
ನಟಿ ಹಾಗೂ ರಾಜಕಾರಣಿ ಕಂಗನಾ ರಣಾವತ್(Kangana ranaut) ಅವರು 2018ರ ಕಾನ್ ಫಿಲ್ಮ್ ಫೆಸ್ಟಿವಲ್ ಪಾರ್ಟಿ(2018 Cannes Film Festival Party)ಯ ಹಳೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಇಂದು(ಆಗಸ್ಟ್ 3, 2026) ರಂದು ಪ್ರತಿಕ್ರಿಯೆ ನೀಡಿದ್ದಾರೆ.
'ನಾನು ಮಾಡರೇಟ್ ಹಿಂದೂ ಆಗಿದ್ದೆ, ಈಗ ನನಗೆ ಸಂಘಿ ಆಗಬೇಕು' ಎಂದು ಹೇಳುವ ಮೂಲಕ ತಮ್ಮ ಸೈದ್ಧಾಂತಿಕ ಬದಲಾವಣೆಯನ್ನು ನೇರವಾಗಿ ಒಪ್ಪಿಕೊಂಡಿದ್ದಾರೆ. ಪಾಶ್ಚಾತ್ಯ ಶೈಲಿಯಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ ಈ ಹಳೆಯ ವಿಡಿಯೋ, ಇತ್ತೀಚೆಗೆ ಅವರು ಯುವ ಪೀಳಿಗೆಯನ್ನು 'ಜನರೇಷನ್ ಗಟರ್' ಎಂದು ಟೀಕಿಸಿದ ನಂತರ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಂಗನಾ ತಮ್ಮ ರಾಜಕೀಯ ನಿಲುವುಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
2018ರ ಕಾನ್ ಪಾರ್ಟಿಯಲ್ಲಿ ಕಂಗನಾ ಡ್ಯಾನ್ಸ್ ಮಾಡಿ ಎಂಜಾಯ್ ಮಾಡುತ್ತಿದ್ದ ವಿಡಿಯೋ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಮತ್ತೆ ಹರಿದಾಡಲು ಶುರುವಾಗಿತ್ತು. Gen-Z ಯುವಜನರು ಮತ್ತು ಕಾಕ್ರೋಚ್ ಜನತಾ ಪಾರ್ಟಿ (CJP)ಯ ವಕ್ತಾರರೊಬ್ಬರನ್ನು ಗುರಿಯಾಗಿಸಿ 'ಜನರೇಷನ್ ಗಟರ್' ಎಂದು ಕಂಗನಾ ಟೀಕೆ ಮಾಡಿದ್ದರು. ಯುವಜನರ ಪಾಶ್ಚಾತ್ಯ ಜೀವನಶೈಲಿಯನ್ನು ಅವರು ಖಂಡಿಸಿದ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿರುವುದು ಚರ್ಚೆಗೆ ಕಾರಣವಾಗಿತ್ತು.
ಈ ಬಗ್ಗೆ ಇನ್‌ಸ್ಟಾಗ್ರಾಮ್ ವಿಡಿಯೋ ಪೋಸ್ಟ್ ಮಾಡಿರುವ ಕಂಗನಾ, ಹಿಂದೂ ಹೆಣ್ಣುಮಕ್ಕಳ ವಿಷಯ ಬಂದಾಗ, ನಾನು ಐಟಂ ಸಾಂಗ್‌ಗಳ ವಿರುದ್ಧ, ಸಂಬಳ ತಾರತಮ್ಯದ ವಿರುದ್ಧ ಮಾತನಾಡಿದ್ದೇನೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡಿಲ್ಲ. ಹೀರೋಗಳನ್ನು ಬಹಿಷ್ಕರಿಸಿದ್ದೇನೆ. ನೆಪೊಟಿಸಂ ವಿರುದ್ಧ ಹೋರಾಡಿದ್ದೇನೆ ಅಂತ ನನ್ನನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಇಷ್ಟೆಲ್ಲಾ ಮಾಡಿದ ಮೇಲೆ ನನ್ನನ್ನು ಹೇಗೆ ಪ್ರಶ್ನಿಸ್ತಾರೆ? ಹೌದು ನಾನು ಒಬ್ಬ ಮಾಡರೇಟ್ ಹಿಂದೂ ಆಗಿದ್ದೆ. ನಾನು ಇದನ್ನು ಸಮರ್ಥಿಸಿಕೊಳ್ತೇನೆ. ಆದರೆ ಈ ರೀತಿ ದಿಟ್ಟ ಹೆಜ್ಜೆ ಇಡಲಾಗದ ಎಷ್ಟೋ ಹೆಣ್ಣುಮಕ್ಕಳಿಗೆ ಧೈರ್ಯ ಸಿಗದೇ ಇರಬಹುದು. 'ನೀನು ಯಾವಾಗ ಸಂಘಿ ಆದೆ?' ಅಂತ ನನಗೆ ಟಾಂಗ್ ಕೊಡ್ತಾರೆ. ನನಗೆ ಸಂಘಿ ಆಗಬೇಕು. ನನಗೆ ಬಿಜೆಪಿ, ಆರ್‌ಎಸ್‌ಎಸ್ ಸಿದ್ಧಾಂತ, 'ಜಾಗೃತ ಹಿಂದೂ' ಆಗಬೇಕು. ನನಗೆ ಬದಲಾಗಬೇಕು. ನಾನೇಕೆ ಹಾಗೆ ಮಾಡಬಾರದು?' ಎಂದು ಅವರು ಪ್ರಶ್ನಿಸಿದ್ದಾರೆ.
ವೈರಲ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಮಾಜದ ಈ ಡಬಲ್ ಸ್ಟ್ಯಾಂಡರ್ಡ್ ಬಗ್ಗೆ ಹರಿಹಾಯ್ದರು. ಹಿಂದೂ ಹೆಣ್ಣುಮಕ್ಕಳ ವಿಷಯ ಬಂದಾಗ, 'ನೀನು ಪಾರ್ಟಿ ಮಾಡ್ತಿದ್ದೆ, ಹಾಗೆ-ಹೀಗೆ' ಅಂತ ಪ್ರಶ್ನೆ ಕೇಳ್ತಾರೆ. ಹೌದು, ನಾನು ಅದೆಲ್ಲವನ್ನೂ ಮಾಡುತ್ತಿದ್ದೆ. ಆದರೆ ಇಂದು ನಾನು ಬದಲಾಗಿ, ಒಬ್ಬ ಜಾಗೃತ ಮತ್ತು ಶಿಸ್ತಿನ ಹಿಂದೂ ಆಗಲು ಬಯಸುತ್ತೇನೆ. ಆ ದಾರಿ ನನಗೇಕೆ ಮುಚ್ಚಿದೆ? ಈ ಡಬಲ್ ಸ್ಟ್ಯಾಂಡರ್ಡ್ಸ್ ನಡೆಯಲ್ಲ. ನಮ್ಮ ಹೆಣ್ಣುಮಕ್ಕಳಿಗೆ ಶಿಸ್ತುಬದ್ಧ, ಜಾಗೃತ ಹಿಂದೂ ಆಗಿ ಬದಲಾಗುವ ಆಯ್ಕೆ ಇರಬೇಕು"\ ಎಂದು ಹೇಳಿದ್ದಾರೆ.
ಕಂಗನಾ ಅವರು ಸೋನಾಕ್ಷಿ ಸಿನ್ಹಾ ಅವರನ್ನು ಗುರಿಯಾಗಿಸಿ ಪೋಸ್ಟ್ ಹಾಕಿದ್ದಾರೆ ಎಂದು ಹಲವರು ಭಾವಿಸಿರುವ ಒಂದು ಪೋಸ್ಟ್ ಕೂಡ ಹಂಚಿಕೊಂಡಿದ್ದಾರೆ. ಅದರಲ್ಲಿ, 'ತುಂಬಾ ಫೇಕ್ ನ್ಯೂಸ್‌ಗಳು ಹರಿದಾಡುತ್ತಿವೆ. ನಾನು ಹಾಕಿರುವ ಈ ಲೈಕ್ ಕೂಡ ಫೇಕ್. ನಾನು ಯಾರನ್ನೂ ಬಾಡಿ ಶೇಮ್ ಮಾಡಲ್ಲ. ಆದರೆ ಇತ್ತೀಚೆಗೆ ಒಬ್ಬ ನಟಿ 'ಪಾಕೆಟ್ ಮಾರ್'ತರಹ ಡ್ರೆಸ್ ಮಾಡಿ ಮಾತಾಡೋದನ್ನು ಗಮನಿಸಿದ್ದೇನೆ. ಅವರು ಹಾಫ್ ಪ್ಯಾಂಟ್, ಉಲ್ಟಾ ಕ್ಯಾಪ್ ಹಾಕಿ ಕಿಡಿಗೇಡಿ ತರಹ ಮಾತಾಡ್ತಾರೆ. ಪ್ರತಿಭಟನಾಕಾರರ 'ಗಟರ್‌ಛಾಪ್' ನಡವಳಿಕೆಯನ್ನು ಬಲವಾಗಿ ಪ್ರಮೋಟ್ ಮಾಡ್ತಾರೆ. ಸಂಬಂಧದಲ್ಲಿ ನಿಮಗೆ ಹೇಗೆ ಅನಿಸುತ್ತದೆಯೋ, ನಿಮ್ಮ ಡ್ರೆಸ್ಸಿಂಗ್ ಕೂಡ ಹಾಗೆಯೇ ಇರುತ್ತದೆ. ನೀನು ಮೊದಲು ಎಷ್ಟು ಚೆನ್ನಾಗಿ ಡ್ರೆಸ್ ಮಾಡಿ, ಅಂದವಾಗಿ ಮಾತಾಡುತ್ತಿದ್ದೆ. ನಿನಗೆ ಈಗ ಏನಾಯ್ತು? ಅಭಿಪ್ರಾಯಗಳು ನಿನ್ನದೇ, ಆದರೆ ನಿನ್ನ ಸ್ಟೈಲಿಂಗ್ ಅನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದು. ನಿನಗೆ ಹೆಲ್ಪ್ ಬೇಕಿದ್ದರೆ ನಾನು ಯಾವಾಗಲೂ ಸಿದ್ಧ ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.