Karnataka Election 2023: ಬೆಂಗಳೂರಲ್ಲಿ ಈ ಬಾರಿಯೂ ನೀರಸ ಮತದಾನ

By Sathish Kumar KHFirst Published May 10, 2023, 9:20 PM IST
Highlights

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಮತದಾನ‌ ಮುಕ್ತಾಯವಾಗಿದ್ದು, ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ ಶೇಕಾಡವಾರು 54.53 ಮತದಾನ ನಡೆದಿದೆ.

ಬೆಂಗಳೂರು (ಮೇ 10): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಜೆ 6 ಗಂಟೆ ವೇಳೆಗೆ ಮತದಾನ‌ ಮುಕ್ತಾಯವಾಗಿದ್ದು, ಒಟ್ಟು 28 ವಿಧಾನಸಭಾ ಕ್ಷೇತ್ರಗಳಲ್ಲಿ  ಶೇಕಾಡವಾರು 54.53 ಮತದಾನ ನಡೆದಿದೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದ ಚುನಾವಣಾ ಪ್ರಮಾಣವನ್ನು ಕೂಡ ಗಳಿಸಲು ಸಾಧ್ಯವಾಗಿಲ್ಲ.

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ಅಧಿಕಾರ ನಡೆಸುವ ಶಕ್ತಿ ಕೇಂದ್ರವಾಗಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರಮಾಣದ ಮತದಾನ ನಡೆಯುತ್ತಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಮತದಾರರು ಮಾತ್ರ ಮತಗಟ್ಟೆಗೆ ಬಂದು ಮತಹಾಕುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕಳೆದ ಬಾರಿಯೂ ಕೂಡ ಶೇ.55 ಮತದಾನ ಮಾತ್ರ ನಡೆದಿತ್ತು. ಬೆಂಗಳೂರಿನ 28 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಸೆಂಟ್ರಲ್ ಶೇಕಡಾ 55.63% ಮತದಾನವಾಗಿದೆ. ಬೆಂಗಳೂರು ಉತ್ತರ ಶೇಕಡಾ 53.03%, ಬೆಂಗಳೂರು ದಕ್ಷಿಣ ಶೇಕಡಾ 52.28% ಹಾಗೂ ಬೆಂಗಳೂರು ನಗರ ಭಾಗದಲ್ಲಿ ಶೇ.57.17% ಮತದಾನವಾಗಿದೆ. 

Karnataka Elections 2023 LIVE: ಎಕ್ಸಿಟ್ ಪೋಲ್‌ನಲ್ಲಿ ಸಿಕ್ತು ಅತಂತ್ರ ಸರ್ಕಾರದ ಸೂಚನೆ...

ರಾಜ್ಯ ರಾಜಧಾನಿ ವ್ಯಾಪ್ತಿಯಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳು ಇದ್ದು, ಅದರಲ್ಲಿ ಮತದಾನ ಪ್ರಮಾಣದ ಶೇಕಡಾವಾರು ಕಡಿಮೆ ಆಗುತ್ತಿರುವುದು ಕಂಡುಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆ 2018ರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಶೇ.55 ಮತದಾನ ಆಗಿದ್ದರಿಂದ 2023ರ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವಂತೆ ಕೇಂದ್ರ ಚುನಾವಣಾ ಆಯೋಗದಿಂದ ಬೆಂಗಳೂರು ಚುನಾವಣಾ ಅಧಿಕಾರಿಗೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ ಆದರೂ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡಲು ಮಾತ್ರ ಸಾಧ್ಯವಾಗಿಲ್ಲ.

ಪ್ರವಾಸಿ ತಾಣಗಳು ಕೂಡ ಬಂದ್‌: ಇನ್ನು ಬೆಂಗಳೂರಿನ ನಾಗರಿಕರು ಒಂದು ದಿನ ರಜೆ ಸಿಕ್ಕರೂ ಹತ್ತಿರದ ಸ್ಥಳಗಳಿಗೆ ಪ್ರವಾಸ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಒಂದು ದಿನದ ಪ್ರವಾಸಕ್ಕೆ ಹೋಗುವ ಸ್ಥಳಗಳಾಗಿದ್ದ ಬೆಂಗಳೂರು ಹೊರ ವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಮೃಗಾಲಯ, ಚಿಕ್ಕಮಗಳೂರಿನ ನಂದಿ ಗಿರಿಧಾಮ ಸೇರಿ ಹಲವು ಪ್ರವಾಸಿ ತಾಣಗಳಿಗೆ ಮತದಾನ ದಿನದಂದು ಪ್ರವೇಶ ನಿಷೇಧಿಸಲಾಗಿತ್ತು. ಇನ್ನು ಬೆಂಗಳೂರಿನಲ್ಲಿ ಕೆಲಸ ಮಾಡುವ ಐಟಿ-ಬಿಟಿ ಉದ್ಯೋಗಿಗಳ ಪೈಕಿ ಶೇ.70ಕ್ಕೂ ಅಧಿಕ ಮತದಾನದಿಂದ ಮತದಾನದಿಂದ ದೂರ ಉಳಿದುಕೊಳ್ಳುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದಿಂದ ಜಾಗೃತಿ ಮೂಡಿಸಿದರೂ ಮತದಾನ ಪ್ರಮಾಣ ಹೆಚ್ಚಳ ಸಾಧ್ಯವಾಗಿಲ್ಲ. 

ವಿಧಾನಸಭಾ ಕ್ಷೇತ್ರವಾರು ಶೇಕಡಾ ಮತದಾನದ ವಿವರ ಇಲ್ಲಿದೆ..

  • ಬೆಂಗಳೂರು ಕೇಂದ್ರ - 55.63%
  • ಚಾಮರಾಜಪೇಟೆ - 54.14%
  • ಚಿಕ್ಕಪೇಟೆ - 57.74%
  • ಗಾಂಧಿನಗರ - 56.73%
  • ರಾಜಾಜೀನಗರ - 56.55%
  • ರಾಜರಾಜೇಶ್ವರಿ ನಗರ - 54.23%
  • ಶಾಂತಿ ನಗರ - 53.63%
  • ಶಿವಾಜಿನಗರ - 56.36%

ಬೆಂಗಳೂರು ಅರ್ಬನ್ ವಿಧಾನ ಸಭಾ ಕ್ಷೇತ್ರ - 57.17%
ಆನೇಕಲ್ - 61.97%
ಬೆಂಗಳೂರು ಸೌಥ್ - 53.08%
ಬ್ಯಾಟರಾಯನ ಪುರ - 56.94%
ದಾಸರಹಳ್ಳಿ - 49.47%
ಮಹಾದೇವ ಪುರ - 54.41%
ಯಲಹಂಕ - 60.59%
ಯಶವಂತ ಪುರ - 63.75%

Karnataka Election 2023: 'ಚಾಲೆಂಜ್ ಓಟ್' ಮಾಡಿದ 95ರ ವೃದ್ಧೆ!

  • ಬೆಂಗಳೂರು ಉತ್ತರ- 53.03%
  • ಸಿವಿ ರಾಮನ್‌ನಗರ - 46.96%
  • ಹೆಬ್ಬಾಳ - 55.04%
  • ಕೆಆರ್ ಪುರಂ - 52.14%
  • ಮಹಾಲಕ್ಷ್ಮಿ ಲೇಔಟ್ - 54.65%
  • ಮಲ್ಲೇಶ್ವರಂ - 55.03%
  • ಪುಲಕೇಶಿ ನಗರ್ - 53.96%
  • ಸರ್ವಜ್ಞ ನಗರ್ - 53.44%

ಬೆಂಗಳೂರು ದಕ್ಷಿಣ- 49.42%
ಬಿಟಿಎಮ್ ಲೇಔಟ್ - 48.22%
ಬಸವನಗುಡಿ- 54.78%
ಬೊಮ್ಮನಹಳ್ಳಿ - 47.35%
ಗೋವಿಂದ ರಾಜ್ ನಗರ-53.84%
ಜಯನಗರ - 55.79%
ಪದ್ಮನಾಭ ನಗರ- 57.22%
ವಿಜಯನಗರ - 48.72%

 

click me!