ಸಿಎಂ ಹೇಮಂತ್ ಸೊರೆನ್ ಶಾಸಕ ಸ್ಥಾನದಿಂದ ಅನರ್ಹ, ಮುಖ್ಯಮಂತ್ರಿ ಸ್ಥಾನಕ್ಕೆ ಶೀಘ್ರದಲ್ಲೇ ರಾಜೀನಾಮೆ?

By Suvarna NewsFirst Published Aug 26, 2022, 6:09 PM IST
Highlights

ಗಣಿ ಲೈಸೆನ್ಸ್ ನವೀಕರಿಸಿದ ಪ್ರಕರಣದಿಂದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್‌ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ.

ರಾಂಚಿ(ಆ.26):  ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಮ್ಮ ಶಾಸಕ ಸ್ಥಾನದಿಂದ ಅನರ್ಹರಾಗಿದ್ದಾರೆ. ಕೇಂದ್ರ ಚುನಾವಣಾ ಆಯೋಗ ನೀಡಿದ ವರದಿ ಪ್ರಕಾರ ಜಾರ್ಖಂಡ್ ರಾಜ್ಯಪಾಲ ರಮೇಶ್ ಬೈಸ್, ಸಿಎಂ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿದೆ. ಇದರಿಂದ ಸೊರೆನ್ ತಮ್ಮ ವಿಧಸಭಾ ಸ್ಥಾನದಿಂದ ಅನರ್ಹರಾಗಿದ್ದಾರೆ.  ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ ಹೇಮಂತ್ ಸೊರೆನ್ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಮತ್ತೆ ಚುನಾವಣೆಯಲ್ಲಿ ಗೆದ್ದು ಬರುವವರೆಗೂ ಸೊರೆನ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿದೆ. ಇದೀಗ ಹೇಮಂತ್ ಸೊರೆನ್ ತಮ್ಮ ಪತ್ನಿ ಹಾಗೂ ತಾಯಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಕುರಿತು ಭಾರಿ ಚರ್ಚೆಯಾಗುತ್ತಿದೆ

ಸಂವಿಧಾನದ ಲೆಜಿಸ್‌ಲೇಟರ್ 10ನೇ ಶೆಡ್ಯೂಲ್ ಪ್ರಕಾರ ಯಾವುದೇ ಮಂತ್ರಿಯನ್ನು ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರೆ ಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಇದೀಗ ಹೇಮಂತ್ ಸೊರೆನ್‌ಗೂ ಅನ್ವಯವಾಗಲಿದೆ. ಹೀಗಾಗಿ ಸೊರೆನ್ ಶೀಘ್ರದಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಮುಂದಿನ 6 ತಿಂಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣೆ ನಡೆಸಲಿದೆ. ಈ ಚುನಾವಣೆಯಲ್ಲಿ ಗೆದ್ದು ಬಂದ ಬಳಿಕ ಸೊರೆನ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಯಲು ಸಾಧ್ಯವಿದೆ. ಇದೀಗ ಶಾಸಕ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಹಂಗಾಮಿ ಮುಖ್ಯಮಂತ್ರಿ ನೇಮಕಕ್ಕೆ ಜಾರ್ಖಂಡ್‌ನಲ್ಲಿ ತಯಾರಿ ನಡೆದಿದೆ.

ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

81 ಸದಸ್ಯ ಬಲದ ಜಾರ್ಖಂಡ್‌ ವಿಧಾನಸಭೆಯಲ್ಲಿ ಜೆಎಂಎಂ 30, ಕಾಂಗ್ರೆಸ್‌ 18, ಬಿಜೆಪಿ 26, ಉಳಿದವರು 7 ಸ್ಥಾನ ಹೊಂದಿದ್ದಾರೆ. ಸರ್ಕಾರ ರಚನೆ ಮತ್ತು ಅದರ ಮುಂದುವರೆಯುವಿಕೆಯಲ್ಲಿ ಹೇಮಂತ್‌ ಪಾತ್ರ ಮುಖ್ಯ. ಅವರು ಸ್ಥಾನ ಕಳೆದುಕೊಂಡರೆ, ಶಾಸಕರ ಪಕ್ಷಾಂತರ ಮತ್ತಿತರೆ ಭೀತಿ ಇದೆ.

ಅನರ್ಹರಾಗಲು ಕಾರಣವೇನು?
ತಮ್ಮ ಮಾಲೀಕತ್ವದ ಕಂಪನಿಗೆ ಗಣಿ ಲೈಸೆನ್ಸ್‌ ನವೀಕರಿಸಿಕೊಟ್ಟಪ್ರಕರಣ ಸಂಬಂಧ ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರನ್ನು ರಾಜ್ಯಪಾಲರು ಅನರ್ಹಗೊಳಿಸಿದ್ದಾರೆ.  ಕೇಂದ್ರ ಚುನಾವಣಾ ಆಯೋಗವು ಕುರಿತು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಇದರಿಂದಾಗಿ ಸೊರೇನ್‌ ಅವರಿಗೆ ಹಾಗೂ ಅವರು ಮುನ್ನಡೆಸುತ್ತಿರುವ ಜೆಎಂಎಂ- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರಕ್ಕೆ ಇದೀಗ ಸಂಕಷ್ಟದ ಸ್ಥಿತಿ ಎದುರಾಗಿದೆ. ಆದರೆ ಸರ್ಕಾರಕ್ಕೆ ಯಾವುದೇ ವಿಘ್ನ ಇಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಸೊರೆನ್ ನಮ್ಮ ನಾಯಕ. ಹಂಗಾಮಿ ನಾಯಕ ರಾಜ್ಯ ಮುನ್ನಡೆಸಲಿದ್ದಾರೆ. ಸರ್ಕಾರ ಪತನದ ಭೀತಿ ಇಲ್ಲ ಎಂದು ಜಾರ್ಖಂಡ್ ಕಾಂಗ್ರೆಸ್ ಸ್ಪಷ್ಟಪಡಿಸಿದೆ.  

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ತಮ್ಮ ಸ್ಥಾನದಿಂದ ಕೆಳಗಿಳಿದ ಬಳಿಕ ತಮ್ಮ ತಾಯಿ ರೂಪಿ, ಪತ್ನಿ ಕಲ್ಪನಾಗೆ ಸಿಎಂ ಸ್ಥಾನ ನೀಡುವ ಸಾಧ್ಯತೆ ಇದೆ. ಇತ್ತ ಚುನಾವಣಾ ಆಯೋಗದ ಶಿಫಾರಸ್ಸನ್ನು ಹೇಮಂತ್‌ ಸುಪ್ರೀಂಕೋರ್ಚ್‌ನಲ್ಲಿ ಪ್ರಶ್ನಿಸುವ ಅವಕಾಶವೂ ಇದೆ.

ಬಿಜೆಪಿ ತೊರೆಯಲು ಸಜ್ಜಾದ 16 ಶಾಸಕರು, ಮುಕ್ತಿ ಮೋರ್ಚಾ ಹೇಳಿಕೆಯಿಂದ ರಾಜಕೀಯ ತಲ್ಲಣ!

ಕಾಂಗ್ರೆಸ್‌ ಜೊತೆಗೂಡಿ ಜಾರ್ಖಂಡ್‌ನಲ್ಲಿ ಮೈತ್ರಿ ಸರ್ಕಾರ ನಡೆಸುತ್ತಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ ಮುಖ್ಯಸ್ಥ, ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಇದೀಗ ಸಿಎಂ ಪಟ್ಟಕಳೆದುಕೊಳ್ಳುವ ಭೀತಿಗೆ ತುತ್ತಾಗಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ತಮ್ಮ ಹೆಸರಿನಲ್ಲಿರುವ ಕಲ್ಲುಗಣಿ ಕಂಪನಿ ಲೈಸೆನ್ಸ್‌ ನವೀಕರಿಸಿಕೊಂಡ ಪ್ರಕರಣದಲ್ಲಿ 1951ರ ಜನಪ್ರತಿನಿಧಿ ಕಾಯ್ದೆ, ಸೆಕ್ಷನ್‌ 9ಎ ಉಲ್ಲಂಘನೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸೊರೇನ್‌ ಅವರ ಶಾಸಕತ್ವವನ್ನು ಅನರ್ಹಗೊಳಿಸುವಂತೆ ಕೇಂದ್ರ ಚುನಾವಣಾ ಆಯೋಗವು, ಜಾರ್ಖಂಡ್‌ ರಾಜ್ಯಪಾಲ ರಮೇಶ್‌ ಬೈಸ್‌ ಅವರಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.

click me!