* ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ
* 25 ಸ್ಥಾನಗಳಿಗೆ ದಿನಾಂಕ ನಿಗದಿ ಮಾಡಿದ ಚುನಾವಣೆ ಆಯೋಗ
* ಡಿಸೆಂಬರ್ 10ರಂದು 25 ಸ್ಥಾನಗಳಿಗೆ ಮತದಾನ
ಬೆಂಗಳೂರು, (ನ.09): ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ (Karnataka MLC Election) ದಿನಾಂಕ ಘೋಷಣೆಯಾಗಿದೆ.
ರಾಜ್ಯ ಮೇಲ್ಮನೆಯ (Karnataka Legislative Council) 25 ಸ್ಥಾನಗಳಿಗೆ ಮುಂದಿನ ತಿಂಗಳು ಡಿಸೆಂಬರ್ 10ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ (Election Commission) ಪ್ರಕಟಿಸಿದೆ.
undefined
ಹೊರಟ್ಟಿ ವಿರುದ್ಧ ಯಾರು ಬಿಜೆಪಿ ಅಭ್ಯರ್ಥಿ?
ನವೆಂಬರ್ 16ರಂದು ಮೇಲ್ಮನೆ ಚುನಾವಣೆಗೆ (Biennial elections) ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೇ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14ರಂದು (ಮಂಗಳವಾರ) 25 ಸ್ಥಾನಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
25 ಪರಿಷತ್ ಸದಸ್ಯರ ಅಧಿಕಾರದ ಅವಧಿ ಜನವರಿ 5ಕ್ಕೆ ಮುಕ್ತಾಯಗೊಳ್ಳಲಿದೆ. ಬೀದರ್ 01, ಕಲಬುರಗಿ 01, ವಿಜಯಪುರ 02, ಬೆಳಗಾವಿ 02, ಉತ್ತರ ಕನ್ನಡ 01, ಧಾರವಾಡ 02, ರಾಯಚೂರು 01, ಬಳ್ಳಾರಿ 01, ಚಿತ್ರದುರ್ಗ 01, ಶಿವಮೊಗ್ಗ 01, ದಕ್ಷಿಣ ಕನ್ನಡ 02, ಚಿಕ್ಕಮಗಳೂರು 01, ಹಾಸನ 01, ತುಮಕೂರು 01, ಮಂಡ್ಯ 01, ಬೆಂಗಳೂರು 01, ಬೆಂಗಳೂರು ಗ್ರಾಮಾಂತರ 01, ಕೋಲಾರ 01, ಕೊಡಗು 01, ಮೈಸೂರಿನ 02 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
Vidhan Parishat Election: ಮಾನೆ ಪರಿಷತ್ ಸ್ಥಾನಕ್ಕಾಗಿ ಹೆಚ್ಚಿದ ಪೈಪೋಟಿ
ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 16 ಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ನ.23ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಡಿಸೆಂಬರ್ 10ರಂದು ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ..
ತೆರವಾಗುತ್ತಿರುವ 25 ಎಂಎಲ್‌ಸಿ ಸ್ಥಾನಗಳ ವಿವರ
ಬಿಜೆಪಿಯ-6
ಬಿಜೆಪಿ ಬೆಂಬಲಿತ ಪಕ್ಷೇತರ ಸದಸ್ಯ-1
ಕಾಂಗ್ರೆಸ್-13.
ವಿವಿಧ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ 25 ವಿಧಾನ ಪರಿಷತ್ ಸದಸ್ಯರ 6 ವರ್ಷದ ಅಧಿಕಾರಾವಧಿ ಹೊಸ ವರ್ಷದ ಆರಂಭದಲ್ಲಿ ಕೊನೆಗೊಳ್ಳಲಿದೆ.
ಸದ್ಯ ವಿಧಾನ ಪರಿಷತ್ನಲ್ಲಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಆಡಳಿತ ಪಕ್ಷವಾಗಿಯೂ ತನ್ನ ಬಲ ಹೊಂದಿದೆ. 75 ಸದಸ್ಯರ ಬಲ ಹೊಂದಿರುವ ವಿಧಾನ ಪರಿಷತ್ನಲ್ಲಿ ಸದ್ಯ ಯಾವುದೇ ಸ್ಥಾನ ತೆರವಾಗಿಲ್ಲ. 75ರ ಪೈಕಿ ಬಿಜೆಪಿ ಒಬ್ಬ ಪಕ್ಷೇತರ (ಅಭಯ್ ಪಾಟೀಲ್) ಬೆಂಬಲದೊಂದಿಗೆ ಒಟ್ಟು 33 ಸದಸ್ಯರ ಬಲ ಹೊಂದಿದೆ.
ಉಳಿದಂತೆ ಕಾಂಗ್ರೆಸ್ನ 29 ಹಾಗು ಜೆಡಿಎಸ್ನ 13 ಮಂದಿ ಸದಸ್ಯರಿದ್ದಾರೆ. ಇದೀಗ ಇವರಲ್ಲಿ ಶಿಕ್ಷಕ, ಪದವೀಧರ ಕ್ಷೇತ್ರದ ಸದಸ್ಯರೂ ಸೇರಿದಂತೆ ಒಟ್ಟು 25 ಸ್ಥಾನಗಳು ತೆರವಾಗುತ್ತಿವೆ. ಇದನ್ನು ತುಂಬಿಕೊಳ್ಳಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹರಸಾಹಸ ನಡೆಸುತ್ತಿವೆ.ಇದರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಸ್ಥಳೀಯ ಸಂಸ್ಥೆಗಳಿಂದ ಪರಿಷತ್ಗೆ ಸೇರಿದಂತೆ ವಿವಿಧ ವಿಭಾಗಗಳಿಂದ ಸದಸ್ಯರ ಆಯ್ಕೆ ನಡೆಯಲಿದೆ.
ಬಿಜೆಪಿ ವಿಧಾನಸಭೆಯಲ್ಲಿ ಹೆಚ್ಚು ಸದಸ್ಯ ಬಲ ಹೊಂದಿರುವುದರಿಂದ ಒಂದಿಷ್ಟು ಹೆಚ್ಚುವರಿ ಸ್ಥಾನ ಗಳಿಸುವ ನಿರೀಕ್ಷೆ ಹೊಂದಿದೆ.75 ಸದಸ್ಯರ ಬಲವಿರುವ ವಿಧಾನ ಪರಿಷತ್ನಲ್ಲಿ ಸದ್ಯ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸದಸ್ಯ ಬಲ ಬಿಜೆಪಿಗೆ ಇಲ್ಲ. ಯಾವುದೇ ವಿಧೇಯಕವನ್ನು ಸ್ವತಂತ್ರವಾಗಿ ಅಂಗೀಕಾರ ಪಡೆಯಲು ಬಿಜೆಪಿ 38 ಸದಸ್ಯರ ಬಲ ಹೊಂದಲೇಬೇಕಾದ ಅನಿವಾರ್ಯತೆ ಇದೆ. ಸದ್ಯ 33 ಸದಸ್ಯರ ಬಲ ಹೊಂದಿದ್ದು, ಜತೆಗೆ ಜೆಡಿಎಸ್ ಬೆಂಬಲದೊಂದಿಗೆ ಅಧಿಕಾರ ನಡೆಸುತ್ತಿದೆ. ಸಭಾಪತಿ ಸ್ಥಾನವನ್ನು ಸಹ ಜೆಡಿಎಸ್ಗೆ ಬಿಟ್ಟುಕೊಟ್ಟಿದೆ.
ಈಗಿರುವ ಬಿಜೆಪಿ ಸದಸ್ಯರ ಪಟ್ಟಿ
* ಬಿಜೆಪಿ- ಕೋಟಾ ಶ್ರೀನಿವಾಸ ಪೂಜಾರಿ- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಬಿ.ಜಿ. ಪಾಟೀಲ್-ಕಲಬುರಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಪ್ರದೀಪ್ ಶೆಟ್ಟರ್- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಎಂ.ಕೆ. ಪ್ರಾಣೇಶ್ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಸುನೀಲ್ ಸುಬ್ರಹ್ಮಣಿ ಮಂಡೇಪಂಡ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಮಹಂತೇಶ್ ಕವಟಗಿಮಠ (ಮುಖ್ಯ ಸಚೇತಕ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಅಭಯ್ ಪಾಟೀಲ್ (ಪಕ್ಷೇತರ)- ಬೆಳಗಾವಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
ಕಾಂಗ್ರೆಸ್ ಪಟ್ಟಿ ಇಂತಿದೆ.
* ಎಸ್.ಆರ್. ಪಾಟೀಲ್ (ಪ್ರತಿಪಕ್ಷ ನಾಯಕ)- ವಿಜಯಪುರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಪ್ರತಾಪ್ ಚಂದ್ರ ಶೆಟ್ಟಿ- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಶ್ರೀಕಾಂತ್ ಲಕ್ಷ್ಮಣ್ ಘೋಟ್ನೇಕರ್- ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಶ್ರೀನಿವಾಸ್ ಮಾನೆ (ಹಾಲಿ ಶಾಸಕ-ಹಾನಗಲ್)- ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಆರ್. ಧರ್ಮಸೇನ-ಮೈಸೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ವಿಜಯ್ ಸಿಂಗ್- ಬೀದರ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಬಸವರಾಜ್ ಪಾಟೀಲ್ ಇಟಗಿ- ರಾಯಚೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
*ಕೆ.ಸಿ. ಕೊಂಡಯ್ಯ-ಬಳ್ಳಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಆರ್. ಪ್ರಸನ್ನಕುಮಾರ್- ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
*ಎಂ.ಎ. * ಗೋಪಾಲಸ್ವಾಮಿ-ಹಾಸನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಎಂ. ನಾರಾಯಣಸ್ವಾಮಿ-ಬೆಂಗಳೂರು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಎಸ್.ರವಿ- ಬೆಂಗಳೂರು ಗ್ರಾಮಾಂತರ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ರಘು ಆಚಾರ್- ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ
ಜೆಡಿಎಸ್ ಪಟ್ಟಿ
* ಎನ್.ಅಪ್ಪಾಜಿ ಗೌಡ- ಮಂಡ್ಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿ.
* ಸಂದೇಶ್ ನಾಗರಾಜ್-ಮೈಸೂರು ಸಂಸ್ಥೆಗಳ ಪ್ರತಿನಿಧಿ,
* ಬಸವರಾಜ ಹೊರಟ್ಟಿ (ಸಭಾಪತಿ)- ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರತಿನಿಧಿ.
* ಸಿ.ಆರ್. ಮನೋಹರ್- ಕೋಲಾರ ಸಂಸ್ಥೆಗಳ ಪ್ರತಿನಿಧಿ.
* ಕಾಂತರಾಜು (ಬಿಎಂಎಲ್)- ತುಮಕೂರು ಸಂಸ್ಥೆಗಳ ಪ್ರತಿನಿಧಿ.