ಸಿಎಂ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಗರ್ವಭಂಗ, ಜೆಡಿಎಸ್‌ಗೆ ಒಲಿದ ಅಧಿಕಾರ

By Suvarna NewsFirst Published Jul 1, 2020, 5:06 PM IST
Highlights

ಎಪಿಎಂಸಿ ಅಧ್ಯಕ್ಷ‌ ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ಮುಖಭಂಗ ಅನುಭವಿಸಿದೆ. ಈ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಉಂಟಾಗಿದೆ. 

ಶಿವಮೊಗ್ಗ, (ಜುಲೈ.01): ಶಿವಮೊಗ್ಗ ಎಪಿಎಂಸಿ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿಗೆ ಮುಖಭಂಗವಾಗಿದೆ.   

ಇಂದು (ಬುಧವಾರ) ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮತ್ತೆ ಜೆಡಿಎಸ್ ನ ದುಗ್ಗಪ್ಪಗೌಡ ಆಯ್ಕೆಯಾಗಿದ್ರೆ, ಜೆಡಿಎಸ್‌ನ ಬಾಬಣ್ಣ ಉಪಾಧ್ಯಕ್ಷರಾ ಆಯ್ಕೆಯಾದರು.

ಎಪಿಎಂಸಿ ಎಲೆಕ್ಷನ್: ಬಿಜೆಪಿಗರಿಂದ ಕಾಂಗ್ರೆಸ್‌ಗೆ ಮತ..!

ಎಪಿಎಂಸಿಯಲ್ಲಿ ಜೆಡಿಎಸ್ 8, ಬಿಜೆಪಿ 9 ಸದಸ್ಯರ ಸಂಖ್ಯಾ ಬಲ ಹೊಂದಿದ್ದು, ಬಿಜೆಪಿ ಸದಸ್ಯನೋರ್ವ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾವಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಬಹುಮತ ಹೊಂದಿದ್ದರೂ ಬಿಜೆಪಿಗೆ ಅಧಿಕಾರ ತಪ್ಪಿದೆ.

ಈ ಬಾರಿ ಎಪಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಮೂವರನ್ನು ಎಪಿಎಂಸಿಗೆ ನಾಮನಿರ್ದೇಶನ ಮಾಡಿ ಬಿಜೆಪಿ ತನ್ನ ನಿರ್ದೇಶಕರ ಸಂಖ್ಯೆಯನ್ನು 9ಕ್ಕೆ ಹೆಚ್ಚಿಸಿಕೊಂಡಿತ್ತು.

ಆದ್ರೆ, ಸದಸ್ಯನೋರ್ವ ಜೆಡಿಎಸ್ ಅಭ್ಯರ್ಥಿ ಪರ ಮತ ಚಲಾವಣೆ ಮಾಡಿದ್ದರಿಂದ ಬಿಜೆಪಿಗೆ ಅಧಿಕಾರ ತಪ್ಪಿದೆ.

click me!