Published : May 13, 2023, 06:02 AM ISTUpdated : May 13, 2023, 03:28 PM IST

Karnataka Election 2023 Live: ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

ಸಾರಾಂಶ

ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದು, ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಸಾರಿ ಚುನಾವಣೆಯ ಫಲಿತಾಂಶವನ್ನು ನಿರೀಕ್ಷಿಸುವುದೇ ಸುಲಭವಾಗಿರಲಿಲ್ಲ. 'ನಿಮ್ಮ ನಿರ್ಧಾರ ಈ ಬಾರಿಯ ಬಿಜೆಪಿ ಸರಕಾರ' ಎಂದು ಬಿಜೆಪಿ ಪ್ರಚಾರ ಮಾಡಿದ್ದರೂ ಜನರು ಕಾಂಗ್ರೆಸ್‌ನ 'ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ' ಎಂಬುದಕ್ಕೆ ಮತ ಹಾಕಿದ್ದಾರೆ. ಕಳೆದ ಬಾರಿ ಬಹುಮತದ ಸರಕಾರ ನೀಡದ ಮತದಾರರು ಈ ಸಲ ಸ್ಪಷ್ಟ ಬಹುಮತದ ಸರಕಾರಕ್ಕೆ ಮಣೆ ಹಾಕಿದಂತೆ ಕಾಣಿಸುತ್ತೆ. 

16ನೇ ವಿಧಾನಸಭೆಯ ಚುನಾವಣೆ ಮೇ 10ರಂದು ಏಕ ಹಂತದಲ್ಲಿ ನಡೆದಿದ್ದು, ಮತ ಎಣಿಕೆಯು ಶನಿವಾರ ಕರ್ನಾಟಕದ 34 ಚುನಾವಣಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದ್ದು, 224 ಶಾಸಕರು ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬೀಳುತ್ತಿದೆ. ರಾಜ್ಯದಲ್ಲಿದ್ದ ಒಟ್ಟಾರೆ 5.3 ಕೋಟಿ ಮತದಾರರ ಪೈಕಿ ಒಟ್ಟು 3.8 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಶೇ.73.13ರಷ್ಟು ಮತದಾನವಾಗಿದೆ. ರಾಜ್ಯದ 58,545 ಮತಗಟ್ಟೆಗಳಲ್ಲಿನ ಮತದಾರರು ಅಖಾಡದಲ್ಲಿರುವ 2615 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದರು. ಒಟ್ಟಾರೆ ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಲೆಕ್ಕಾಚಾರದ ಕ್ಷಣ ಕ್ಷಣದ ಮಾಹಿತಿಗೆ ಏಷ್ಯಾನೆಟ್‌ನ್ಯೂಸ್ ಕನ್ನಡ.ಕಾಮ್‌ಗೆ ಲಾಗಿನ್ ಆಗಿರಿ.

Karnataka Election 2023 Live:  ಮುಖ್ಯಮಂತ್ರಿ ಯಾರಾಗ್ತಾರೆ ಅನ್ನೋದೆ ಕುತೂಹಲವೀಗ!

03:28 PM (IST) May 13

ಮೊದಲ ಗೆಲವು ಸಂತೋಷ ತಂದಿದೆ: ವಿಜಯೇಂದ್ರ

ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ ವೈ ವಿಜಯೇಂದ್ರ ಹೇಳಿಕೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು ಸಂತಸ ತಂದಿದೆ.ತಂದೆ ಮಾಜಿ ಸಿಎಂ ಬಿಎಸ್ ವೈ ಮಾರ್ಗದರ್ಶನ ಹಾಗೂ ಸಹೋದರ ಸಂಸದ ಬಿ ವೈ ರಾಘವೇಂದ್ರ ಹಾಗೂ ಕ್ಷೇತ್ರದ ಜನತೆಯ ಮಾರ್ಗದರ್ಶನದಂತೆ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದ ಹಿನ್ನೆಲೆಯಲ್ಲಿ ಸಮರ್ಥವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೆಲಸ ಮಾಡುತ್ತೇವೆ. ಕಡಿಮೆ ಅಂತರದ ಗೆಲುವಿನ ವಿಚಾರ ಮತಗಳು ಎಷ್ಟೇ ಬಂದರೂ ಗೆಲುವು ಗೆಲುವಾಗಿಯೇ ಇರುತ್ತದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನಮ್ಮ ಕೈಹಿಡಿಯಲಿಲ್ಲ. ಕಾಂಗ್ರೆಸ್ನ ಸುಳ್ಳಿನ ಕಂತೆಗಳು ಹಾಗೂ ಗ್ಯಾರಂಟಿ ಕಾರ್ಡ್ ಗಳನ್ನು ಮತದಾರರನ್ನು ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ತನ್ನ ಭರವಸೆಗಳನ್ನು ಈಡೇರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡೋಣ. 

 

 

03:25 PM (IST) May 13

ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಭರ್ಜರಿ ಜಯ.

ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಭರ್ಜರಿ ಜಯ. ಅಧಿಕೃತ ಗೆಲುವು ಘೋಷಿಸಿದ ಚುನಾವಣಾ ಅಧಿಕಾರಿಗಳು. 18,619 ಮತಗಳ ಅಂತರದಲ್ಲಿ ಭರ್ಜರಿ ಗೆಲುವು. ಗೆಲುವಿನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಾ.ಮಹದೇವಪ್ಪ. ಜನರ ಅಲೆ ಹೊರತು ಪಡಿಸಿ ಇನ್ಯಾವುದೇ ಅಲೆ ಕೆಲಸ ಮಾಡಿಲ್ಲ. ಹಿಂದೆ ನಾನು ಶಾಸಕನಾಗಿದ್ದಾಗ ಮಾಡಿದ್ದ ಕೆಲಸಗಳನ್ನು ಜನ ಮಚ್ಚಿ ಮತ ಹಾಕಿದ್ದಾರೆ.
ನನ್ನ ವೈಯಕ್ತಿಕ ಆಸೆ ಆಕಾಂಕ್ಷೆ ಇಲ್ಲ. ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮೈಸೂರಿನಲ್ಲಿ ಡಾ.ಎಚ್.ಸಿ. ಮಹದೇವಪ್ಪ ಹೇಳಿಕೆ.

03:23 PM (IST) May 13

ಹೆಬ್ಬಾಳದಲ್ಲಿ ಕಟ್ಟಾ ಜಗದೀಶ್‌ಗೆ ಸೋಲು

ಬೆಂಗಳೂರಿನ ಹೆಬ್ಬಾಳದಲ್ಲಿ ಕಾಂಗ್ರೆಸ್‌ನ ಭೈರತ ಸುರೇಶ್, ಬಿಜೆಪಿಯ ಕಟ್ಟಾ ಜಗದೀಶ್ ಅವರನ್ನು ಸೋಲಿಸಿದ್ದಾರೆ. 
 

ಬಳ್ಳಾರಿ : ರಾಹುಲ್ ಗಾಂಧಿ ಐರನ್ ಲೆಗ್ ಅಲ್ಲ. ಗೋಲ್ಡನ್ ಲೆಗ್.. ಅವರು‌ ಬಳ್ಳಾರಿಗೆ ಬಂದ ಕಾರಣ ಗೆದ್ದಿರುವೆ. ಬಳ್ಳಾರಿ ನಗರ ಕ್ಷೇತ್ರದಿಂದ ಗೆದ್ದಿರೋ‌‌ ಭರತ್ ರೆಡ್ಡಿ ಹೇಳಿಕೆ. ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಬಂದ ಹಿನ್ನಲೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ. ರಾಹುಲ್ ಗಾಂಧಿ  ಪ್ರಧಾನಿಯಾಗ್ತಾರೆ ಎನ್ನುವ ವಿಶ್ವಾಸವಿದೆ. ತಂತ್ರಗಾರಿಕೆಯಿಂದ ಕುತಂತ್ರದಿಂದ ಸೋಲಿಸಲು ಯಾರೆಲ್ಲ ಪ್ರಯತ್ನ ಮಾಡಿದ್ರು ನಾನು ಗೆದ್ದೆ.

ಯಾರೇ ಕಾಂಗ್ರೆಸ್ ಪಕ್ಷ ಬಿಟ್ಟು ಹೋದ್ರು ಅವರು ಜೀರೋ ಆಗ್ತಾರೆ. ಪರೋಕ್ಷವಾಗಿ ಅನಿಲ್ ಲಾಡ್ ದಿವಾಕರ ಬಾಬು ಟಾಂಗ್ ನೀಡಿದ ಭರತ್. ಕಾರ್ಯಕರ್ತರ ಮತ್ತು ಜನರ ಆಶೀರ್ವಾದ ದಿಂದ 37 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ.

03:16 PM (IST) May 13

ಮಾಧ್ಯಮದ ಮುಂದೆ ಬಿಕ್ಕಿ‌ಬಿಕ್ಕಿ ಅತ್ತ ಪ್ರಭು ಚೌಹಾಣ್

ಔರಾದ್ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಪ್ರಭು ಚೌಹಾಣ್. ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಅಸಮಾಧಾನ ಹೊರಹಾಕಿ‌ದ ಜೌಹಾಣ್. ನನಗೆ ಸೋಲಿಸಲು ಕೇಂದ್ರ ಸಚಿವ ಭಗವಂತ ಖುಬಾ ಕುತಂತ್ರ ಮಾಡಿದ್ದರು ಎಂದು ಕಣ್ಣೀರಾಕಿದ ಚೌಹಾಣ್. ಹೆತ್ತ ತಾಯಿಗೆ, ಮೋಸ ಮಾಡೊ‌ ಕೆಲಸವನ್ನ ಭಗವಂತ ಖುಬಾ ಮಾಡಿದ್ದಾರೆ. ಔರಾದ್‌ನಲ್ಲಿ 300 ಜನರನ್ನು ಬಿಟ್ಟು, ಸೋಲಿಸಲು ಕುತಂತ್ರ ಮಾಡಿದ್ರು. ಆದ್ರೆ ಔರಾದ್ ಜನ ನನ್ನ ಕೈ ಹಿಡಿದಿದ್ದಾರೆ.

ಹಿಂದೆ ಲೋಕಸಬಾ ಚುನಾವಣೆಯಲ್ಲಿ ನಾವೇ ನಿಂತು ಅವರ ಚುನಾವಣೆ ಮಾಡಿದ್ದೆವು. ಆದರೆ ಭಗವಂತ ಖೂಬಾ, ನನ್ನ ವಿರುದ್ದ ಯಾಕೇ ಷಡ್ಯಂತ್ರ ಮಾಡಿದ್ರು ಗೊತ್ತಿಲ್ಲ. ಪ್ರಭು ಚೌಹಾಣ್ ಸೋಲಿಸಬೇಕು ಎಂದು ಮನೆ ಮನೆಗೆ ಹೋಗಿ ಭಗವಂತ ಖುಬಾ ಮತ್ತು ಟೀಂ ಪ್ರಚಾರ ಮಾಡಿದ್ದಾರೆ. ಕೇಂದ್ರ ಸಚಿವ ಭಗವಂತ ಖುಬಾ ನನ್ನ ಸೋಲಿಸಬೇಕು ಅಂತಾ ಪ್ರಯತ್ನ ಮಾಡಿದ್ರು ಜನ ನನ್ನ ಕೈ ಬಿಟ್ಟಿಲ್ಲಾ. ನಾನು ಭಗವಂತ ಖುಬಾ ಏನೂ ಮೋಸ ಮಾಡದೇ ಇದ್ರೂ, ನನಗೆ ದೋಖಾ ಮಾಡಿದ್ರು.

ನಾನು ಸೋಲಬೇಕು ಅಂತಾ, ಭಗವಂತ ಖುಬಾ ಕಾಂಗ್ರೆಸ್‌ಗೆ ಫಂಡಿಂಗ್ ಮಾಡಿದ್ದಾರೆ. ನನಗೆ ಬಹಳ ನೋವಾಗಿದೆ ಎಂದು ಬಿಕ್ಕಿ‌ಬಿಕ್ಕಿ ಅತ್ತ  ಪ್ರಭು ಚೌಹಾಣ್. ನಮ್ಮ‌ ಕಾರ್ಯಕರ್ತರಿಗೆ ಭಗವಂತ ಖುಬಾ ಅವರೆ ಬೇರೆ ಪಕ್ಷದ ಅಭ್ಯರ್ಥಿಗೆ ಹಾಕಿ ಅಂತಾರೆ. ಅವರ ವಿರುದ್ದ ಮುಂದಿನ ಚುನಾವಣೆಯಲ್ಲಿ ನೋಡೊಣ ಎಂದ ಪ್ರಭು ಚೌಹಾಣ್ ಸವಾಲ್. 

03:14 PM (IST) May 13

ಹೊಸದುರ್ಗದಲ್ಲಿ ಕಾಂಗ್ರೆಸ್‌ಗೆ ಗೆಲವು

ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮತ‌ ಎಣಿಕೆ ಮುಕ್ತಾಯ ( FINAL RESULT) 

ಕಾಂಗ್ರೆಸ್ ಅಭ್ಯರ್ಥಿ ಬಿಜಿ ಗೋವಿಂದಪ್ಪ ಪಡೆದ ಮತಗಳು 81050

ಬಿಜೆಪಿ ಅಭ್ಯರ್ಥಿ ಎಸ್.ಲಿಂಗಮೂರ್ತಿ ಪಡೆದ ಮತಗಳು -48234

ಕಾಂಗ್ರೆಸ್ ಅಭ್ಯರ್ಥಿ ಬಿ.ಜಿ ಗೋವಿಂದಪ್ಪ  32816 ಮತಗಳ ಅಂತರದಿಂದ ಗೆಲುವು

03:06 PM (IST) May 13

Karnataka Election Results:ಬಿಜೆಪಿ ಭ್ರಷ್ಟಾಚಾರಕ್ಕೆ ಜನ ಬೇಸತ್ತಿದ್ದಾರೆ: ಸಿದ್ದರಾಮಯ್ಯ

ಯಾವುದೇ ಪಕ್ಷಕ್ಕೂ ಬಹುಮತ ಸಿಗೋಲ್ಲ ಎಂದುಕೊಂಡಿದ್ದ ರಾಜಕೀಯ ವಿಶ್ಲೇಷಕರ ನಿರೀಕ್ಷೆಗೂ ಮೀರಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಸುಮಾರು 140 ಸೀಟ್ಸ್ ಗೆಲ್ಲುವ ಸೂಚನೆ ಇದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು?

02:48 PM (IST) May 13

ಕಲಬುರಗಿ ಜಿಲ್ಲೆಯಲ್ಲಿ ಖರ್ಗೆ ಕಮಾಲ್

ಮತ್ತೊಮ್ಮೆ ಕಾಂಗ್ರೆಸ್ ನ ಭದ್ರಕೋಟೆಯಾದ ಕಲಬುರಗಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಭಾರಿ ಬೆಂಬಲ. ಕಲಬುರಗಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಗೆಲುವು

ಎರಡು ಕ್ಷೇತ್ರಗಳಲ್ಲಿ ಮಾತ್ರ ಬಿಜೆಪಿ ಗೆಲುವು

1. ಚಿತ್ತಾಪುರ - ಪ್ರಿಯಾಂಕ್ ಖರ್ಗೆ

2. ಸೇಡಂ - ಡಾ ಶರಣಪ್ರಕಾಶ್ ಪಾಟೀಲ್

3. ಅಫಜಲಪುರ-  ಎಮ್‌ವೈ ಪಾಟೀಲ್

4. ಆಳಂದ - ಬಿಆರ್ ಪಾಟೀಲ್

5. ಕಲಬುರಗಿ ಉತ್ತರ - ಖನೀಜ್ ಫಾತೀಮಾ

6. ಕಲಬುರಗಿ ದಕ್ಷಿಣ -  ಅಲ್ಲಮಪ್ರಭು ಪಾಟೀಲ್

7. ಜೇವರ್ಗಿ - ಡಾ. ಅಜಯಸಿಂಗ್ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ  ಬಸವರಾಜ್ ಮತ್ತಿಮಡು ಮತ್ತು ಚಿಂಚೋಳಿ ಮತಕ್ಷೇತ್ರದಲ್ಲಿ ಬಿಜೆಪಿಯ ಅವಿನಾಶ ಜಾಧವ್  ಗೆಲುವು

9 ರಲ್ಲಿ 7 ಕ್ಷೇತ್ರ ಬಾಚಿಕೊಂಡ ಕಾಂಗ್ರೆಸ್ ಎರಡು ಕ್ಷೇತ್ರ ಮಾತ್ರ ಉಳಿಸಿಕೊಂಡ ಬಿಜೆಪಿ

02:47 PM (IST) May 13

ಸೋಲಿನ ಹೊಣೆ ನನ್ನದೇ: ಬಸವರಾಜ ಬೊಮ್ಮಾಯಿ

ಹಾವೇರಿ: ಜನರ ಈ ತೀರ್ಪನ್ನು ಅತ್ಯಂತ ಗೌರವ ಪೂರ್ವಕವಾಗಿ ನಾನು ಒಪ್ಪಿಕೊಳ್ಳುತ್ತೇನೆ. ಬಿಜೆಪಿಯ ಈ ಸೋಲಿನ‌ ಜವಾಬ್ದಾರಿಯನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನಾನೇ ಹೊರುತ್ತೇನೆ. ಇದನ್ನು ಯಾರ ಹೆಗಲಿಗೂ ಹಾಕುವುದಿಲ್ಲ ಎಂದು‌ ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ‌ ಹೇಳಿದರು. ಹಾವೇರಿ ದೇವಗಿರಿಯ ಮತ ಎಣಿಕೆ‌ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಈ ಸೋಲಿನ ಬಗ್ಗೆ ಸಂಪೂರ್ಣವಾದ ಪರಾಮರ್ಶೆ ಮಾಡುವ ಅವಶ್ಯಕತೆ ಇದೆ. ಇದಕ್ಕೆ ಹಲಾವರು ಕಾರಣಗಳಿವೆ. ಇದನ್ನು ಪಕ್ಷದಲ್ಲಿ ಆಂತರಿಕ ವಾಗಿ ಆತ್ಮಾವಲೋಕನ ಮಾಡುತ್ತೇವೆ. 

ಪ್ರತಿಯೊಂದು ಕ್ಷೇತ್ರದ ಕುರಿತು ಕೂಲಂಕಷವಾಗಿ ಪರಿಶೀಲನೆ ಮಾಡುತ್ತೇವೆ. ಏನೆಲ್ಲ ಕೊರತೆಗಳು ಆಗಿವೆ. ಅವುಗಳನ್ನು ನೀಗಿಸಿ ಮತ್ತೊಮ್ಮೆ ಸಂಘಟಿತರಾಗಿ ಮತ್ತೆ ಪುಟಿದು ಏಳುವ ಪಕ್ಷ ಬಿಜೆಪಿ. 

ಬರುವಂಥ ಸಂಸತ್ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಎಲ್ಲ ಸಂಘಟನಾತ್ಮಕ ಬಲದಿಂದ ತಪ್ಪುಗಳನ್ನು ಸರಿ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇವೆ. ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. 

ಮೋದಿ, ಅಮಿತ್ ಷಾ ಪ್ರಚಾರ ಕೈ ಹಿಡಿಯಲಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸೋಲಿಗೆ ಹಲವಾರು ಕಾರಣಗಳಿವೆ. ಅದನ್ನು ಅವಲೋಕನ ಮಾಡಿದಾಗ ಗೊತ್ತಾಗುತ್ತದೆ. ಈ ಬಗ್ಗೆ ಈಗಲೇ ಹೇಳುವುದು ಸರಿಯಲ್ಲ ಎಂದರು. ಶಿಗ್ಗಾಂವಿ ಕ್ಷೇತ್ರದಲ್ಲಿ ಬಹಳ ದೊಡ್ಡ ಅಂತರದಲ್ಲಿ ಗೆಲುವು ಕುರಿತು ಮಾತನಾಡಿದ ‌ಸಿಎಂ, ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಕೈಹಿಡಿದಿವೆ. ಬೆಂಬಲಿಸಿದ್ದಾರೆ. ನಿರಂತರವಾಗಿ ನಾಲ್ಕನೇ ಬಾರಿಗೆ ಬೆಂಬಲ‌ ಕೊಟ್ಟಿದ್ದಾರೆ. ನಾನು ಇನ್ನಷ್ಟು ಜವಾಬ್ದಾರಿಯಿಂದ ಕೆಲಸ‌ಮಾಡುತ್ತೇನೆ. 

ಕಾಂಗ್ರೆಸ್ ಗೆಲುವಿಗೆ ಕಾರಣ ಅವರು ಹೇಳಬೇಕು. ಅವರು‌ ನಮಗಿಂತ ವ್ಯವಸ್ಥಿತವಾಗಿ ಚುನಾವಣೆ ಮಾಡಿದ್ದಾರೆ ಎನಿಸುತ್ತದೆ‌ ಎಂದರು.

02:46 PM (IST) May 13

ರಾಯಚೂರಿನ ಮಾನ್ವಿಯಲ್ಲಿ ಗೆಲ್ಲಲ್ಲಿಲ್ಲ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದ ಬಿ.ವಿ.ನಾಯಕ್

ರಾಯಚೂರು: 
ದೇವದುರ್ಗದಲ್ಲಿ ಜೆಡಿಎಸ್ ಗೆ ಭರ್ಜರಿ ಗೆಲುವು 
ಜೆಡಿಎಸ್ ನ ಕರೆಮ್ಮರಿಗೆ ವೀರೋಚಿತ ಗೆಲುವು 
ಬಿಜೆಪಿಯ ಕೆ.ಶಿವನಗೌಡ ನಾಯಕರಿಗೆ ಹೀನಾಯ ಸೋಲು 
-------------------------
*  ರಾಯಚೂರು ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲವು
ಸತತ ಮೂರನೇ ಗೆಲುವು ಸಾಧಿಸಿದ ಡಾ.ಶಿವರಾಜ್ ಪಾಟೀಲ್ 
ಕಾಂಗ್ರೆಸ್ ಅಭ್ಯರ್ಥಿ ಮಹ್ಮದ್ ಶಾಲಂಗೆ ಸೋಲು
--------------- 
*ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು 
ದದ್ದಲ್ ಬಸನಗೌಡ 2ನೇ ಬಾರಿ ಗೆಲುವು 
ಬಿಜೆಪಿಯ ತಿಪ್ಪರಾಜ್ ಹವಲ್ದಾರ್ ಗೆ ಸೋಲು 
-------------- 
* ಮಾನ್ವಿಯಲ್ಲಿ 
ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕರಿಗೆ ಭಾರೀ ಗೆಲುವು 12137
ಬಿಜೆಪಿಯ ಬಿ.ವಿ.ನಾಯಕರಿಗೆ ಸೋಲು 
ಮೂರನೇ ಸ್ಥಾನಕ್ಕಿಳಿದ ಜೆಡಿಎಸ್ 
--------------- 
*ಲಿಂಗಸೂಗುರಲ್ಲಿ ಬಿಜೆಪಿಗೆ ಗೆಲುವು 
ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಗೆಲುವು
ಕೇವಲ 2758  ಮತಗಳಿಂದ ಸೋಲುಂಡ ಕಾಂಗ್ರೆಸ್ 
ಜೆಡಿಎಸ್ ನ ಸಿದ್ದು ಬಂಡಿಗೆ ಮೂರನೇ ಬಾರಿಯೂ ಸೋಲು
--------------- 
*ಸಿಂಧನೂರಿನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್
ಐದನೇ ಬಾರಿ ಶಾಸಕನಾದ ಹಂಪನಗೌಡ ಬಾದರ್ಲಿ
2ನೇ ಸ್ಥಾನಕ್ಕಿಳಿದ ಬಿಜೆಪಿ ಅಭ್ಯರ್ಥಿ ಕರಿಯಪ್ಪ 
ಮೂರನೇ ಸ್ಥಾನಕ್ಕಿಳಿದ ಜೆಡಿಎಸ್ ಶಾಸಕ ನಾಡಗೌಡ 
---------------------- 
* ಮಸ್ಕಿಯಲ್ಲಿ ಮತ್ತೆ ಗೆಲುವು ದಾಖಲಿಸಿದ ಕಾಂಗ್ರೆಸ್ 
ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳಗೆ ಗೆಲುವು 
ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ ಗೆ ಹೀನಾಯ ಸೋಲು 
ಸತತ ಎರಡನೇ ಗೆಲುವು ದಾಖಲಿಸಿದ ಇತರ ತುರ್ವಿಹಾಳ

02:42 PM (IST) May 13

ಅಖಂಡ ಶ್ರೀನಿವಾಸ್‌ಗೆ ಸೋಲು

ಕಾಂಗ್ರೆಸ್ ಟಿಕೆಟ್ ವಂಚಿತ ಅಖಂಡ ಶ್ರೀನಿವಾಸ್ ಪುಲಕೇಶಿ ನಗರದಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಕಳೆದ ಸಲ 70 ಸಾವರಗಳ ಭರ್ಜರಿ ಮತಗಳ ಅಂತರದಿಂದ ಗೆದ್ದಿದ್ದ ಇವರು, ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್ ವಿರುದ್ಧ ಸೋಲುಂಡಿದ್ದಾರೆ. 
 

02:23 PM (IST) May 13

ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ಗೂ ಸೋಲು

ಬಹುತೇಕ ಎಲ್ಲ ಘಟಾನುಘಟಿ ಸಚಿವರೂ ಸೋಲಿನ ರುಚಿ ಕಂಡಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಹ ಸೋತಿದ್ದಾರೆ. ತರೀಕೆರೆಯ ಕಾಂಗ್ರೆಸ್‌ನ ಶ್ರೀನಿವಾಸ್‌ಗೆ ಗೆಲವು. 

02:20 PM (IST) May 13

ಗಾಂಧಿ ನಗರ ಕ್ಷೇತ್ರದಲ್ಲಿ ಮರು ಎಣಿಕೆ, 103 ಮತಗಳಿಂದ ಗೆದ್ದ ದಿನೇಶ್ ಗಂಡೂರಾವ್

ಕೇವಲ 113 ಮತಗಳಿಂದ ಗೆದ್ದಿದ್ದ ಕಾಂಗ್ರೆಸ್ ಗುಂಡೂರಾವ್. ಗಾಂಧಿನಗರದಲ್ಲಿ ಬಿಜೆಪಿಯ ಸಪ್ತಗಿರಿ ಗೌಡರಿಗೆ ಸೋಲಾಗಿತ್ತು. ಇದೀಗ ಮರು ಎಣಿಕೆ ನಡೆಯುತ್ತಿದೆ. 
ವಿಜಯನಗರದಲ್ಲಿ ಕೃಷ್ಣಪ್ಪ ಹಾಗೂ ಗೋವಿಂದರಾಜನಗರದಲ್ಲಿ ಪ್ರಯಕೃಷ್ಣ ಗೆದ್ದಿದ್ದು, ಅಪ್ಪ-ಮಗ ಇಬ್ಬರೂ ಗೆದ್ದು ಬೀಗಿದ್ದಾರೆ. 
ಬೆಂಗಳೂರು ದಕ್ಷಿಣದಲ್ಲಿ ಎಂ ಕೃಷ್ಣಪ್ಪ ಹಾಗೂ ರಾಜರಾಜೇಶ್ವರ ನಗರದಲ್ಲಿ ಮುನಿರತ್ನ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಗೆಲವು ಸಾಧಿಸಿದ್ದಾರೆ. 
ಯಲಹಂಕದಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಗೆಲವು ಸಾಧಿಸಿದ್ದಾರೆ. 

02:12 PM (IST) May 13

ಜಯನಗರದಲ್ಲಿ ಸೌಮ್ಯಾ ರೆಡ್ಡಿಗೆ ಗೆಲವು

ಬಿಟಿಎಂ ಲೇ ಔಟ್‌ನಲ್ಲಿ ರಾಮಲಿಂಗಾ ರೆಡ್ಡಿ ಗೆದ್ದರೆ, ಮಗಳು ಸೌಮ್ಯಾ ರೆಡ್ಡಿ ಜಯನಗರದಲ್ಲಿ ಗೆಲುವಿನ ನಗೆ ಬಿದ್ದಿದ್ದಾರೆ. ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆದ್ದರೆ, ಸಿ.ಪಿ.ಯೋಗೇಶ್ವರ್ ಸೋತಿದ್ದಾರೆ. ರಾಮನಗರದಲ್ಲಿ ಮಗ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ. 

02:07 PM (IST) May 13

ಸಿಎಂ ತವರು ಹಾವೇರಿ ಹಸ್ತಮಯ

ಹಾವೇರಿ ಜಿಲ್ಲೆಯಲ್ಲಿ ಹಸ್ತಮಯ ಮಾಡಿದ ಕೈ ಕ್ಯಾಂಡಿಡೆಟ್ಸ್. ಜಿಲ್ಲೆಯ 6 ಕ್ಷೇತ್ರಗಳ ಪೈಕಿ 5 ರಲ್ಲಿ ಕೈ ಕೇಕೆ. ಒಂದಕ್ಕೆ ತೃಪ್ತಿಯಾದ ಬಿಜೆಪಿ ಪಾಳಯ. ಶಿಗ್ಗಾವಿಯಲ್ಲಿ ಮಾತ್ರ ಬಸವರಾಜ್ ಬೊಮ್ಮಾಯಿ ಗೆಲವು. ಉಳಿದ ಕ್ಷೇತ್ರಗಳಾದ ರಾಣೇಬೆನ್ನೂರು,ಬ್ಯಾಡಗಿ, ಹಾನಗಲ್, ಹಿರೆಕೇರೂರು ಹಾಗೂ ಹಾವೇರಿಯಲ್ಲಿ ಕಾಂಗ್ರೆಸ್ ಗೆಲವು. ಭಾರಿ ಅಂತರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳು. ರಾಣೇಬೆನ್ನೂರಲ್ಲಿ ಅಭ್ಯರ್ಥಿ ಪ್ರಕಾಶ್ ಕೋಳಿವಾಡ ಗೆಲವು.ಹಿರೆಕೇರೂರಿನಲ್ಲಿ ಯು ಬಿ ಬಣಕಾರ ಗೆಲವು. ಬ್ಯಾಡಗಿಯಲ್ಲಿ ಬಸವರಾಜ್ ಶಿವಣ್ಣನವರ ಗೆಲವು.
ಹಾವೇರಿಯಲ್ಲಿ ರುದ್ರಪ್ಪ ಲಮಾಣಿ ಗೆಲವು. ಹಾನಗಲ್ ನಲ್ಲಿ ಶ್ರೀನಿವಾಸ್ ಮಾನೆ ಗೆಲವು.

02:06 PM (IST) May 13

ಶಿವಮೊಗ್ಗದಲ್ಲಿ ಕಮಲ ಅರಳಿದ್ದು ಅಷ್ಟಕ್ಕಷ್ಟೇ!

ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿಯ ವಿಜಯೇಂದ್ರ, ಸಾಗರ ಹಾಗೂ ಸೊರಬದಲ್ಲಿ ಕಾಂಗ್ರೆಸ್‌ನ ಗೋಪಾಲಕೃಷ್ಣ ಬೇಳೂರು ಹಾಗೂ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮೀಣದಲ್ಲಿ ಶಾರದಾ ಪೂರ್ಯಾ ನಾಯ್ಕ್, ಶಿವಮೊಗ್ಗ ನಗರದಲ್ಲಿ ಚನ್ನಬಸಪ್ಪ ಗೆದ್ದಿದ್ದಾರೆ.

01:49 PM (IST) May 13

ಹೊಸಕೋಟೆ: ಎಂಟಿಬಿ ನಾಗರಾಜ್‌ಗೆ ಸೋಲು

ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು, ಮರು ಚುನಾವಣೆಯಲ್ಲಿಯೂ  ಸೋತರೂ, ಎಂಎಲ್‌ಸಿಯಾಗಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದ ಎಂಟಿಬಿ ನಾಗರಾಜ್‌ಗೂ ಮಂದಿ ಸೋಲಿನ ರುಚಿ ತೋರಿಸಿದ್ದಾರೆ. ರಾಜ್ಯದ ಪ್ರಮುಖ ಸಿರಿವಂತ ಅಭ್ಯರ್ಥಿಗಳಲ್ಲಿ ಒಬ್ಬರಾದ ನಾಜರಾಜ್ ಅವರನ್ನು ಬಿಜೆಪಿಯ ಚಿಕ್ಕಬಳ್ಳಾಪುರ ಸಂಸದ ಬಚ್ಚೇಗೌಡ ಮಗ ಶರತ್ ಬಚ್ಚೆಗೌಡ (ಕಾಂಗ್ರೆಸ್) ಸುಮಾರು 5 ಸಾವಿರ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

01:44 PM (IST) May 13

ಹಾಸನ: 4 ಕ್ಷೇತ್ರಗಳಲ್ಲಿ ಗೆದ್ದ ಜೆಡಿಎಸ್, ಇನ್ನರೆಡರಲ್ಲಿ ಬಿಜೆಪಿ, ಅರಸೀಕರೆಯಲ್ಲಿ ಕಾಂಗ್ರೆಸ್ ಗೆಲವು

ಹಾಸನ: ಹೊಳೆನರಸೀಪುರ, ಹಾಸನ, ಅರಕಲಗೂಡು, ಶ್ರವಣಬೆಳಗೊಳದಲ್ಲಿ ಜೆಡಿಎಸ್ ಗೆಲುವು. ಬೇಲೂರು, ಸಕಲೇಶಪುರದಲ್ಲಿ ಬಿಜೆಪಿ ಗೆಲುವು. ಅರಸೀಕೆರೆಯಲ್ಲಿ ಕಾಂಗ್ರೆಸ್ ಗೆಲುವು. 
 

ಬೆಳಗಾವಿ: ಶಶಿಕಲಾ ಜೋಲ್ಲೆ ಹ್ಯಾಟ್ರಿಕ್ ಗೆಲುವು, ನಿಪ್ಪಾಣಿ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೋಲ್ಲೆ ಗೆಲುವು, ಬಿಜೆಪಿ ಅಭ್ಯರ್ಥಿ 71684, ಎನ್‌ಸಿಪಿ 64690, 22ನೇ ಸುತ್ತಿನಲ್ಲಿ 6994 ಮತಗಳ ಮುನ್ನಡೆ.

 

01:37 PM (IST) May 13

ಯಾದಗಿರಿಯೆ ಮೂರು ಕಡೆ ಕಾಂಗ್ರೆಸ್, ಒಂದೆಡೆ ಜೆಡಿಎಸ್ ಮುನ್ನಡೆ

ಯಾದಗಿರಿ ಜಿಲ್ಲೆಯ 4 ಮತಕ್ಷೇತ್ರಗಳ ಪೈಕಿ 3 ಮತಕ್ಷೇತ್ರಗಳಲ್ಲಿ (ಯಾದಗಿರಿ, ಶಹಾಪುರ ಹಾಗೂ ಸುರಪುರ)  ಕಾಂಗ್ರೆಸ್ ಮುನ್ನೆಡೆ. ಒಂದು ಕಡೆ (ಗುರುಮಠಕಲ್) ಜೆಡಿಎಸ್ ಮುನ್ನಡೆ. 
ಮಾಜಿ ಸಚಿವರುಗಳಾದ ಬಾಬುರಾವ್ ಚಿಂಚನಸೂರ, ರಾಜುಗೌಡ, ಡಾ. ಮಾಲಕರೆಡ್ಡಿ ಹಿನ್ನೆಡೆ.  ಯಾದಗಿರಿ ಹಾಲಿ ಶಾಸಕ, ಬಿಜೆಪಿಯ ವೆಂಕಟರೆಡ್ಡಿ ಮುದ್ನಾಳ, ಸುರಪುರದ ಹಾಲಿ ಶಾಸಕ ಬಿಜೆಪಿಯ ರಾಜುಗೌಡ, ಶಹಾಪುರದ ಮಾಜಿ ಶಾಸಕ ಗುರು ಪಾಟೀಲ್ ಗೆ ಹಿನ್ನೆಡೆ. 

01:27 PM (IST) May 13

ಶೆಟ್ಟರ್ ಸೋತಿದ್ದಕ್ಕೆ ಆಶ್ಚರ್ಯವಾಗಿದೆ: ಸಂತೋಷ್ ಲಾಡ್

ಧಾರವಾಡ : ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿಸಿ ಮತದಾರರು  ತಮ್ಮನ್ನು ಬೆಂಬಲಿಸಿದ್ದಾರೆ ಎಂದು  ಕಲಘಟಗಿ ಕ್ಷೇತ್ರದಿಂದ ಆಯ್ಕೆಯಾದ ಸಂತೋಷ‌ ಲಾಡ್ ಪ್ರತಿಕ್ರಿಯಿಸಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತದ ಅಭಿವೃದ್ಧಿ ಕುಂಠಿತಗೊಂಡಿತ್ತು. ಬಿಜೆಪಿಯ ಆಡಳಿತದಿಂದ‌ ಬೇಸತ್ತು ಜನ ತಮಗೆ ಬೆಂಬಲ ನೀಡಿದ್ದಾರೆ.

ಹೀಗಾಗಿ ತಮಗೆ ಅಶೀರ್ವಾದಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಪಕ್ಕದ‌ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರು‌ ಗೆಲುವು ಸಾಧಿಸಿದ್ದು‌ ಸಂತಸ ತಂದಿದೆ. ಅವರು ಕ್ಷೇತ್ರದಲ್ಲಿ ಇರದಿದ್ದರೂ ಜನರು ಅವರನ್ನು ಗೆಲ್ಲಿಸಿದ್ದು ಅವರ ಮೇಲೆ‌ ಜನರು ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಿದ ಆ ಕ್ಷೇತ್ರದ ಜನರಿಗೂ‌ ಕೃತಜ್ಞತೆ ಸಲ್ಲಿಸುತ್ತೆನೆ‌ ಎಂದರು.

ಮಾಜಿ ಮುಖ್ಯಮಂತ್ರಿ ‌ಜಗದೀಶ ಶೆಟ್ಟರ್ ಅವರ ಸೋಲು ಆಶ್ಚರ್ಯ ತರಿಸಿದೆ ಎಂದರು. ಶಾಸಕಾಂಗ ಪಕ್ಷದ‌ ಸಭೆಗೆ ಬರುವಂತೆ ಈಗಾಗಲೇ ತಮಗೆ ಸೂಚನೆ ಬಂದಿದೆ. ಹೀಗಾಗಿ ಇಂದು ರಾತ್ರಿ ‌ಬೆಂಗಳೂರಗೆ ತೆರಳುತ್ತಿದ್ದೆನೆ. ತಮಗೆ ಸಚಿವ ಸ್ಥಾನ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಪ್ರಶ್ನೆಯೊಂಧಕ್ಕೆ ಉತ್ತರಿಸಿದರು. ಚುನಾವಣೆ ಸಂದರ್ಭದಲ್ಲಿ ತಮ್ಮ ಮಾತಿನಿಂದ ಯಾರದಾದರು‌ ಮನಸ್ಸಿಗೆ ನೋವಾಗಿದ್ದರೆ ಅವರಲ್ಲಿ‌ ಕ್ಷಮೆ ಕೇಳುವುದಾಗಿ ಹೇಳಿದರು.

01:19 PM (IST) May 13

ಗಂಗಾವತಿಯಲ್ಲಿ ಗೆದ್ದ ಜನಾರ್ದನ ರೆಡ್ಡಿ

ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸ್ಥಾಪಿಸಿದ ಜನಾದ್ರನ ರೆಡ್ಡಿ ಗಂಗಾವತಿಯಲ್ಲಿ ಗೆಲವು ಸಾಧಿಸಿದ್ದು, ಬಳ್ಳಾರಿಯಲ್ಲಿ ಪತ್ನಿ ಅರುಣಾ ಲಕ್ಷ್ಮಿ ಹಿನ್ನಡೆ ಸಾಧಿಸಿದ್ದಾರೆ. 
ಬಬಲೇಶ್ವರದಲ್ಲಿ ಗೆಲುವಿನತ್ತ ಎಂ ಬಿ ಪಾಟೀಲ್. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್. 18 ರೌಂಡ್‌ಗಳಲ್ಲಿ 15 ರೌಂಡ್ ಮುಕ್ತಾಯವಾಗಿದೆ. 13,899 ಮತಗಳ ಮುನ್ನಡೆ ಸಾಧಿಸಿದ್ದಾರೆ.ಇನ್ನು ಮೂರು ರೌಂಡ್ ಮಾತ್ರ ಭಾಕಿ. ಎಂ ಬಿ ಪಾಟೀಲ ನಿವಾಸದಲ್ಲಿ ಅಭಿಮಾನಿಗಳ ಸಂಭ್ರಮ.

ಬಾಗಲಕೋಟೆಯ ಬೀಳಗಿಯಲ್ಲಿ ಮುರುಗೇಶ್ ನಿರಾಣಿ ಸೋತಿದ್ದು, ಮೇಲುಕೋಟೆಯಲ್ಲಿ ಕಾಂಗ್ರೆಸ್ ಬೆಂಬಲಿತ ರೈತ ಸಂಘ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಗೆದ್ದಿದ್ದಾರೆ. 

01:14 PM (IST) May 13

ಮಹದೇವ ಸ್ವಾಮಿಗೂ ಸೋಲು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಮಂತ್ರಿ ಆರಗ ಜ್ಞಾನೇಂದ್ರ, ಇಂಧನ ಸಚಿವ ಸುನೀಲ್ ಕುಮಾರ್ ಹೊರತು ಪಡಿಸಿ ಬಹುತೇಕ ಎಲ್ಲ ಸಚಿವರಿಗೆ ಜನರು ಪಾಠ ಕಲಿಸಿದ್ದಾರೆ. ಅಭಿವೃದ್ಧಿಗೆ ಮಾತ್ರ ತಮ್ಮ ಮತ, ಕೆಲಸ ಮಾಡಿದರೆ ಗೆಲ್ಲಿಸುತ್ತೇವೆ, ಸೋಲಿಸಿದರೆ ಮನೆಗೆ ಕಳುಹಿಸುತ್ತೇವೆ ಎಂಬ ಸ್ಪಷ್ಟ ಸಂದೇಶವನ್ನು ಕರ್ನಾಟಕದ ಜನತೆ ನೀಡಿದಂತೆ ತೋರುತ್ತಿದೆ. ನಂದಿನಿ ವಿವಾದ, 40 ಪರ್ಸೆಂಟ್ ಸರಕಾರ ಸೇರಿ ಕಾಂಗ್ರೆಸ್‌ನ ಬಹುತೇಕ ತಂತ್ರಗಾರಿಕೆ ಫಲಿಸಿದ್ದು, ಸ್ಪಷ್ಟ ಬಹುಮತದ ಸರಕಾರವನ್ನು ಕನ್ನಡಿಗರು ನೀಡಿದ್ದಾರೆ. 

01:11 PM (IST) May 13

ಕ್ಷೇತ್ರದ ಜನರ ಪ್ರೀತಿ-ವಿಶ್ವಾಸವೇ ನನ್ನ ಗೆಲುವಿಗೆ ಕಾರಣ: ವಿನಯ್ ಕುಲಕರ್ಣಿ

ಕ್ಷೇತ್ರದ ಜನರ ಪ್ರೀತಿ-ವಿಶ್ವಾಸವೇ ನನ್ನ ಗೆಲುವಿಗೆ ಕಾರಣ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ವಿನಯ ಕುಲಕರ್ಣಿ ಅಭಿಪ್ರಾಯ ಪಟ್ಟಿದ್ದಾರೆ. ಚುನಾವಣಾ ಫಲಿತಾಂಶ ಮಾತನಾಡಿದ ಅವರು, ಕ್ಷೇತ್ರದ ಮತರಾರರು ನೀಡಿದ ಬೆಂಬಲ ಅಭೂತಪೂರ್ವ. ನಾನು ಕ್ಷೇತ್ರದಲ್ಲಿ ಇರದಿದ್ದರೂ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳ ಪರಿಶ್ರಮದಿಂದ ಗೆಲುವು ಸಿಕ್ಕಿದೆ. ಜೊತೆಗೆ‌ ನನ್ನ ಪತ್ನಿ, ಮಕ್ಕಳು ನಿರಂತರ ಶ್ರಮಿಸಿದ ಪರಿಣಾಮ ‌ಜನರ ಆಶೀರ್ವಾದ ಲಭಿಸಿದೆ. ತಮ್ಮ ಅನುಪಸ್ಥಿತಿಯಲ್ಲಿ ಲಭಿಸಿರುವ ಈ ಜಯ ಕ್ಷೇತ್ರದ ಜನರ ಜಯ ಎಂದು ಬಣ್ಣಿಸಿದರು.

01:09 PM (IST) May 13

ಗೆದ್ದ ಎಲ್ಲಾ ಶಾಸಕರನ್ನು ಬೆಂಗಳೂರಿಗೆ ಕರೆತರಲು ಕಾಂಗ್ರೆಸ್ ಸೂಚನೆ

ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನ ಎಣಿಕೆ ನಡೆಯುತ್ತಿದ್ದಂತೆಯೇ ಕಾಂಗ್ರೆಸ್ ನ ಗೆದ್ದ ಎಲ್ಲಾ ಶಾಸಕರನ್ನು ಇಂದು ರಾತ್ರಿಯೊಳಗೆ ಬೆಂಗಳೂರಿಗೆ ಕರೆತರಲು ಸೂಚನೆ ನೀಡಲಾಗಿದೆ. ನಾಳೆ  ಕಾಂಗ್ರೆಸ್ ಶಾಸಕಾಂಗದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಅಗತ್ಯವಾದರೆ ಮಾತ್ರ ರೇಸಾರ್ಟ್ ಗೆ ತೆರಳಲು ಚಿಂತನೆ ನಡೆಸಲಾಗಿದ್ದು, ರಾಜಸ್ತಾನ,  ಛತ್ತೀಸ್ ಘಡ , ಹೈದರಾಬಾದ್ ಗೆ ಕರೆದು ಕೊಂಡು ಹೋಗಲು ಯೋಜನೆ ಹಾಕಲಾಗಿದೆ. ಉದಯ್ ಪುರದ ತಾಜ್ ಲೇಕ್ ಪ್ಯಾಲೇಸ್ ಬುಕ್ ಮಾಡಲು ಚಿಂತಿಸಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

01:09 PM (IST) May 13

ಧಾರವಾಡ ಪಶ್ಚಿಮದಲ್ಲಿ ಬೆಲ್ಲದ್‌ಗೆ ಬೆಲ್ಲ

ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಜಗದೀಶ್ ಶೆಟ್ಟರ್‌ಗೆ ಸೋಲುಣಿಸಿದ ಮತದಾರರು, ಪಶ್ಚಿಮದ್ಲಲಿ ಬಿಜೆಪಿಯ ಅರವಿಂದ್ ಬೆಲ್ಲದ್ ಅವರನ್ನು ಗೆಲ್ಲಿಸಿದ್ದಾರೆ. ಹಿರಿಯೂರಿನಲ್ಲಿ ಪೂರ್ಣಿಮಾ ಶ್ರೀನಿವಾಸ್ ಸೋತರೆ, ದಾವಣಗೆರೆಯ ಅಪ್ಪ-ಮಗನ ಸ್ಪರ್ಧೆಯಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಮಗ ಮಲ್ಲಿಕಾರ್ಜುನ ಶಿವಶಂಕರಪ್ಪ ಅವರಿಗೆ ವಿಜಯದ ಮಾಲೆ ಸಿಕ್ಕಿದೆ. 

01:01 PM (IST) May 13

ಶ್ರೀನಿವಾಸಪುರದಲ್ಲಿ ರಮೇಶ್‌ಗೆ ಸೋಲು, ಕಾರವಾರದಲ್ಲಿ ರೂಪಾಲಿ ನಾಯ್ಕ್‌ಗೆ ಸೋಲು

ಉತ್ತರ ಕನ್ನಡದ ಕಾರವಾರದ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ್‌ಗೆ ಸೋಲಿನ ರುಚಿ ತೋರಿಸಿದ ಮತದಾರರು, ಸತೀಶ್ ಸೈಲ್‌ಗೆ ವಿಜಯದ ಮಾಲೆ ಹಾಕಿದ್ದಾರೆ. ಕೋಲಾರದ ಶ್ರೀನಿವಾಸಪುರದ ರಮೇಶ್ ಕುಮಾರ್‌ ಅವರೂ ಸೋತಿದ್ದಾರೆ. 

12:45 PM (IST) May 13

ಆರಗ ಜ್ಞಾನೇಂದ್ರಂಗೆ ಗೆಲವು

ತೀರ್ಥಹಳ್ಳಿಯಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಯಾರು ಸಚಿವರಾಗಿ ಕೆಲಸ ಮಾಡುತ್ತಾರೋ ಅವರು ಅಲ್ಲಿ ಸೋಲುವುದು ಖಚಿತ. ಗೃಹ ಮಂತ್ರಿಯಾಗ ಕಾರ್ಯ ನಿರ್ವಹಿಸಿದ ಆರದಗ ಜ್ಞಾನೇಂದ್ರ ಅವರಿಗೆ ಆ ಸಾರಿ ಸೋಲಿನ ಭೀತಿ ಕಾಣಿಸಿತ್ತು. ಆದರೆ, ಕಿಮ್ಮನೆ ರತ್ನಾಕರ್ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಕಾರ್ಕಳದಲ್ಲಿ ಸುನೀಲ್ ಕುಮಾರ್ ಕೇವಲ 3 ಸಾವಿರ ಮತಗಳ ಅಂತರದಿಂದ ಪ್ರಯಾಸದ ಗೆಲವು ಸಾಧಿಸಿದ್ದಾರೆ. ಇದುವರೆಗಿನ ಮಾಹಿತಿಯಂತೆ ಕಾಂಗ್ರೆಸ್ 130 ಸ್ಥಾನಗಳ ಗಡಿ ದಾಟುವುದು ಬಹುತೇಕ ಖಚಿತವಾಗಿದೆ. 

12:42 PM (IST) May 13

ಶಿರಸಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸೋಲು, ರಾಜಾಜಿನಗರದಲ್ಲಿ ಸುರೇಶ್‌ಕುಮಾರ್‌ಗೆ ಗೆಲವು

ಶಿರಸಿ ಮತದಾರರು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸೋಲಿನ ಉಣಿಸಿದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಸುರೇಶ್ ಕುಮಾರ್ ಗೆಲವು ಸಾಧಿಸಿದ್ದಾರೆ. ಮಡಿಕೇರಿಯಲ್ಲಿ ಮಂಥರ್ ಗೌಡ ಗೆದ್ದರೆ, ಕೊಡಗಿನಲ್ಲಿ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಸೋತಿದ್ದಾರೆ. 

12:33 PM (IST) May 13

ಹಳೆ ಮೈಸೂರಿನಲ್ಲಿ ಅರಳಲೇ ಇಲ್ಲ ಕಮಲ, ಕೈನದ್ದೇ ಕಮಾಲ್

ಮೈಸೂರಿನಲ್ಲಿ ಗೆಲುವಿನತ್ತ ಸಾಗಿರುವ ಅಭ್ಯರ್ಥಿಗಳು.

ನರಸಿಂಹರಾಜ - ತನ್ವೀರ್ ಸೇಠ್, ಕಾಂಗ್ರೆಸ್

ಚಾಮುಂಡೇಶ್ವರಿ - ಜಿ ಟಿ ದೇವೇಗೌಡ, ಜೆಡಿಎಸ್‌

ಟಿ ನರಸೀಪುರ - ಡಾ ಹೆಚ್‌ ಸಿ ಮಹದೇವಪ್ಪ, ಕಾಂಗ್ರೆಸ್.

ಹೆಚ್ ಡಿ ಕೋಟೆ ಅನಿಲ್ ಚಿಕ್ಕಮಾದು, ಕಾಂಗ್ರೆಸ್

ಪಿರಿಯಾಪಟ್ಟಣ - ವೆಂಕಟೇಶ್, ಕಾಂಗ್ರೆಸ್

ನಂಜನಗೂಡು- ದರ್ಶನ್ ಧ್ರುವನಾರಾಯಣ್, ಕಾಂಗ್ರೆಸ್.

ವರುಣ - ಸಿದ್ದರಾಮಯ್ಯ, ಕಾಂಗ್ರೆಸ್.


ಟೈಪ್ ಫೈಟ್ ನಡೆಯುತ್ತಿರುವ ಕ್ಷೇತ್ರಗಳು

ಕೆ ಆರ್ ಕ್ಷೇತ್ರ - ಬಿಜೆಪಿ ವರ್ಸಸ್ ಕಾಂಗ್ರೆಸ್.

ಚಾಮರಾಜ ‌- ಬಿಜೆಪಿ ವರ್ಸಸ್ ಕಾಂಗ್ರೆಸ್

ಕೃಷ್ಣರಾಜನಗರ - ಜೆಡಿಎಸ್ ವರ್ಸಸ್ ಕಾಂಗ್ರೆಸ್

ಹುಣಸೂರು - ಜೆಡಿಎಸ್ ವರ್ಸಸ್ ಕಾಂಗ್ರೆಸ್

12:32 PM (IST) May 13

ಅಮೆರಿಕ ಉದ್ಯೋಗ ಬಿಟ್ಟು ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಎಂಎಸ್‌ ಪದವೀಧರನಿಗೆ ಗೆಲವು

ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆ ಅಖಾಡದಲ್ಲಿ ಸಾಕಷ್ಟುಹೊಸ ಮುಖಗಳು ಗಮನ ಸೆಳೆದಿದ್ದವು. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ 6 ದಶಕಗಳ ಇತಿಹಾಸದಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿಯೊಬ್ಬರು ರಾಷ್ಟ್ರೀಯ ಪಕ್ಷವೊಂದರಿಂದ ಚುನಾವಣಾ ಕಣಕ್ಕಿಳಿದಿರುವುದು ವಿಶೇಷವಾಗಿತ್ತು. ಸಾಕಷ್ಟು ಪೈಪೋಟಿಯ ನಡುವೆಯೂ ಬಿಜೆಪಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ 31 ವರ್ಷ ವಯಸ್ಸಿನ ತರುಣ, ಅಮೆರಿಕಾದ ಟೆಕ್ಸಾಸ್‌ ವಿಶ್ವವಿದ್ಯಾಲಯದಲ್ಲಿ ಎಂ.ಎಸ್‌ ಸ್ನಾತಕೋತ್ತರ ಪದವಿ ಪಡೆದಿರುವ ಧೀರಜ್‌ ಮುನಿರಾಜ್‌ ಅವರಿಗೆ ಸ್ಪರ್ಧೆಯ ಅವಕಾಶ ನೀಡಿತ್ತು. ಮತದಾರರು ಯುವ ಸ್ಪರ್ಧಿಯನ್ನು ಜಯಿಸಿದ್ದಾರೆ. 

ಯಾರೀ ಧೀರಜ್‌ ಮುನಿರಾಜು

12:29 PM (IST) May 13

ಸೊರಬ: ಅಣ್ಣ-ತಮ್ಮಂದಿರ ಜಗಳದಲ್ಲಿ ಮಧುಗೆ ಗೆಲವು

ಶಿವಮೊಗ್ಗದ ಸೊರಬದಲ್ಲಿ ಕಾಂಗ್ರೆಸ್‌ನ ಮಧು ಬಂಗಾರಪ್ಪು 37 ಸಾವಿರ ಮತಗಳಿಂದ ಗೆದ್ದಿದ್ದು, ಬಿಜೆಪಿಯ ಕುಮಾರ್ ಬಂಗಾರಪ್ಪಗೆ ಮತದಾರರು ಸೋಲಿನ ರುಚಿ ತೋರಿಸಿದ್ದಾರೆ. ಒಟ್ಟಿನಲ್ಲಿ ಈ ಕ್ಷೇತ್ರ ಬಂಗಾರಪ್ಪ ಅವರ ಕುಟುಂಬದಲ್ಲಿಯೆ ಇರಲಿದೆ. 

12:25 PM (IST) May 13

ಪದ್ಮನಾಭನಗರದಲ್ಲಿ ಅಶೋಕ್‌ಗೆ ಗೆಲವು, ಕನಕಪುರದಲ್ಲಿ 3ನೇ ಸ್ಥಾನ

ಬಿಜೆಪಿಯ ಆರ್.ಅಶೋಕ್ ಅವರು ಕನಕಪುರ ಹಾಗೂ ಬೆಂಗಳೂರಿನ ಪದ್ಮನಾಭನಗರದಲ್ಲಿ ಸ್ಪರ್ಧಿಸಿದ್ದು, ಕನಕಪುರದಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ. ಪದ್ಮನಾಭನಗರದಲ್ಲಿ ಸತತ 7ನೇ ಬಾರಿ ಗೆದ್ದಿದ್ದು, ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್ ಸೋತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪ್ರದೀಪ್ ಈಶ್ವರ್ ಗೆಲವು ಸಾಧಿಸಿದ್ದಾರೆ. ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ. 

12:15 PM (IST) May 13

ಚಾಮುಂಡೇಶ್ವರಿ‌ಯಲ್ಲಿ ಜಿಟಿ ದೇವೇಗೌಡ ಗೆಲವು

ಮೈಸೂರಿನಲ್ಲಿ ಗೆಲುವಿನತ್ತ ಇರೋ ಅಭ್ಯರ್ಥಿಗಳು.

ನರಸಿಂಹರಾಜ -  ತನ್ವೀರ್ ಸೇಠ್

ಚಾಮುಂಡೇಶ್ವರಿ - ಜಿ.ಟಿ ದೇವೇಗೌಡ, ಜೆಡಿಎಸ್‌ (ಗೆಲುವು)

ಟಿ.ನರಸೀಪುರ - ಡಾ.ಎಚ್‌ಸಿ ಮಹದೇವಪ್ಪ, ಕಾಂಗ್ರೆಸ್.(ಗೆಲುವು)

ಎಚ್.ಡಿ ಕೋಟೆ ಅನಿಲ್ ಚಿಕ್ಕಮಾದು, ಕಾಂಗ್ರೆಸ್ (ಗೆಲುವು)

ಪಿರಿಯಾಪಟ್ಟಣ- ವೆಂಕಟೇಶ್, ಕಾಂಗ್ರೆಸ್ (ಗೆಲುವು)

ನಂಜನಗೂಡು- ದರ್ಶನ ಧ್ರುವನಾರಾಯಣ, ಕಾಂಗ್ರೆಸ್. (ಗೆಲುವು)

ವರುಣ - ಸಿದ್ದರಾಮಯ್ಯ, ಕಾಂಗ್ರೆಸ್.


ಟೈಪ್ ಫೈಟ್ ನಡೆಯುತ್ತಿರುವ ಕ್ಷೇತ್ರಗಳು

ಕೆ.ಆರ್ ಕ್ಷೇತ್ರ - ಬಿಜೆಪಿ ವರ್ಸಸ್ ಕಾಂಗ್ರೆಸ್.

ಚಾಮರಾಜ ‌- ಬಿಜೆಪಿ ವರ್ಸಸ್ ಕಾಂಗ್ರೆಸ್

ಕೃಷ್ಣರಾಜನಗರ - ಜೆಡಿಎಸ್ ವರ್ಸಸ್ ಕಾಂಗ್ರೆಸ್

ಹುಣಸೂರು - ಜೆಡಿಎಸ್ ವರ್ಸಸ್  ಕಾಂಗ್ರೆಸ್

12:10 PM (IST) May 13

ಖರ್ಗೆಗೆ ವಿವಾಹ ವಾರ್ಷಿಕೋತ್ಸವದ ಗಿಫ್ಟ್

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ವಿವಾಹ ವಾರ್ಷಿಕೋತ್ಸವದ ಗಿಫ್ಟ್ ಕೊಟ್ಟ ರಾಜ್ಯ ಕಾಂಗ್ರೆಸ್. 58ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಮಲ್ಲಿಕಾರ್ಜುನ ಖರ್ಗೆ. ರಾಜ್ಯ ನಾಯಕರ ಭಿನ್ನಮತ ಬೇಡ,  ರಾಜ್ಯ ಗೆಲ್ಲಬೇಕು ಅಷ್ಟೇ. ರಾಜ್ಯ ಗೆದ್ದರೆ ಅದೇ ನೀವು ನನಗೆ ಕೊಡುವ ಗೌರವ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ. ರಾಜ್ಯ ಗೆದ್ದು ದೇಶಕ್ಕೆ ಸಂದೇಶ ಕೊಡುವ ಖರ್ಗೆ  ಲೆಕ್ಕಾಚಾರ ಸಕ್ಸಸ್

 

 

12:08 PM (IST) May 13

ಎಲ್ಲೆಲ್ಲಿ ಯಾವ ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆ?

ಮಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಗೆಲುವು, ಕಾಂಗ್ರೆಸ್ ಅಭ್ಯರ್ಥಿ ಜೆಆರ್ ಲೋಬೋ ವಿರುದ್ದ ಗೆಲುವು
ಚಾಮರಾಜ 13ನೇ ಸುತ್ತು, ಬಿಜೆಪಿ ಎಲ್.ನಾಗೇಂದ್ರ 52683, ಕಾಂಗ್ರೆಸ್ ಹರೀಶ್ ಗೌಡ 53031, ಕಾಂಗ್ರೆಸ್ 348 ಮತಗಳ ಮುನ್ನಡೆ
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 12ನೇ ಸುತ್ತು ಮುಗಿದಿದ್ದು, ಕಾಂಗ್ರೆಸ್ (ರಮೇಶ್ ಬಂಡಿಸಿದ್ದೇಗೌಡ) - 48118, ಜೆಡಿಎಸ್‌ (ರವೀಂದ್ರ ಶ್ರೀಕಂಠಯ್ಯ) - 42159, ಬಿಜೆಪಿ (ಸಚ್ಚಿದಾನಂದ) - 26743, ಮುನ್ನಡೆ ಕಾಂಗ್ರೆಸ್ 5959
ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಮುನಿರತ್ನ ಅವರಿಗೆ ನೇರಾ ಹಣಾ ಹಣಿಯಿದೆ. ಹೊನ್ನಾಳಿಯಲ್ಲಿ ಬಿಜೆಪಿಯ ರೇಣುಕಾಚಾರ್ಯಗೆ ಸೋಲಿನ ರುಚಿ ಕಾಣಿಸಿದೆ. ಹುಮ್ನಾಬಾದ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. 

12:05 PM (IST) May 13

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ ಮಷೀನ್‌ನಲ್ಲಿ ತಾಂತ್ರಿಕ ದೋಷ.

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ ಮಷೀನ್‌ನಲ್ಲಿ ತಾಂತ್ರಿಕ ದೋಷ. 18 ಸುತ್ತಿನ ಮತ ಎಣಿಕೆಯಲ್ಲಿ ಒಂದು ಇವಿಎಂನಲ್ಲಿ ದೋಷ. ಒಟ್ಟು ಮತಗಳನ್ನ ತೋರಿಸದ ಹಿನ್ನೆಲೆ ಒಂದು ಟೇಬಲ್ ನಲ್ಲಿ ಮತ ಎಣಿಕೆ ಸ್ಥಗಿತ. ವಿವಿ ಪ್ಯಾಟ್ ನಲ್ಲಿನ ಸ್ಲೀಪ್ ಗಳನ್ನ ಎಣಿಕೆ ಮಾಡಿ‌ ಕೊನೆಯಲ್ಲಿ ಒಂದು ಟೇಬಲ್ ಮತಗಳನ್ನ ಹೇಳುವುದಾಗಿ ಚುನಾವಣಾ ಅಧಿಕಾರಿ ಮಾಹಿತಿ‌

11:54 AM (IST) May 13

ಪುತ್ತೂರಿನಲ್ಲಿ ಪುತ್ತಿಲಗೆ ಮುನ್ನಡೆ

ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಸ್ಪರ್ಧಿಸಿದ್ದು, ನಿರೀಕ್ಷೆಯಂತೆ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅರುಣ್ ಅವರಿಗೆ 39969 ಹಾಗೂ ಸಮೀಪದ ಪ್ರತಿಸ್ಫರ್ಧಿ ಅಶೋಕ್‌ಗೆ 38844 ಮತಗಳನ್ನು ಪಡೆದಿದ್ದಾರೆ. 

ಮೊದಲ ಮಹಿಳಾ  ಕಾಂಗ್ರೆಸ್ ಅಭ್ಯರ್ಥಿ ರೂಪಶಶಿಧರ್ 51.000 ಸಾವಿರ ಮತಗಳಿಂದ ಭರ್ಜರಿ ಗೆಲವು. ಮಂಗಳೂರಿನಲ್ಲಿ ಯು.ಟಿ.ಖಾದರ್ ಗೆಲವು ಸಾಧಿಸಿದ್ದಾರೆ. 

11:45 AM (IST) May 13

'ಸರಕಾರಿ ವಿರೋಧಿ ಅಲೆ ವರ್ಕ್‌ಔಟ್ ಆಗಿದೆ'

ಜನರು ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಲು ಬಯಸಿದ್ದರು. ಫಲಿತಾಂಶ ನೋಡಿ ಯಡಿಯೂರಪ್ಪ ಅಘಾತಕ್ಕೆ ಒಳಗಾಗಿದ್ದಾರೆ. ಸರ್ಕಾರದ ವಿರೋಧಿ ಅಲೆ ಕಾಂಗ್ರೆಸ್ ಗೆ ವರವಾಗಿದೆ
ಯಡಿಯೂರಪ್ಪ ನಿವಾಸದ ಬಳಿ ಲೇಹರ್ ಸಿಂಗ್ ಹೇಳಿಕೆ. 

11:42 AM (IST) May 13

ಹಾವೇರಿಯ ಶಿಗ್ಗಾವಿಯಲ್ಲಿ ಸಿಎಂ ಬಿಟ್ಟು ಕೈ ಅಭ್ಯರ್ಥಿಗಳ ಗೆಲವು

ಹಾವೇರಿಯ ಶಿಗ್ಗಾವಿಯಲ್ಲಿ ಬಿಟ್ಟು, ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿದ್ದು, ಸಿಟಿ ರವಿಯೂ ಸಹ ಸೋಲುವತ್ತ ಹೆಜ್ಜೆಹಾಕುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಎಲ್ಲರ ಚಿತ್ತ ಯಾರು ಆಗುತ್ತಾರೆ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಕಡೆ ಹೋಗಿದೆ. 

11:42 AM (IST) May 13

ಹಾವೇರಿಯ ಶಿಗ್ಗಾವಿಯಲ್ಲಿ ಸಿಎಂ ಬಿಟ್ಟು ಕೈ ಅಭ್ಯರ್ಥಿಗಳ ಗೆಲವು

ಹಾವೇರಿಯ ಶಿಗ್ಗಾವಿಯಲ್ಲಿ ಬಿಟ್ಟು, ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿದ್ದು, ಸಿಟಿ ರವಿಯೂ ಸಹ ಸೋಲುವತ್ತ ಹೆಜ್ಜೆಹಾಕುತ್ತಿದ್ದಾರೆ. ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದ್ದು, ಎಲ್ಲರ ಚಿತ್ತ ಯಾರು ಆಗುತ್ತಾರೆ ಕಾಂಗ್ರೆಸ್ ಮುಖ್ಯಮಂತ್ರಿ ಎಂಬ ಕಡೆ ಹೋಗಿದೆ. 

11:36 AM (IST) May 13

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಖಚಿತ, ಎಲ್ಲೆಡೆ ಸಂಭ್ರಮಾಚರಣೆ

ಕಾಂಗ್ರೆಸ್ ಸ್ಪಷ್ಟ ಬಹುಮತದತ್ತ ಹೆಜ್ಜೆ ಹಾಕುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಾಯಕರು ಸಂಭಮಿಸಿದ್ದಾರೆ. ದಿಲ್ಲೀಲೂ ಸಂಭ್ರಮ ಜೋರಾಗಿದ್ದು, ಬಿಜೆಪಿಯ ಪ್ರಮುಖರೆಲ್ಲ ಸೋಲುವಂತೆ ಕಾಣಿಸುತ್ತಿದೆ. 

 

 


More Trending News