ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಸೇರ್ಪಡೆ| ಜೆ. ಪಿ. ನಡ್ಡಾ ಉಪಸ್ಥಿತಿಯಲ್ಲಿ ಬಿಜೆಪಿಗೆ ಸಿಂಧಿಯಾ| ಸೇರ್ಪಡೆಗೊಂಡ ಒಂದೇ ಗಂಟೆಯೊಳಗೆ ಸಿಕ್ತು ಗುಡ್ ನ್ಯೂಸ್
ನವದೆಹಲಿ[ಮಾ.11]: ಕೊನೆಗೂ ಜ್ಯೋತಿರಾದಿತ್ಯ ಸಿಂಧಿಯಾ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಉಪಸ್ಥಿತಿಯಲ್ಲಿ ಸಿಂಧಿಯಾ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಗ್ವಾಲಿಯರ್ ರಾಜವಂಶದ 'ಮಹಾರಾಜ' ಸಿಂಧಿಯಾರನ್ನು ಕೇಸರಿ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದ್ದಾರೆ. ಬಿಜೆಪಿ ಪಾಳಯಕ್ಕೆ ಸೇರ್ಪಡೆಗೊಂಡ ಸಿಂಧಿಯಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಾಡ್ಡಾ ಜೊತೆ ಪಿಎಂ ಮೋದಿ, ಗೃಹ ಸಚಿವ ಅಮಿತ್ ಶಾಗೆ ಧನ್ಯವಾದ ಸಲ್ಲಿಸಿದ್ದಾರೆ.
श्री ने भाजपा राष्ट्रीय अध्यक्ष श्री की मौजूदगी में भाजपा की सदस्यता ग्रहण की।
लाइव देखें https://t.co/eAbq3XxdWv pic.twitter.com/tXAox6l0sI
ಇನ್ನು ಬಿಜೆಪಿ ಸದಸ್ಯತ್ವ ಪಡೆದ ಕೇವಲ ಒಂದು ಗಂಟೆಯೊಳಗೆ ಸಿಮಧಿಯಾಗೆ ರಾಜ್ಯಸಭೆ ಟಿಕೆಟ್ ನಿಡುವುದಾಗಿಯೂ ಬಿಜೆಪಿ ಘೋಷಿಸಿದೆ. ಇವನ್ನು ಹೊರತುಪಡಿಸಿ ಮಧ್ಯಪ್ರದೇಶದಿಂದ ಹರ್ಷ ಚೌಹಾಣ್‌ರಿಗೂ ರಾಜ್ಯಸಭೆ ಟಿಕೆಟ್ ನೀಡುವುದಾಗಿ ಘೋಷಿಸಿದೆ.
मैं सर्वप्रथम आदरणीय नड्डा जी, प्रधानमंत्री नरेन्द्र मोदी जी और गृह मंत्री श्री अमित शाह जी को धन्यवाद देना चाहूंगा कि आपने मुझे अपने परिवार में आमंत्रित किया और एक स्थान दिया: श्री https://t.co/eAbq3XxdWv pic.twitter.com/Xku93LRMn2
— BJP (@BJP4India)ಸದ್ಯ ಬಿಜೆಪಿಗೆ ಸೇರ್ಪಡೆಗೊಂಡಿರುವ ಸಿಂಧಿಯಾರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಬಳಿಕ ಮೋದಿ ಕ್ಯಾಬಿನೆಟ್‌ನಲ್ಲಿ ಪ್ರಮುಖ ಖಾತೆ ನೀಡುವ ಮಾತುಗಗಳೂ ಜೋರಾಗಿವೆ.
ಮಾರ್ಚ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ