ರಾಜ್ಯದ ಮುಖ್ಯಮಂತ್ರಿಗೆ ನೋಟಿಸ್ ಕೊಡೋದು ಪ್ರಜಾಪ್ರಭುತ್ವ ಅಲ್ಲ. ನೋಟಿಸ್ ನೀಡಿರುವುದರ ಹಿಂದೆ ಕೇಂದ್ರದ ರಾಜಕಾರಣವಿದೆ. ರಾಜ್ಯಪಾಲರ ನೀತಿ ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಬೆಂಗಳೂರು (ಆ.1): ರಾಜ್ಯದ ಮುಖ್ಯಮಂತ್ರಿಗೆ ನೋಟಿಸ್ ಕೊಡೋದು ಪ್ರಜಾಪ್ರಭುತ್ವ ಅಲ್ಲ. ನೋಟಿಸ್ ನೀಡಿರುವುದರ ಹಿಂದೆ ಕೇಂದ್ರದ ರಾಜಕಾರಣವಿದೆ. ರಾಜ್ಯಪಾಲರ ನೀತಿ ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಸ್ ನೋಟಿಸ್ ನೀಡಿರುವ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ವಾಟಾಳ್ ನಾಗರಾಜ್, ನಾನು ಹಿಂದೆ ರಾಜ್ಯಪಾಲರ ಬಗ್ಗೆ ಪ್ರಶಂಸೆ ಮಾಡಿದ್ದೇನೆ. ಒಂದು ಕಾರ್ಯಕ್ರಮದಲ್ಲಿ ಅವರನ್ನು ಹೊಗಳಿ ಮಾತಾಡಿದ್ದೇನೆ. ರಾಜ್ಯಪಾಲರ ಗಲಾಟೆ ಹಲವು ರಾಜ್ಯಗಳಲ್ಲಿ ಇದೆ. ಕೇರಳ ತಮಿಳುನಾಡು ಮಹಾರಾಷ್ಟ್ರ ಬಂಗಾಳದಲ್ಲಿ ರಾಜ್ಯಪಾಲರು ಗಲಾಟೆ ಮಾಡ್ತಿರೋದು ಕೇಳಿದ್ದೆವು. ಆದರೆ ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ರಾಜಕೀಯ ಮಾಡಿಲ್ಲ, ಗೊಂದಲ ಮಾಡಿಲ್ಲ. ರಾಜ್ಯಪಾಲರು ಇಲ್ಲೇ ಇರಬೇಕು ಎಂದು ಹೇಳಿದ್ದೆ ಎಂದರು.
ಭ್ರೂಣ ಹತ್ಯೆ ಮಾಡಿಸಿ ಪ್ರಿಯಕರ ಪರಾರಿ; ಪ್ರಧಾನಿ ಮೋದಿ ಮೊರೆ ಹೋದ ಮಹಿಳೆ!
ಈ ಹಿಂದೆ ಎಸ್ ಆರ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಅವರನ್ನ ರಾಜ್ಯಪಾಲರು ಕೆಳಗಿಳಿಸಿದ್ದರು. ರಾಜ್ಯದ ಮುಖ್ಯಮಂತ್ರಿಯನ್ನ ರಾಜ್ಯಪಾಲರು ಕೆಳಗಿಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಮುಡಾ ಹಗರಣ ವಿಚಾರಣೆಗೆ ಈಗಾಗಲೇ ನ್ಯಾಯಾಧೀಶರನ್ನ ನೇಮಕ ಮಾಡಲಾಗಿದೆ. ಅದರ ನಡುವೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟಿಸ್ ನೀಡಿರುವುದು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ರಾಜ್ಯಪಾಲರ ಅನಿಸಿಕೆಯಲ್ಲ, ರಾಜಕೀಯ ಅನಿಸಿಕೆ. ಎಲ್ಲ ಕಾಲದ ತನಿಖೆಯಾಗಲಿ ಎಂದು ಆಗ್ರಹಿಸಿದರು.
ರಾಜ್ಯಪಾಲರಿಂದ ಸಿಎಂಗೆ ನೋಟಿಸ್: 'ಏನು ಉತ್ತರ ಕೊಡಬೇಕೋ ಕೊಡ್ತೀವಿ': ಪರಮೇಶ್ವರ್
ಸಿಎಂ ಸಿದ್ದರಾಮಯ್ಯ ಮೇಲೆ ರಾಜ್ಯಪಾಲರು ಬಹಳ ದಿನಗಳಿಂದ ಕಣ್ಣಿಟ್ಟಿದ್ದಾರೆ. ವಿಶೇಷ ಅಧಿವೇಶನ ಕರೆದು ಮುಡಾ ಹಗರಣದ ಸಮಗ್ರ ಚರ್ಚೆ ಮಾಡಿ ಎಂದು ಸಿಎಂಗೆ ರಾಜ್ಯಪಾಲರು ಹೇಳಬಹುದಿತ್ತು. ಆದರೆ ಯಾವುದೇ ಸ್ಪಷ್ಟನೆ ಕೇಳದೇ ಏಕಾಏಕಿ ನೋಟಿಸ್ ಕೊಡುವುದು ಸರಿಯಲ್ಲ. ಇದರಲ್ಲಿ ಕೇಂದ್ರದ ರಾಜಕಾರಣ ಇದೆ. ನೋಟಿಸ್ ಕೊಡುವ ಮೂಲಕ ಪ್ರಜಾಪ್ರಭುತ್ವ ಆಧಾರದಲ್ಲಿ ರಚನೆಯಾದ ಸರ್ಕಾರವನ್ನ ಅಲುಗಡಿಸಲು ಯತ್ನಿಸಬಾರದು. ಹಾಗೇನಾದರೂ ಆದರೆ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದರು.