ಶನಿವಾರ ಮಡಿಕೇರಿಯಲ್ಲಿ ಅಮಿತ್ ಶಾ ಕಮಾಲ್, ಶಾಸಕರ ಪರ ರೋಡ್ ಶೋ

By Suvarna News  |  First Published Apr 28, 2023, 6:55 PM IST

ಬಿಜೆಪಿಯ ಇಬ್ಬರು ಶಾಸಕರ ಪರವಾಗಿ ಚುನಾವಣಾ ಚಾಣಕ್ಯ ಶನಿವಾರ ರೋಡ್ ಶೋ ನಡೆಸಲಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹೇಳಿದ್ದಾರೆ.


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನೆಟ್ ನ್ಯೂಸ್

ಕೊಡಗು (ಏ.28): ತಮ್ಮ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿಯ ಇಬ್ಬರು ಶಾಸಕರ ಪರವಾಗಿ ಚುನಾವಣಾ ಚಾಣಕ್ಯ ಶನಿವಾರ ರೋಡ್ ಶೋ ನಡೆಸಲಿದ್ದಾರೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್ ಹೇಳಿದ್ದಾರೆ. ಈ ಕುರಿತು ಶುಕ್ರವಾರ ಮಾಹಿತಿ ನೀಡಿರುವ ಅಪ್ಪಚ್ಚು ರಂಜನ್ ಶನಿವಾರ ಬೆಳಿಗ್ಗೆ 10 ಗಂಟೆಗೆ ವಿವಿಧ ಮಡಿಕೇರಿ ನಗರಕ್ಕೆ ಆಗಮಿಸಲಿರುವ ಅಮಿತ್ ಶಾ ನಗರದ ಚಾಮುಂಡೇಶ್ವರಿ ದೇವಾಲಯದ ಬಳಿಯಿಂದ ರೋಡ್ ಶೋ ಆರಂಭಿಸಲಿದ್ದಾರೆ. ದೇವಾಲಯದ ಬಳಿಯಿಂದ ಆರಂಭವಾಗುವ ರೋಡ್  ಶೋ ಇಂದಿರಾಗಾಂಧಿ ವೃತ್ತದ ಮೂಲಕ ಆದು ಖಾಸಗಿ ಹಳೇ ಬಸ್ಸು ನಿಲ್ದಾಣದ ವೃತ್ತದಿಂದ ಜನರಲ್ ತಿಮ್ಮಯ್ಯ ವೃತ್ತದವರಗೆ ಸಾಗಲಿದೆ.

Tap to resize

Latest Videos

undefined

ಈ ವೇಳೆ ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಪ್ಪಚ್ಚು ರಂಜನ್, ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಇಬ್ಬರ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಜನರಲ್ ತಿಮ್ಮಯ್ಯ ವೃತ್ತದಲ್ಲಿ ರೋಡ್ ಶೋ ಅಂತ್ಯಗೊಳ್ಳಲಿದ್ದು ಅಲ್ಲಿಯೇ ಅಮಿತ್ ಶಾ ಬಹಿರಂಗ ಭಾಷಣ ಮಾಡಲಿದ್ದಾರೆ. ಕೇಂದ್ರ ಗೃಹ ಸಚಿವರೇ ತಮ್ಮ ಪರವಾಗಿ ಮತಯಾಚನೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕನಿಷ್ಠ ಐದರಿಂದ 6 ಸಾವಿರ ಕಾರ್ಯಕರ್ತರನ್ನು ಸೇರಿಸಲಿದೆ. ಶುಕ್ರವಾರದವರೆಗೆ ಅಮಿತ್ ಶಾ ಅವರಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮೈದಾನದ ಪಕ್ಕದಲ್ಲಿಯೇ ಇರುವ ಸಂತ ಮೈಕಲರ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ನಡೆಯುತ್ತಿರುವುದರಿಂದ ಬಹಿರಂಗ ಸಭೆಯನ್ನು ರದ್ದುಗೊಳಿಸಿ ರೋಡ್ ಶೋ ನಡೆಸಲು ನಿರ್ಧರಿಸಲಾಗಿದೆ.

ಕಳೆದ ಚುನಾವಣೆಯಲ್ಲೂ ಇದೇ ಇಬ್ಬರ ಪರವಾಗಿ ರೋಡ್ ಶೋ ನಡೆಸಿದ್ದ ಚುನಾವಣಾ ಚಾಣಕ್ಯ ಬಿಜೆಪಿಗೆ ಮತ ಸೆಳೆದು ಗೆಲ್ಲಿಸಿದ್ದರು. ಈ ಬಾರಿಯೂ ಅಮಿತ್ ಶೋ ಅವರು ತಮ್ಮ ಪರವಾಗಿ ರೋಡ್ ಶೋ ನಡೆಸಲಿರುವುದರಿಂದ ಬಿಜೆಪಿ ಎರಡು ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈ ತಪ್ಪಿಸಿದ್ದೇ ಬಿ.ಎಲ್‌ ಸಂತೋಷ್, ಶೆಟ್ಟರ್ ಗಂಭೀರ

ಅಭಿವೃದ್ಧಿಯನ್ನೇ ಮುಂದೆ ಇಟ್ಟುಕೊಂಡು ಚುನಾವಣೆಯಲ್ಲಿ ಮತ ಕೇಳುತ್ತಿದ್ದೇವೆ. ಜಿಲ್ಲೆಗೆ ಏರ್ಪೋರ್ಟ್ ಆಗಬೇಕಾಗಿದ್ದು ಅದಕ್ಕೂ ಈಗಾಗಲೇ ಜಾಗ ಗುರುತ್ತಿಸಲಾಗಿದೆ. ಕೊಡಗಿನ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿರುವ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವುದಕ್ಕಾಗಿ ಟೂರಿಸ್ಟ್ ಕಾರಿಡಾರ್ ಮಾಡಲು ಈಗಾಗಲೇ ಪ್ರಣಾಳಿಕೆ ಸಿದ್ದ ಮಾಡಲಾಗಿದೆ. ಇದರಿಂದ ಕೊಡಗಿನ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಹೊಂದಲಿದೆ. ಈ ಯೋಜನೆ ಮೂಲಕ  18 ಗ್ರಾಮಗಳಲ್ಲಿ ಇರುವ 18 ಸ್ಥಳಗಳನ್ನು ಸಂಪರ್ಕಿಸುವ ಯೋಜನೆ ಇದಾಗಿದೆ ಎಂದು ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಪುಲಕೇಶಿನಗರದಲ್ಲಿ ಮೂರು ಪಕ್ಷಗಳ ಜಿದ್ದಾಜಿದ್ದಿ, ಮುಸ್ಲಿಂ ಮತ ಸೆಳೆಯಲು ನಮಾಜ್ ವೇಳೆ ಮುಗಿಬಿದ್ದ ಅಭ್ಯರ್ಥಿಗಳು!

ಕಾಂಗ್ರೆಸ್ನ ಎರಡು ಕ್ಷೇತ್ರಗಳ ಅಭ್ಯರ್ಥಿಗಳಿಬ್ಬರು ಬೆಂಗಳೂರಿನಿಂದ ಬಂದವರು. ಒಬ್ಬರು ವೈದ್ಯರಾದರೆ, ಮತ್ತೊಬ್ಬರು ಲಾಯರ್ ಎಂದಿದ್ದಾರೆ. ಕೊವಿಡ್ ಸಂದರ್ಭ ಜನರು ಸಂಕಷ್ಟದಲ್ಲಿ ಇದ್ದಾಗ 25 ಸಾವಿರ ಫುಡ್ ಕಿಟ್ ಗಳನ್ನು ವಿತರಣೆ ಮಾಡಿದ್ದೇನೆ. ಈ ಸಂದರ್ಭಗಳಲ್ಲಿ ಕಾಂಗ್ರೆಸ್ ನವರು ಯಾರು ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಭ್ರಷ್ಟಾಚಾರ ಇಲ್ಲದೆ ನಾವು ಕೆಲಸ ಮಾಡಿದ್ದೇವೆ. ಕಳೆದ ಮೂರು ವರ್ಷಗಳ ಮಳೆಗಾಲದ ಸಂದರ್ಭ ಪ್ರತೀ ವರ್ಷ 66, ಕೋಟಿ, 103 ಮತ್ತು 130 ಕೋಟಿಯನ್ನು ಮೂರು ವರ್ಷಗಳ ಮಳೆಗಾಲದ ಸಂದರ್ಭದಲ್ಲಿ ತಂದು ಕೆಲಸ ಮಾಡಿದ್ದೇವೆ. ಜನಸಂಖ್ಯೆ ಆಧಾರದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದೇವೆ. ಆದರೆ ಕಾಂಗ್ರೆಸ್ ದಲಿತರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿದೆ ಎಂದು ಆರೋಪಿಸಿದ್ದಾರೆ.

click me!