* ಸಿಎಂ ಇಬ್ರಾಹಿಂಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ
* ಗಳಗಳನೆ ಅತ್ತ ಹಾಲಿ ರಾಜ್ಯಾಧ್ಯಕ್ಷ ಎಚ್‌ಕೆ ಕುಮಾರಸ್ವಾಮಿ
* ಒಬ್ಬ ಅಧ್ಯಕ್ಷ ಸ್ಥಾನ ನಿಭಾಯಿಸುವುದರಲ್ಲಿ ನನಗೆ ಸಂಪೂರ್ಣ ಜಾವಾಬ್ದಾರಿ ಸಿಗಲಿಲ್ಲ ಎಂದ ಕುಮಾರಸ್ವಾಮಿ
ಹಾಸನ ,(ಏ.15): ಕಾಂಗ್ರೆಸ್ ತೊರೆದಿರುವ ಸಿ.ಎಂ. ಇಬ್ರಾಹಿಂ (CM Irabhim) ಏ.17ರಂದು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಪಕ್ಷದ ಕೇಂದ್ರ ಕಚೇರಿ ಜೆ.ಪಿ.ಭವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಲಿದ್ದಾರೆ.
ಅಂದೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಹಾಲಿ ರಾಜ್ಯಾಧ್ಯಕ್ಷರಾಗಿರುವ ಎಚ್.ಕೆ.ಕುಮಾರಸ್ವಾಮಿ (HK Kumaraswamy) ಅವರಿಗೆ ಪಕ್ಷದ ಸಂಸದೀಯ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಉದ್ದೇಶಿಸಲಾಗಿದೆ.
JDS ರಾಜ್ಯಾಧ್ಯಕ್ಷ ಸ್ಥಾನ C.M ಇಬ್ರಾಹಿಂ ಹೆಗಲಿಗೆ.?
ಗದ್ಗದಿತರಾದ ಹಾಲಿ ಅಧ್ಯಕ್ಷ
ಹೌದು.... ಪಕ್ಷ ನನಗೆ ಒಳ್ಳೆಯ ಹುದ್ದೆ ಕೊಟ್ಟಿತ್ತು. ಅದರೆ ಕಾರ್ಯಕರ್ತರ ಬಳಿಗೆ ಹೋಗಿ ಕೆಲಸ ಮಾಡಲು ಆಗಲಿಲ್ಲ ಎಂದು ಹೇಳುವಾಗ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಗದ್ಗದಿತರಾದರು.
ಈ ಎರಡು ವರ್ಷಗಳಲ್ಲಿ ನನಗೆ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಲು ಆಗಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಕುಮಾರಸ್ವಾಮಿ ಅವರ ಸೂಚನೆಯಂತೆ ನಾನು ನನ್ನ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡಲಿದ್ದೇನೆ. ಒಬ್ಬ ಅಧ್ಯಕ್ಷ ಸ್ಥಾನ ನಿಭಾಯಿಸುವುದರಲ್ಲಿ ನನಗೆ ಸಂಪೂರ್ಣ ಜಾವಾಬ್ದಾರಿ ಸಿಗಲಿಲ್ಲ. ಆರು ಭಾರಿ ಶಾಸಕನಾಗಿದ್ದೆ ಒಂದೇ ಒಂದು ದಿನ ಕೂಡ ಅಕಾರಕ್ಕಾಗಿ ಹಂಬಲಿಸಲಿಲ್ಲ. ಅನೇಕ ಕಾರಣಕ್ಕಾಗಿ ನನಗೆ ಮಂತ್ರಿ ಸ್ಥಾನ ಕೊಡಲಿಲ್ಲ, ಮಲೆನಾಡಿನ ಭಾಗಕ್ಕೆ ಒಂದು ಮಂತ್ರಿಸ್ಥಾನ ಬೇಕಿತ್ತು. ಆ ಭಾಗಕ್ಕೆ ಮಂತ್ರಿಸ್ಥಾನ ಕೊಟ್ಟಿದ್ದರೆ ಒಂದಿಷ್ಟು ಕೆಲಸ ಆಗುತ್ತಿತ್ತು ಎಂದರು,
ಪಕ್ಷಕ್ಕೆ ಒಳ್ಳೆಯದಾದರೆ, ನನ್ನ ಬೆಂಬಲ ಖಂಡಿತ ಇದೆ . ಇಲ್ಲಿಯವರೆಗೂ ಪಕ್ಷ ಹೇಳಿದಂತೆ ಕೇಳಿದ್ದೇನೆ. ಹೆಚ್.ಡಿ. ಕುಮಾರಸ್ವಾಮಿ ಅವರ ಅಣತಿಯಂತೆ ನಾನು ಚರ್ಚೆ ಮಾಡಿ ಈ ನಿರ್ಧಾರಕ್ಕೆ ಬಂದೆ. ಅದರೆ, ಸಂಪೂರ್ಣ ಕೆಲಸ ಮಾಡಲಿಕ್ಕೆ ಆಗಲಿಲ್ಲ ಎಂಬ ನೋವು ನಮ್ಮನ್ನು ಕಾಡುತ್ತೆ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಎಚ್‌ಕೆ ಕುಮಾರಸ್ವಾಮಿ ಅವರು ಸಚಿವ ಸ್ಥಾನಕ್ಕೆ ಭಾರೀ ಪೈಪೋಟಿ ಮಾಡಿದ್ದರು. ಆದ್ರೆ, ಅವರಿಗೆ ಮಂತ್ರಿಭಾಗ್ಯ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿತ್ತು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟದ್ದ ಇಬ್ರಾಹಿಂ
ಹೌದು...ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಹುದ್ದೆ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ, ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಕುಮಾರಸ್ವಾಮಿ ಅವರು ಹಲವು ಬಾರಿ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಆದ್ರೆ, ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡ ಅವರು ಸದ್ಯಕ್ಕೆ ಅಸಾಧ್ಯ. ಮುಂದೆ ನೋಡೋಣ ಎನ್ನುವ ಭರವಸೆ ನೀಡಿದ್ದರು. ಇದೀಗ ಅಂತಿಮವಾಗಿ ಇಬ್ರಾಹಿಂಗೆ ಅಧ್ಯಕ್ಷ ಪಟ್ಟಕಟ್ಟಲು ತೀರ್ಮಾನವಾಗಿದೆ.