
ಬೆಂಗಳೂರು (ಏ.28): ಪುಲಕೇಶಿನಗರ ಕ್ಷೇತ್ರದಲ್ಲಿ ರಾಜಕೀಯ ಜಿದ್ದಾಜಿದ್ದಿ ನಡೆಯುತ್ತಿದೆ. ಮುಸ್ಲಿಂ ಮತ ಸೆಳೆಯಲು ಮೂರು ಪಕ್ಷಗಳ ಅಭ್ಯರ್ಥಿಗಳು ಜಿದ್ದಾಜಿದ್ದಿಯ ಹೋರಾಟ ನಡೆಸುತ್ತಿವೆ. ಶುಕ್ರವಾರದ ನಮಾಜ್ ವೇಳೆ ಮತದಾರರ ಬಳಿ ಮೂರು ಅಭ್ಯರ್ಥಿಗಳು ಮುಗಿಬಿದ್ದರು. ಟ್ಯಾನ್ರಿ ರೋಡ್ ಮತ್ತು ಟ್ಯಾಗ್ ಮೊಹಲ್ಲಾ ಮಸೀದಿಯ ಬಳಿ ಅಭ್ಯರ್ಥಿಗಳು ಮತಯಾಚನೆ ಮಾಡಿದರು. ಈ ವೇಳೆ ಡಿ ಜೆ ಹಳ್ಳಿ ಮುಖ್ಯ ರಸ್ತೆ ಮೋದಿ ಮಸೀದಿ ಬಳಿ ಕಾಂಗ್ರೆಸ್ ಮತ್ತು SDPI ಕಾರ್ಯಕರ್ತರ ಮಧ್ಯೆ ಕೂಗಾಟ, ಪರಸ್ಪರ ಘೋಷಣೆ ನಡೆಯಿತು.
ಟ್ಯಾನರಿ ರಸ್ತೆಯ ಮೋದಿ ಮಸೀದಿ ಬಳಿ SDPI ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕೂಗಾಟ ನಡೆಯಿತು. ಮುಸ್ಲಿಂ ಸಮುದಾಯದ ಅಮಾಯಕರ ಭವಿಷ್ಯ ಹಾಳು ಮಾಡಿದವರು ಕಾಂಗ್ರೆಸ್ ಎಂದು SDPI ಕಾರ್ಯಕರ್ತರು ಕೂಗಾಡಿದರು. ಎಸ್ ಡಿ ಪಿ ಐ ಕೂಗಾಟದ ಮಧ್ಯೆಯೇ ಕಾಂಗ್ರೆಸ್ ಅಭ್ಯರ್ಥಿ ಎ ಸಿ ಶ್ರೀನಿವಾಸ್ ಮತಯಾಚನೆ ಮಾಡಿದರು. ನಂತರ ಟ್ಯಾಗ್ ಮೊಹಲ್ಲಾ ಮಸೀದಿಯ ಬಳಿ ಕಾಂಗ್ರೆಸ್ ಮತಯಾಚನೆ ಮಾಡಿದರು.
ತೇಜಸ್ವಿನಿ ಅನಂತಕುಮಾರ್‌ಗೆ ಟಿಕೆಟ್ ಕೈ ತಪ್ಪಿಸಿದ್ದೇ ಬಿ.ಎಲ್ ಸಂತೋಷ್, ಶೆಟ್ಟರ್ ಗಂಭೀರ
ಟ್ಯಾಗ್ ಮೊಹಲ್ಲಾ ಮಸೀದಿ ಬಳಿ ಬಿಎಸ್ ಪಿ ಅಭ್ಯರ್ಥಿ ಪರ ಕಾರ್ಯಕರ್ತರು ಘೋಷಣೆ ಕೂಗಿದರು. ಈ ವೇಳೆ BSP ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿಕೊಂಡರು. ನಂತರ ನಮಾಜ್ ಮುಗಿಸಿ ಬಂದವರ ಬಳಿ ಕಾಂಗ್ರೆಸ್ ಅಭ್ಯರ್ಥಿ ಎ ಸಿ ಶ್ರೀನಿವಾಸ ಮತಯಾಚನೆ ಮಾಡಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಉತ್ತಮ ಪ್ರತಿಕ್ರಿಯೆ ಇದೆ. ಖಂಡಿತ ಕಾಂಗ್ರೆಸ್ ಗೆದ್ದೆ ಗೆಲ್ಲಲಿದೆ. ನಮ್ಮ ಪಕ್ಷದವರು ಮುಖ್ಯಮಂತ್ರಿ ಆಗಬೇಕು ಅನ್ನೋ ಸಂಕಲ್ಪ ಇದೆ. ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸ್ಪರ್ಧೆ ಕಾಂಗ್ರೆಸ್ ಗೆ ಅಡ್ಡಿ ಆಗಲ್ಲ. ಅವರು ಉತ್ತರ ಪ್ರದೇಶದ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ. ಪುಲಕೇಶಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೆ ಗೆಲ್ಲಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ ಸಿ ಶ್ರೀನಿವಾಸ ವಿಶ್ವಾಸ ವ್ಯಕ್ತಪಡಿಸಿದರು.
ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಗಲಾಟೆ ಯಾರೇ ಮಾಡಲಿ ನಾನು ಖಂಡಿಸುತ್ತೇನೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.