
ರಾಂಚಿ(ಜು.26): ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಹಲವು ಪಕ್ಷದ ನಾಯಕರು ಅಡ್ಡಮತದಾನ ಮಾಡಿರುವ ವಿಚಾರ ಜಾರ್ಖಂಡನ್ ಮೈತ್ರಿ ಸರ್ಕಾರಕ್ಕೆ ತೀವ್ರ ಹಿನ್ನಡೆ ತಂದಿದೆ. ಇದರ ಬೆನ್ನಲ್ಲೇ ಆಡಳಿತ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ ಸ್ಫೋಟಕ ಹೇಳಿಕೆ ನೀಡಿ ಇದೀಗ ಹೊಸ ಸಂಚಲನ ಸೃಷ್ಟಿಸಿದೆ. ಬಿಜೆಪಿ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಹೀಗಾಗಿ 16 ಬಿಜೆಪಿ ಶಾಸಕರು ಮುಕ್ತಿ ಮೋರ್ಚಾ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಈ ಶಾಸಕರು ಬಿಜಿಪಿಗೆ ಗುಡ್‌ಬೈ ಹೇಳಲಿದ್ದಾರೆ ಎಂದು ಜಾರ್ಖಂಡ್ ಮುಕ್ತಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ. ಇದೀಗ ರಾಜಕೀಯ ಸಂಚಲನ ಸೃಷ್ಟಸಿದೆ. ಜಾರ್ಖಂಡ್‌ನಲ್ಲಿ ಹೊಸ ಸರ್ಕಾರ ರಚನೆ ಕುರಿತು ಮಾತುಗಳು ದಟ್ಟವಾಗುತ್ತಿದ್ದಂತೆ, ಹೊಸ ದಾಳ ಉರುಳಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಪರ ಜಾರ್ಖಂಡ್ ಮೈತ್ರಿ ಪಕ್ಷದ ಹಲವು ನಾಯಕರು ಮತ ಹಾಕಿದ್ದಾರೆ. ಇದು ಆಡಳಿತ ಪಕ್ಷದ ಮೈತ್ರಿಗೆ ತೀವ್ರ ಹಿನ್ನಡೆ ತಂದಿದೆ. ಸಿಎಂ ಹೇಮಂತ್ ಸೊರೆನ್ ತಮ್ಮ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಮಹಾರಾಷ್ಟ್ರ ರೀತಿ, ಜಾರ್ಖಂಡ್‌ನಲ್ಲೂ ಬಿಜೆಪಿ ಸರ್ಕಾರ ರಚಿಸಲಿದೆ ಅನ್ನೋ ಮಾತುಗಳು ದಟ್ಟವಾಗಿತ್ತು. ಇದರ ಬೆನ್ನಲ್ಲೇ ಸುಪ್ರೀಯೋ ಭಟ್ಟಾಚಾರ್ಯ ಹೇಳಿಕೆ ಹೊಸ ಗುದ್ದಾಟಕ್ಕೆ ದಾರಿ ಮಾಡಿದೆ.
Jharkhand : ಬಿಪಿಎಲ್ ಕುಟುಂಬಕ್ಕೆ ತಿಂಗಳಿಗೆ 250 ರು. ಪೆಟ್ರೋಲ್ ಸಬ್ಸಿಡಿ!
ಜಾರ್ಖಂಡ್ ಬಿಜೆಪಿ ಪಕ್ಷದಲ್ಲಿ ಬಣರಾಜಕೀಯ ಹೆಚ್ಚಾಗಿದೆ. ಪಕ್ಷದಲ್ಲಿರುವ ಬಹುತೇಕರಿಗೆ ನೆಮ್ಮದಿಯೇ ಇಲ್ಲದಾಗಿದೆ. ಉಸಿರುಗಟ್ಟುವ, ಸ್ವಾತಂತ್ರ್ಯವಿಲ್ಲದ ವಾತಾವರಣದಿಂದ ಹೊರಬಲು ನಾಯಕರು ಯತ್ನಿಸುತ್ತಿದ್ದಾರೆ. ಹೀಗಾಗಿ ಮುಕ್ತಿ ಮೋರ್ಚಾ ಸಂಪರ್ಕಿಸಿದ್ದಾರೆ. 16 ಶಾಸಕರು ಬಿಜೆಪಿ ತೊರೆಯಲು ಸಜ್ಜಾಗಿದ್ದಾರೆ. ಮುಕ್ತಿ ಮೋರ್ಚಾ ಈ ನಾಯಕರನ್ನು ಸ್ವಾಗತಿಸುತ್ತದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಆದಿವಾಸಿಗಳು ಹಿಂದೂಗಳಲ್ಲ : ಜಾರ್ಖಂಡ್ ಸಿಎಂ ಹೇಳಿಕೆಗೆ ಬಾರಿ ವಿರೋಧ!
ಒಂದೆಡೆ ಅಡ್ಡ ಮತದಾನ ಹಾಗೂ ಮೈತ್ರಿ ಪಕ್ಷಗಳ ನಡುವಿನ ಒಡಕು ಬಿಜೆಪಿಗೆ ವರವಾಗಲಿದೆ ಅನ್ನೋ ಚರ್ಚೆ ಮತ್ತೊಂದೆಡೆ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಹೇಮಂತ್ ಸೊರನೆ ಸರ್ಕಾರಕ್ಕೆ ಹೈಕೋರ್ಟ್ ಹಾಗೂ ಚುನಾವಣಾ ಆಯೋಗ ಚಾಟಿ ಬೀಸಿದೆ. ರಾಜಕೀಯಾವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮುಕ್ತಿ ಮೋರ್ಚಾ ಪಕ್ಷ ಇದೀಗ ಹೊಸ ದಾಳ ಉರುಳಿಸಿದೆ ಅನ್ನೋ ಮಾತುಗಳು ಇವೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪಾಳೆಯದ ಅಭ್ಯರ್ಥಿಯಾಗಿದ್ದ ಯಶವಂತ ಸಿನ್ಹಾ ವಿರುದ್ಧ ದ್ರೌಪದಿ ಮುರ್ಮು ಅವರು ಶೇ.64ರಷ್ಟುಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಸಿನ್ಹಾ ಅವರಿಗೆ ಆಂಧ್ರಪ್ರದೇಶ, ಸಿಕ್ಕಿಂ, ನಾಗಾಲ್ಯಾಂಡ್‌ನಲ್ಲಿ ಒಂದು ಮತವೂ ಸಿಕ್ಕಿಲ್ಲ. ಸಿನ್ಹಾ ಅವರ ತವರು ರಾಜ್ಯ ಜಾರ್ಖಂಡ್ ಆಗಿದ್ದರೂ ಅಲ್ಲಿನ 81 ಶಾಸಕರ ಪೈಕಿ ಕೇವಲ 9 ಮಂದಿ ಮಾತ್ರ ಅವರ ಪರ ಮತ ಚಲಾವಣೆ ಮಾಡಿದ್ದಾರೆ. ಇನ್ನುಳಿದ ಮತಗಳು ದ್ರೌಪದಿ ಮುರ್ಮುಗೆ ಬಿದ್ದಿದೆ. ಇದು ಮೈತ್ರಿ ಪಕ್ಷದ ಒಡಕಿಗೆ ನಾಂದಿ ಹಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.