* ಕುರ್ಚಿಗಾಗಿ ಏನು ಬೇಕಾದ್ರೂ ಮಾಡುವ ಡಿಕೆಶಿ
* 2023 ರ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವೇ ಪ್ರಬಲ ಸ್ಪರ್ಧಿ
* ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಹೊಸ ನಾಟಕ ಸೃಷ್ಟಿಸಬಹುದು
ದಾವಣಗೆರೆ(ಏ.15): ಎದುರಾಳಿಗಳ ವಿರುದ್ಧ ರಣರಂಗದಲ್ಲಿ ಹೋರಾಡುವ ಬದಲು "ವ್ಯವಸ್ಥಿತ ಜಾಲ" ರೂಪಿಸಿಕೊಂಡು ಖೆಡ್ಡಾಕ್ಕೆ ಬೀಳಿಸಲು ನುರಿತ ತಂಡವನ್ನು ಕಟ್ಟಿಕೊಂಡಿದ್ದಾರೆ. ಹಗಲು ಕಂಡು ಇರುಳಿನಲ್ಲಿ ಬಾವಿಗೆ ಬೀಳಬೇಡಿ ಸಿದ್ದರಾಮಯ್ಯನವರೇ. ಕುರ್ಚಿಗಾಗಿ ಏನು ಬೇಕಾದರೂ ಮಾಡುವ ಜಾಯಮಾನ ನಮ್ಮದು ಎಂಬುದನ್ನು "ಬಂಡೆಯ " ಇತಿಹಾಸವೇ ಹೇಳುತ್ತದೆ. ಮುಂದಿನ ದಿನಗಳಲ್ಲಿ ಇದು ನಿಮ್ಮ ಕೊರಳಿಗೆ ಉರುಳಾದರೂ ಅಚ್ಚರಿಯಿಲ್ಲ. ಬೇಗ ಎಚ್ಚೆತ್ತುಕೊಳ್ಳಿ ಅಂತ ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ(MP Renukacharya) ಎಚ್ಚರಿಕೆಯ ಗಂಟೆ ರವಾನಿಸಿದ್ದಾರೆ.
ಇಂದು(ಶುಕ್ರವಾರ) ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮಾಡುವ ಮೂಲಕ ಡಿಕೆಶಿ(DK Shivakumar) ಬಗ್ಗೆ ಹುಷಾರಾಗಿರಿ ಸಿದ್ದರಾಮಯ್ಯನವರಿಗೆ(Siddaramaiah) ಅಂತ ಎಚ್ಚರಿಕೆ ನೀಡಿದ್ದಾರೆ.
undefined
2023 ರ ಚುನಾವಣೆಯಲ್ಲಿ ಆ ಮಹಾನ್ ನಾಯಕನಿಗೆ ನೀವೇ ಪ್ರಬಲ ಸ್ಪರ್ಧಿ. ನಿಮಗೆ ಗೊತ್ತಿಲ್ಲದಂತೆಯೇ ಮುಗಿಸಲು ಯಾವುದಾದರೂ ಹೊಸ ನಾಟಕ ಸೃಷ್ಟಿಸಬಹುದು. ಅಧಿಕಾರಕ್ಕಾಗಿ ಏನನ್ನೂ ಮಾಡದೆ ಬಿಡುವವರಲ್ಲ. ಸ್ವಯಂಘೋಷಿತ "ಡೈನಾಮಿಕ್ ಬಂಡೆ" ಮಾನ್ಯ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯನವರೇ ನಿಮ್ಮ ಪಕ್ಷದಲ್ಲೇ ಕೂತಿರುವ "ಆ ಮಹಾನ್ ನಾಯಕ" ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ ತೋಡಬಹುದು. ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು! ಅಧಿಕಾರದ ಹಪಾಹಪಿತನಕ್ಕೆ ಬಿದ್ದಿರುವ "ಬಂಡೆ" ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ ಅಂತ ಸಿದ್ದುಗೆ ಎಚ್ಚರಿಕೆ ನೀಡಿದ್ದಾರೆ.
ಮಾನ್ಯ ಪ್ರತಿಪಕ್ಷದ ನಾಯಕರಾದ ನವರೇ ನಿಮ್ಮ ಪಕ್ಷದಲ್ಲೇ ಕೂತಿರುವ " ಆ ಮಹಾನ್ ನಾಯಕ " ಮುಂದೊಂದು ದಿನ ನಿಮಗೂ ಕೂಡ ಖೆಡ್ಡಾ
ತೋಡಬಹುದು. ಬೆನ್ನಿಗೆ ಚೂರಿ ಇರಿಯುವ ಮೊದಲು ಯಾವುದಕ್ಕೂ ಹುಷಾರು!
ಅಧಿಕಾರದ ಹಪಾಹಪಿತನಕ್ಕೆ ಬಿದ್ದಿರುವ
"ಬಂಡೆ" ಈಗ ಎಲ್ಲೋ ಕುಳಿತು ಇನ್ನೆಲ್ಲೋ ಬಾಂಬ್ ಸಿಡಿಸುವ ಕಲೆಯನ್ನು ರಕ್ತಗತ ಮಾಡಿಕೊಂಡಿದೆ
ಕಾಂಗ್ರೆಸ್(Congress) ಪಕ್ಷದ ನಾಯಕರುಗಳೇ ದೂರುದಾರರು, ತನಿಖಾಧಿಕಾರಿಗಳು, ವಿಚಾರಣಾಧಿಕಾರಿಗಳು, ನ್ಯಾಯಾಧೀಶರು ಆಗುವುದು ಬೇಡ. ನಮ್ಮ ಸರ್ಕಾರ ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸಲು ಸಿದ್ಧವಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು. ನಿಮ್ಮ ಕಾಲದಲ್ಲಿ ಭ್ರಷ್ಟಾಚಾರದ(Corruption) ಗಂಗೋತ್ರಿಯೇ ಹರಿದಾಡಿತ್ತು ಎಂಬುದನ್ನು ಮರೆಯಬೇಡಿ ಅರ್ಕಾವತಿ ರಿಡೋ, ಬಿಡಿಎ(BDA), ಬಿಬಿಎಂಪಿ(BBMP), ಪಾವಗಡ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ ಸೇರಿದಂತೆ ಹತ್ತು ಹಲವು. ನಿಮ್ಮ ಪಕ್ಷದ ಕಚೇರಿಯಲ್ಲೇ "ಪರ್ಸೆಂಟೇಜ್ ಜನಕನ" ಅಸಲಿ ಬಣ್ಣವನ್ನು ತುಂಬಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ಇಬ್ಬರು ಬಟಾಬಯಲು ಮಾಡಿದ್ದರು. ಒಬ್ಬರಿಗೆ ಪಕ್ಷದಿಂದ ಉಚ್ಛಾಟನೆ, ಮತ್ತೊಬ್ಬರಿಗೆ ಪಕ್ಷದ ಉಪಾಧ್ಯಕ್ಷ ಸ್ಥಾನ. DYSP ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್ ರನ್ನು ಬಂಧಿಸಿ ವಿಚಾರಣೆ ನಡೆಸಲು ಕಾಂಗ್ರೆಸ್ ಸರ್ಕಾರ ಸೂಚನೆ ಅನುಮತಿ ಕೊಟ್ಟಿದ್ದರೆ. ನಿಮ್ಮ ಆಹೋರಾತ್ರಿ ಕಪಟ ನಾಟಕದ ಧರಣಿಗೆ ಅರ್ಥ ಬರುತ್ತಿತ್ತು ಅಲ್ಲವೇ ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೇ? ಅಂತ ಪ್ರಶ್ನೆ ಮಾಡಿದ್ದಾರೆ
ಕೆ.ಜೆ. ಜಾರ್ಜ್(KJ George) ಅವರು ಆರೋಪಿ ಸ್ಥಾನದಲ್ಲಿದ್ದಾಗ ಸಿಬಿಐ(CBI) ಅವರನ್ನು ಬಂಧಿಸಿತ್ತೇ.?. ಅವರು, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಮಡಿಕೇರಿಯ ಜಿಲ್ಲಾ ನ್ಯಾಯಾಲಯ ಎಫ್‌ಐಆರ್(FIR) ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಪೊಲೀಸರಿಗೆ(Police) ಆದೇಶ ಕೊಟ್ಟ ನಂತರವೇ ಎಂಬುದನ್ನು ಮಾನ್ಯ ಸಿದ್ದರಾಮಯ್ಯನವರೇ ಜನತೆಯ ಮುಂದೆ ಬಾಯಿಬಿಡಿ ಅಂತ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.