ಮುಗಿದ ಉಪಸಮರ: ಸಿ-ವೋಟರ್ ಸಮೀಕ್ಷೆಯಲ್ಲಿ ಯಾರಿಗೆ ಎಷ್ಟು?

By Suvarna NewsFirst Published Dec 5, 2019, 7:57 PM IST
Highlights

ಮುಗಿದ    15  ಕ್ಷೇತ್ರಗಳ ಉಪಚುನಾವಣೆ/  ಸಿ-ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ  ಹೆಚ್ಚಿನ ಸ್ಥಾನ/ ಬಿಜೆಪಿಗೆ   9 ರಿಂದ 12   ಸ್ಥಾನ ಎಂದ ಸಿ- ವೋಟರ್

ಬೆಂಗಳೂರು(ಡಿ. 05) ಕರ್ನಾಟಕದ ಉಪಸಮರ ಮುಗಿದಿದ್ದು  ಸಿ ವೋಟರ್ ಸಮೀಕ್ಷೆ ಬಿಜೆಪಿಗೆ ಮುನ್ನಡೆ ನೀಡಿದೆ.  ಬಿಜೆಪಿ  9 ರಿಂದ 12 ಸ್ಥಾನದಲ್ಲಿ ಜಯ ಸಾಧಿಸಲಿದೆ ಎಂದು ಹೇಳಿದ್ದರೆ  ಕಾಂಗ್ರೆಸ್ ಗೆ 3 ರಿಂದ 6 ಸ್ಥಾನ ದೊರೆಯಲಿದೆ ಎಂದು ಹೇಳಿದೆ.

ಜೆಡಿಎಸ್ 1 ಸ್ಥಾನದಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಿ-ವೋಟರ್ ಸಮೀಕ್ಷೆ  ಹೇಳಿದೆ. ಪಕ್ಷೇತರ  ಶೂನ್ಯ ಫಲಿತಾಂಶ ಬರಲಿದೆ ಎಂದು ಹೇಳುವ ಮೂಲಕ ಹೊಸಕೋಟೆ ಶರತ್ ಬಚ್ಚೇಗೌಡ ಗೆಲುವಿನ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಣೆ ಮಾಡಿದೆ.

ಪತ್ತೆಯಾದ ಹೌದೋ ಹುಲಿಯಾದ ಅಸಲಿ ಮಾಲೀಕ

ಬಿಜೆಪಿ, ಕಾಂಗ್ರೆಸ್ ಮತ್ತು ಜಡಿಎಸ್ ಪಕ್ಷಗಳು ಆಂತರಿಕವಾಗಿ ತಮ್ಮ ತಮ್ಮ ಸಮೀಕ್ಷೆ ಮಾಡಿವೆ. ಆಯಾ ಪಕ್ಷಗಳು ತಮ್ಮ ಕಾರ್ಯಕರ್ತರ ಮಾಹಿತಿ ಆಧಾರದ ಮೇಲೆ ಇಂತಿಷ್ಟು ಸ್ಥಾಮ ಬರುವುದು ಎಂಬ ಲೆಕ್ಕಾಚಾರ ಮಾಡಿಕೊಂಡಿವೆ

ಡಿಸೆಂಬರ್ 5 ಅಂದರೆ ಇಂದು 15 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ಮುಗಿದಿದೆ.  ಡಿಸೆಂಬರ್ 9 ರಂದು ಫಲಿತಾಂಶ ಹೊರಬೀಳಲಿದ್ದು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ಅಳಿವು-ಉಳಿವು ಆ ಫಲಿತಾಂಶದ ಮೇಲೆ ನಿಂತಿದೆ.

ಉಪಚುನಾವಣೆ ನಡೆದಿರುವ ಕ್ಷೇತ್ರಗಳು
1.ಗೋಕಾಕ್, 2.ಅಥಣಿ, 3.ಕಾಗವಾಡ [ಬೆಳಗಾವಿ], 4. ರಾಣೇಬೆನ್ನೂರು, 5. ಹಿರೇಕೆರೂರು [ಹಾವೇರಿ], 6. ಕೆ.ಆರ್.ಪುರಂ, 7.ಯಶವಂತಪುರ, 8. ಶಿವಾಜಿನಗರ, 9. ಮಾಹಾಲಕ್ಷ್ಮೀ ಲೇಔಟ್ [ಬೆಂಗಳೂರು], 10.ಯಲ್ಲಾಪುರ [ಉತ್ತರ ಕನ್ನಡ] 11. ಕೆ.ಆರ್.ಪೇಟೆ [ಮಂಡ್ಯ], 12. ಹುಣಸೂರು [ಮೈಸೂರು], 13. ಚಿಕ್ಕಬಳ್ಳಾಪುರ, 14. ಹೊಸಕೋಟೆ [ಬೆಂಗಳೂರು ಗ್ರಾಮಾಂತರ] ಹಾಗೂ 15. ವಿಜಯನಗರ [ಬಳ್ಳಾರಿ]

click me!