ಲಾಕ್‌ಡೌನ್ ಮಧ್ಯೆ ಕೇಂದ್ರ ಸರ್ಕಾರ ನಡೆಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಗರಂ ಆಗಿದ್ದಾರೆ.
ಹಾಸನ, (ಏ.21): ಈ ಸಂದರ್ಭದಲ್ಲಿ ರೈತರ ಕುರಿತು ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಹೋರಾಟ ಅವಶ್ಯಕ. ರೈಲಿನ ಸಂಚಾರ ಇದ್ದಿದ್ದರೆ ನಾನೇ ರೈತರನ್ನು ದೆಹಲಿಗೆ ಕರೆದುಕೊಂಡು ಹೋಗಿ ಹೋರಾಟ ಮಾಡುತ್ತಿದ್ದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ.
ಇಂದು (ಸೋಮವಾರ) ಹಾಸನದಲ್ಲಿ ಮಾತನಾಡಿದ ದೇವೇಗೌಡರು, ಈ ಲಾಕ್‌ಡೌನ್ ಮಧ್ಯೆ ರೈತರು ಬೆಳೆದ ಬೆಳೆ ಕೊಳ್ಳುವವರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮತ್ತೊಮ್ಮೆ ಸರ್ಕಾರದೊಂದಿಗೆ ಚರ್ಚಿಸುತ್ತೇನೆ. ಈಗಾಗಲೇ ಅನೇಕ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದರು.
ಪ್ರಧಾನಿಗಳಿಗೆ ನಮ್ಮ ಬೆಂಬಲ ಎಂದ ದೇವೇಗೌಡ್ರು, ಆದ್ರೂ ಮೋದಿ ಮೇಲೆ ಮುನಿಸಿಕೊಂಡ್ರು..!
ಈ ಸಂದರ್ಭದಲ್ಲಿ ಬಡವರು ಹಾಗೂ ರೈತರನ್ನ ಉಳಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ರೈತರು ಬೆಳೆದ ತರಕಾರಿಗಳನ್ನು ಬೇಡಿಕೆ ಇದ್ದಲ್ಲಿಗೆ ಕಳಿಸುವ ಪ್ರಯತ್ನ ಮಾಡಬೇಕು. ಅನೇಕ ರಾಜಕೀಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಈ ಕೆಲಸ ಮಾಡುತ್ತಿದ್ದಾರೆ. ಆದ್ರೆ ಈ ಬಗ್ಗೆ ಸರ್ಕಾರವೂ ಗಮನಹರಿಸಬೇಕಿದೆ ಎಂದು ಆಗ್ರಹಿಸಿದರು.
ರೈತರ ಕುರಿತು ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆ ಹೋರಾಟ ಅವಶ್ಯಕ. ರೈಲಿನ ಸಂಚಾರ ಇದ್ದಿದ್ದರೆ ನಾನೇ ರೈತರನ್ನು ದೆಹಲಿಗೆ ಕರೆದುಕೊಂಡು ಹೋಗಿ ಹೋರಾಟ ಮಾಡುತ್ತಿದ್ದೆ. ಈ ಹಿಂದೆಯೂ ಇದೇ ರೀತಿ ಹೋರಾಟ ಮಾಡಿದ್ದೇನೆ. ಈಗಲೂ ಮಾಡಲು ತೊಂದರೆ ಇಲ್ಲ. ರೈಲು ಸಂಚಾರ ಪ್ರಾರಂಭವಾದರೆ ಹೋರಾಟ ಮಾಡುತ್ತೇನೆ ಎಂದರು.