇತ್ರದಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಅದರಂತೆ ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಹುತೇಕ ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ವಿಷಯ ಚರ್ಚೆಯಲ್ಲಿದೆ. ಹಲವು ಮುಖಂಡರು ಕೆಲವು ಆಕಾಂಕ್ಷಿಗಳ ಪರವಾಗಿ ಬ್ಯಾಟ್ಮಾಡುತ್ತಿದ್ದಾರೆ.

ತಮ್ಮಯ್ಯ ಬೆಂಬಲಿಗರ ಬಲ ಪ್ರದರ್ಶನ:

ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು ಕ್ಷೇತ್ರ ಈಗ ಬಿಜೆಪಿ ಪಾಲಾಗಿದ್ದು, ಈ ವರ್ಷ ಕ್ಷೇತ್ರವನ್ನು ಕೈ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಹಲವು ಮುಖಂಡರು ಮತ್ತು ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ. ಈ ನಿಟ್ಟಿನಲ್ಲಿ ತಮ್ಮಯ್ಯ ಅವರಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇವೆಂದು  ಮನವಿ ಮಾಡಿದ್ದರು.ಶಾರದಾಂಬೆ ದೇವರ ದರ್ಶನ ಪಡೆದು ಡಿ.ಕೆ.ಶಿವಕುಮಾರ್  ಹಿಂದಿರುಗುತ್ತಿದ್ದಂತೆ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಚ್ ಡಿ ತಮ್ಮಯ್ಯ ಬಲಪ್ರದರ್ಶನ ಮಾಡಿದ್ದರು.

ಡಿಕೆಶಿ ಧರ್ಮಸ್ಥಳ ಭೇಟಿ ರದ್ದು:

ಶೃಂಗೇರಿ ಶಾರದಾಂಬೆ ದರ್ಶನದ ಬಳಿಕ ದೆಹಲಿಗೆ ಹೋಗಲಿರುವ ಡಿಕೆಶಿ(DK Shivakumar) ಧರ್ಮಸ್ಥಳ ಕ್ಕೆ ಮತ್ತೆ ಬರುತ್ತೇನೆ ಎಂದು ತಿಳಿಸಿದರು.ದೆಹಲಿಯಲ್ಲಿ ನಡೆಯುಲಿರುವ ಸಭೆಯಲ್ಲಿ ಪಾಲ್ಗೋವ ಹಿನ್ನೆಲೆಯಲ್ಲಿ ಧರ್ಮಸ್ಥಳ ಪ್ರವಾಸವನ್ನು ರದ್ದುಗೊಳಿಸಿ ಶೃಂಗೇರಿಯಿಂದ ನೇರವಾಗಿ ಬೆಂಗಳೂರಿಗೆ ತೆರಳಿದರು.ಅಲ್ಲಿಯಿಂದ ನವದೆಹಲಿಗೆ ಡಿ ಕೆ ಶಿವಕುಮಾರ್ ತೆರಳಿದರು. 

ಖರ್ಗೆ ಅವರಿಗೆ ಹಿಂದೆಲ್ಲಾ ಅನ್ಯಾಯವಾಗಿದೆ : 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun kharge AICC President) ಅವರಿಗೆ ಹಿಂದೆಲ್ಲಾ ಅನ್ಯಾಯವಾಗಿದೆ ಎನ್ನುವ ಕೂಗಿದೆ. ಸಿದ್ದರಾಮಯ್ಯ(Siddaramaiah) ಅವರು ಪಕ್ಷ ಹೇಳಿದಂತೆ ಕೇಳುತ್ತಾರೆ. ನಾನೂ ಪಕ್ಷದ ನಿರ್ಧಾರಕ್ಕೆ ಬಿಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.ಶೃಂಗೇರಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪ್ರಸ್ತಾಪವಾಗಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದರು.ಮಲ್ಲಿಕಾರ್ಜುನ ಖರ್ಗೆ ನಮ್ಮ ಹಿರಿಯ ನಾಯಕರು, ಎಐಸಿಸಿ ಅಧ್ಯಕ್ಷರು, ರಾಜ್ಯದಲ್ಲಿ ಕಾಂಗ್ರೆಸ್ ಬರಬೇಕು ಎನ್ನುವ ಇಚ್ಛೆ ಅವರದ್ದು, ಅವರಿಗೆ ಹಿಂದೆಲ್ಲಾ ಅನ್ಯಾಯವಾಗಿದೆ ಎನ್ನುವ ಕೂಗಿದೆ. ಪಕ್ಷ ಏನು ಹೇಳುತ್ತದೆ ಅದನ್ನು ನಾವು ಕೇಳಬೇಕು. ನಾನೂ ಪಕ್ಷದ ನಿರ್ಧಾರಕ್ಕೆ ಬಿಡುತ್ತೇನೆ. ಖರ್ಗೆ ಅವರು ಉನ್ನತ ಸ್ಥಾನದಲ್ಲಿರುವವರು, ಸಿದ್ದರಾಮಯ್ಯ ಅವರೂ ಪಕ್ಷ ಹೇಳಿದಂತೆ ಕೇಳುತ್ತಾರೆ. ಬೇರೆಯವರೂ ಪಕ್ಷ ಹೇಳಿದಂತೆ ಕೇಳುತ್ತಾರೆ. ಇಲ್ಲಿ ಪಕ್ಷ ಮುಖ್ಯ ಎಂದರು.ಡಿ.ಕೆ.ಶಿವಕುಮಾರ್ ಅವರ ಈ ಮಾತುಗಳು ಮುಖ್ಯಮಂತ್ರಿ ರೇಸ್ನಲ್ಲಿರುವ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ಪ್ರಯತ್ನದ ಮುಂದುವರಿದ ಭಾಗ ಎಂದೇ ವಿಶ್ಲೇಷಣೆಗಳು ನಡೆಯುತ್ತಿವೆ.

 

ಸೋಲುತ್ತೇವೆಂದು ದಿಲ್ಲಿ ಬಿಜೆಪಿ ನಾಯಕರು ಪದೇ ಪದೇ ರಾಜ್ಯಕ್ಕೆ: ಡಿ.ಕೆ.ಶಿವಕುಮಾರ್‌

ಇದು ರಾಜಕಾರಣ, ಯಾರು ಬೇಕಾದರೂ ನಿಲ್ಲಬಹುದು

ರಾಜಕಾರಣದಲ್ಲಿ ಎದುರಾಳಿ ಯಾರಾದರೂ ಎದುರಿಸಲೇ ಬೇಕು. ಬಿಜೆಪಿಯವರ ದೊಡ್ಡ ನಿರ್ಧಾರಕ್ಕೆ ಸ್ವಾಗತ ಮಾಡುತ್ತೇನೆ. ಇದು ರಾಜಕಾರಣ ಹೋರಾಟ ಮಾಡೋಣ, ಜನ ತೀರ್ಮಾನ ಮಾಡುತ್ತಾರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.ಕನಕಪುರ ಕ್ಷೇತ್ರಕ್ಕೆ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಮಾತಿಗೆ ಅವರು ಶೃಂಗೇರಿಯಲ್ಲಿ ಪ್ರತಿಕ್ರಿಯಿಸಿದರು.ನಾನೂ ಸೇರಿದಂತೆ ನಮ್ಮೆಲ್ಲಾ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವ ಮುನ್ನ ಇಂದಿರಾ ಗಾಂಧಿ ಅವರಿಗೆ ಆಶೀರ್ವಾದ ಮಾಡಿದ ಪೀಠ ಇದು. ಇಲ್ಲಿ ನಾನು ಶಾರದಾಂಭೆಗೆ ಪ್ರಾರ್ಥನೆ ಸಲ್ಲಿಸಿ ದೇವರು, ಗುರುಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ಅಷ್ಟುಬಿಟ್ಟರೆ ರಾಜಕಾರಣ ಏನಿಲ್ಲ ಎಂದರು.

click me!