ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತ ಹೆಜ್ಜೆ ಹಾಕಿದ್ದು, ಇಂದು ರಾಜ್ಯದ ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಹೇಳಿದ ಕಾಗವಾಡ ಶಾಸಕ ರಾಜು ಕಾಗೆ
ಕಾಗವಾಡ(ಮಾ.17): ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಜನತೆಗೆ ನೆಮ್ಮದಿ ಜೀವನ ನಡೆಸುವ ಭರವಸೆ ಸಿಕ್ಕಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಕಾಗವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ₹ 20.56 ಕೋಟಿ ವೆಚ್ಚದ ಕಾಮಗಾರಿಗಳಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತ ಹೆಜ್ಜೆ ಹಾಕಿದ್ದು, ಇಂದು ರಾಜ್ಯದ ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಹೇಳಿದರು.
ಶನಿವಾರ ಜಂಬಗಿ, ಸಂಬರಗಿ, ಕಿರಣಗಿ ಹಾಗೂ ಕೆಂಪವಾಡ ಗ್ರಾಮಗಳಲ್ಲಿ ಹಳ್ಳಕ್ಕೆ ತಲಾ ₹ 50 ಲಕ್ಷ ವೆಚ್ಚದಲ್ಲಿ ನಾಲ್ಕು ಚೆಕ್ ಡ್ಯಾಂ ಹಾಗೂ ಮಲಾಬಾದ ಗ್ರಾಮದಲ್ಲಿ ₹ 3.70 ವೆಚ್ಚದಲ್ಲಿ ಬ್ರಿಡ್ಜ್ ಕಂ ಬಾಂದಾರ, ₹ 5 ಕೋಟಿ ವೆಚ್ಚದಲ್ಲಿ ಉಗಾರ-ಶಿರಗುಪ್ಪಿ ರಸ್ತೆ, ಕಾಗವಾಡ ಪಟ್ಟಣದಲ್ಲಿ ₹ 56 ಲಕ್ಷ ವೆಚ್ಚದಲ್ಲಿ 112 ಎಕರೆಯಲ್ಲಿ ಸವಳು-ಜವಳು ನಿರ್ಮೂಲನೆ ಕಾಮಗಾರಿ, ₹ 2 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಐನಾಪುರದಲ್ಲಿ ₹ 13 ಲಕ್ಷ ವೆಚ್ಚದಲ್ಲಿ ರಸ್ತೆ, ₹ 30 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಹಾಗೂ ₹ 8 ಕೋಟಿ ವೆಚ್ಚದ ಡಿಪ್ಲೊಮಾ ಕಾಲೇಜಿನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಡಾ.ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಮಂಜೂರಾದ 100 ಫಲಾನುಭವಿಗಳಿಗೆ ಮನೆಗಳ ಆದೇಶ ಪತ್ರಗಳನ್ನು ಶಾಸಕ ರಾಜು ಕಾಗೆ ವಿತರಿಸಿದರು.
Lok Sabha Election 2024: ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟ ಪಂಚಮಸಾಲಿ ನಾಯಕರು?
ಬಳಿ ಮಾತನಾಡಿದ ಶಾಸಕ ರಾಜು ಕಾಗೆ, ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿ ನೀಡಲಾಗಿತ್ತು. ಅದರಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 200 ಯುನಿಟ್ ಉಚಿತ ವಿದ್ಯುತ್, ಬಿಪಿಎಲ್ ಪಡಿತರದಾರರಿಗೆ 5 ಕೆ.ಜಿ ಅಕ್ಕಿ, ಹಾಗೂ ₹ 170 ಸೇರಿ ಎಲ್ಲ ಪಂಚ ಗ್ಯಾರಂಟಿ ಜಾರಿಗೊಳಿಸಲಾಗಿದೆ. ಬಿಜೆಪಿಗರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದು, ಜನರು ಅವರ ಮಾತಿಗೆಕಿವಿಗೊಡಬೇಡಿ ಎಂದು ಕರೆ ನೀಡಿದರು.
ಐನಾಪುರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂತೋಷಕುಮಾರ ರಡ್ಡಿ, ಅಭಿಯಂತರ ವಿ.ಎನ್. ನಾಗನಕೇರಿ, ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ(ಪುಟ್ಟು) ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಬಿರಡಿ, ಸಂಜಯ ಕುಚನೂರೆ, ಮುಖಂಡರಾದ ಸುಭಾಷ ಪಾಟೀಲ, ಚಮನರಾವ ಪಾಟೀಲ, ಸುರೇಶ ಗಾಣಿಗೇರ, ಡಾ.ಅರವಿಂರಾವ ಕಾರ್ಚಿ, ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ, ಸುನೀಲ ಅವಟಿ, ಪ್ರಕಾಶ ಕೋರ್ಬು, ರಾಜು ಮದನೆ, ವಿಶ್ವನಾಥ ನಾಮದಾರ, ಅನೀಲ ಸತ್ತಿ, ಅನುಪ ಶೆಟ್ಟಿ, ಪೆಕಾಶ ಗಾಣಿಗೇರ, ರಾಜು ಹರಳೆ, ವಿಜಯ ಹರಳೆ ದೊಂಡಿ ಹರಳೆ, ಅಭಿಯಂತರರಾದ ಜೆ,ಎ. ಹಿರೇಮಠ ಚಿಕ್ಕ ನೀರಾವರಿ ಇಲಾಖೆ ಅಭಿಯಂತರ ಸಾಗರ ಪುಜಾರಿ ಸೇರಿದಂತೆ ಅನೇಕರು ಇದ್ದರು.