council Election Karnataka: 'ಭದ್ರ ಕೋಟೆಯಲ್ಲಿ ಜೆಡಿಎಸ್ ಗೆಲುವು ಖಚಿತ'

Kannadaprabha News   | Asianet News
Published : Dec 01, 2021, 02:03 PM IST
council Election Karnataka: 'ಭದ್ರ ಕೋಟೆಯಲ್ಲಿ ಜೆಡಿಎಸ್ ಗೆಲುವು ಖಚಿತ'

ಸಾರಾಂಶ

ಡಿ.10ಕ್ಕೆ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆ  ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡರನ್ನು ಗೆಲ್ಲಿಸುವ ಮೂಲಕ ಮಂಡ್ಯ ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಲು ಸಲಹೆ

 ಮಂಡ್ಯ (ಡಿ.01):   ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್ (JDS) ಅಭ್ಯರ್ಥಿ ಅಪ್ಪಾಜಿ ಗೌಡರನ್ನು ಗೆಲ್ಲಿಸುವ ಮೂಲಕ ಮಂಡ್ಯ (Mandya) ಜಿಲ್ಲೆ ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ  (Nikhil Kumaraswamy) ಕರೆ ನೀಡಿದರು. ತಾಲೂಕಿನ ವಿವಿಧೆಡೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ  ಬಿರುಸಿನ ಪ್ರಚಾರ ಸಭೆ ನಡೆಸಿ ಮಾತನಾಡಿ, ಜೆಡಿಎಸ್(JDS) ಬೆಂಬಲಿತ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿರುವುದರಿಂದ ಅಪ್ಪಾಜಿ ಗೌಡ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು. ಶಾಸಕ ಸಿ.ಎಸ್.ಪುಟ್ಟರಾಜು (CS Puttaraju) ಕಾಂಗ್ರೆಸ್ (Congress) ಸೇರುತ್ತಾರೆ ಎಂಬುದಾಗಿ ಕ್ಷೇತ್ರದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರ ವಾದ ಮಾತು. ಪುಟ್ಟರಾಜು ನಮ್ಮ ಕುಟುಂಬದ ಸದಸ್ಯರು, ನನ್ನ ತಂದೆಯ ಸಮಾನರು ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಪರಿಷತ್ ಚುನಾವಣೆ ನಡೆಯುತ್ತಿದೆ ಯಾವುದೇ ಕಾರಣಕ್ಕೂ ಅವರು ಪಕ್ಷ ಬಿಡುವ ಮಾತೆ ಇಲ್ಲ ಎಂದರು. 

ಕಳೆದ ಲೋಕಸಭಾ ಚುನಾವಣೆಯಲ್ಲಿ (Loksabha Election ) ನನ್ನ ಪಕ್ಷದ ಎಲ್ಲ ಶಾಕಸರು, ಮುಖಂಡರು, ಕಾರ್ಯಕರ್ತರು ನನಗೆ ಪ್ರಾಮಾಣಿಕ ವಾಗಿ ಮತ ನೀಡಿದ್ದಾರೆ. ಕೆಲವರ ಕುತಂತ್ರದಿಂದ ಸೋಲಾಗಿರ ಬಹುದು. ನನ್ನ ಸೋಲಿನಿಂದ ಪಕ್ಷದ ಕಾರ್ಯಕರ್ತರ ಮನಸ್ಸಿಗೆ ನೋವುಂಟಾಗಿದೆ ಎನ್ನುವುದು ನನಗೆ ಅರ್ಥವಾಗಿದೆ. ಯಾರೂ ಸಹ ಬೇಸರವಾಗಬೇಡಿ ಎಂದರು. 

ಮುಂದಿನ ವಿಧಾನಸಭೆ ಚುನಾವಣೆ (Assembly Election) ದಿಕ್ಸೂಚಿಯಾಗಿರುವುದರಿಂದ ಸದಸ್ಯರು ಯಾವುದೇ ಒತ್ತಡಕ್ಕೂ ಮಣಿಯದೆ ಪರಿಷತ್ ಚುನಾವಣೆ (MLC Election) ಯಲ್ಲಿ ಅಪ್ಪಾಜಿ ಗೌಡರನ್ನು ಗೆಲ್ಲಿಸಬೇಕು. ಎಚ್.ಡಿ.ದೇವೇಗೌಡರು (HD Devegowda), ಎಚ್.ಡಿ.ಕುಮಾರಸ್ವಾಮಿ (HD kumaraswamy) ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು. 

ಜಕ್ಕನಹಳ್ಳಿ ಗ್ರಾಮದಲ್ಲಿ ಜಕ್ಕನಹಳ್ಳಿ ಜಿಪಂ ಕ್ಷೇತ್ರದಲ್ಲಿ ಮೇಲು ಕೋಟೆ, ಬಳಘಟ್ಟ, ಹಳೇಬೀಡು, ಸುಂಕಾತೊಣ್ಣೂರು, ಜಕ್ಕನಹಳ್ಳಿ ಗ್ರಾಪಂಗಳು, ಮಾಣಿಕ್ಯನಹಳ್ಳಿ ಗ್ರಾಮದಲ್ಲಿ ಲಕ್ಷ್ಮೀಸಾಗರ ಜಿಪಂ ಕ್ಷೇತ್ರದ ಕೆ.ಬೆಟ್ಟಹಳ್ಳಿ, ಮಾಣಿಕ್ಯನಹಳ್ಳಿ, ನಾರಾಯಣಪುರ, ಟಿ. ಎಸ್.ಛತ್ರ, ಲಕ್ಷ್ಮೀಸಾಗರ, ಕೆ.ಬೆಟ್ಟಹಳ್ಳಿ ಗ್ರಾಪಂಗಳು, ಬೇಬಿಬೆಟ್ಟ ದಲ್ಲಿ ಚಿನಕುರಳಿ ಜಿಪಂ ಕ್ಷೇತ್ರ ವ್ಯಾಪ್ತಿಯ ಚಿನಕುರಳಿ, ಗುಮ್ಮನಹಳ್ಳಿ, ಬನ್ನಂಗಾಡಿ, ಡಿಂಕಾ, ಹೊನಗಾನಹಳ್ಳಿ ಗ್ರಾಪಂಗಳು, ಅರಳಕುಪ್ಪೆ ಗ್ರಾಮದಲ್ಲಿ ಕ್ಯಾತನಹಳ್ಳಿ ಜಿಪಂ ಕ್ಷೇತ್ರದ ಅರಳಕುಪ್ಪೆ, ಕಟ್ಟೇರಿ, ಕ್ಯಾತನಹಳ್ಳಿ, ಹರವು ಗ್ರಾಪಂಗಳು ಹಾಗೂ ಪಾಂಡವಪುರ ಪಟ್ಟಣ ದಲ್ಲಿ ಪುರಸಭೆ ಹಾಗೂ ಚಿಕ್ಕಾಡೆ ಜಿಪಂ ಕ್ಷೇತ್ರದ ಕೆನ್ನಾಳು, ಚಿಕ್ಕಾಡೆ, ಕನಗನಮರಡಿ, ದೊಡ್ಡಬ್ಯಾಡರಹಳ್ಳಿ, ಹಿರೇಮರಳಿ ಗ್ರಾಪಂಗಳು ಜೆಡಿಎಸ್ ಬೆಂಬಲಿತ ಸದಸ್ಯರು ಹಾಗೂ ಮುಖಂಡರ ಸಭೆ ನಡೆಸಿ ಮತಯಾಚನೆ ಮಾಡಿದರು. 

ಈ ವೇಳೆ ಶಾಸಕ ಸಿ.ಎಸ್.ಪುಟ್ಟರಾಜು (CS Puttaraju), ಅಭ್ಯರ್ಥಿ ಅಪ್ಪಾಜಿಗೌಡ (AppajiGowda), ಪತ್ನಿ ಮಧುರ, ಜೆಡಿಎಸ್ (JDS) ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮಂಜು, ಮನ್ಮುಲ್ ಅಧ್ಯಕ್ಷ ಬಿ.ಆರ್. ರಮೇಶ್, ನಲ್ಲಿಗೆರೆಬಾಲು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶ ವಂತ್ ಕುಮಾರ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಧರ್ಮರಾಜು, ಕಾರ್ಯಾಧ್ಯಕ್ಷ ಎಸ್. ಎ.ಮಲ್ಲೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ವಾಸು, ನಿರ್ದೇಶಕ ಕಣಿವೆಯೋಗೇಶ್, ಪುರಸಭೆ ಅಧ್ಯಕ್ಷೆ ಅರ್ಚನ ಇದ್ದರು.  

ಅಪ್ಪಾಜಿಗೌಡರ ಗೆಲುವು ಖಚಿತ:    ಅಪ್ಪಾಜಿಗೌಡರ ಗೆಲುವು ಖಚಿತ ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಜೆಡಿಎಸ್ ಅಭ್ಯರ್ಥಿ ಗೆಲ್ಲುವುದು ಖಚಿತ. ಬಿಜೆಪಿ (BJP), ಕಾಂಗ್ರೆಸ್ (Congress) ಅಭ್ಯರ್ಥಿಗಳು ಎರಡನೇ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿವೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ವ್ಯಂಗ್ಯವಾಡಿದರು. ಈ ಚುನಾವಣೆಯಲ್ಲಿ ಯಾವ ತಂತ್ರಗಾರಿಕೆಯೂ ನಡೆ ಯೋದಿಲ್ಲ. ನಮ್ಮ ಅಭ್ಯರ್ಥಿ ಎನ್.ಅಪ್ಪಾಜಿಗೌಡರು 1 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಭ್ಯರ್ಥಿ ಎನ್.ಅಪ್ಪಾಜಿ ಗೌಡ ಮಾತನಾಡಿ, ಪಕ್ಷಗ ವರಿಷ್ಠ ನಾಯಕರು ನನ್ನನ್ನು 2ನೇ ಬಾರಿಗೆ ಅಭ್ಯರ್ಥಿಯಾಗಿ ನಿಲ್ಲಿಸಿದ್ದಾರೆ. ಕ್ಷೇತ್ರದ ಮತದಾ ರರನ್ನು ನನಗೆ ಮತ ನೀಡಿಗೆ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದರು. ಇದೇ ವೇಳೆ ಡಿಂಕಾ ಗ್ರಾಪಂ ಉಪಾಧ್ಯಕ್ಷ ಹಳೇಸಾಯಪನಹಳ್ಳಿ ರವಿ ಅವರು ರೈತ ಸಂಘ ತೊರೆದು ನಿಖಿಲ್ ಕುಮಾರಸ್ವಾಮಿ, ಶಾಸಕ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ